ನನ್ನ ವಿದ್ಯಾರ್ಥಿಯ ಕಥೆ

                                                               ಕಥೆ


ನನಗದು ಹೊಸ ವೃತ್ತಿ ಕಲಿಸುವ ಹುಮ್ಮಸ್ಸು. ಪುಟ್ಟ ಪುಟ್ಟ ತಲೆಗಳಿಗೆ ಹೊಸ ವಿಷಯಗಳನ್ನು ತುಂಬುವ ಬಯಕೆ. ಇಷ್ಟೆಲ್ಲಾ ಕನಸುಗಳನ್ನು ಹೊತ್ತು ನಡೆದೇ ಕುರುಬಗಟ್ಟಿ ಎಂಬ ಶಾಲೆಯ ಕಡೆಗೆ ಎಲ್ಲಿನೋಡಿದರಲ್ಲಿ ಮಕ್ಕಳ ಗುಂಪು, ಮುಗ್ಧ ನಗು ಮನಸಿಗೆ ಮುದ ನೀಡಿತ್ತು. ಅಂತೂ ಒಳ್ಳೆಯ ವೃತ್ತಿ ಆಯ್ದುಕೊಂಡೆ ಎಂಬ ತೃಪ್ತಿಯ ನಗು ನನ್ನ ಮುಖದ ಮೇಲೆ ಅರಳಿತ್ತು.


 ಮೊದಲ ದಿನ ಮಕ್ಕಳಿಗೆಲ್ಲಾ ಆಶ್ಚರ್ಯ ಯಾರು ಹೊಸದಾಗಿ ಬಂದಿದ್ದಾರಲ್ಲ ಎಂದು ಅವರ ಶಿಕ್ಷಕರು ಪರಿಚಯ ಮಾಡಿಕೊಟ್ಟ ಮೇಲೆಯೇ ಅವರಿಗೆ ಅರಿವಾಗಿದ್ದು ಹೊಸದಾಗಿ ಬಂದ ಶಿಕ್ಷಕಿಯೆಂದು. ಮೊದಲ ದಿನ ಅವರೊಂದಿಗೆ ಆಟ ಅವರನ್ನು ನಮ್ಮತ್ತ ಸೆಳೆಯುವ ಪ್ರಯತ್ನ ಯಶಸ್ವಿಯಾಗಿ ಸಾಗಿತ್ತು. ಹೀಗೆ ದಿನಗಳು ಸಾಗಿತ್ತು ಮಕ್ಕಳಿಗೆ ಆಟದ ಜೊತೆಗೆ ಆಟವನ್ನು ಕಲಿಸುತ್ತಾ ದಿನಗಳು ಸಾಗಿದ್ದವು.

 ಒಂದು ದಿನ ಒಬ್ಬ ಹುಡುಗ ಟೀಚರ್ ನಮಸ್ತೆ ಇಂದ ಎಂದೂ ನೋಡಿರದ ಹೊಸಮುಖ ಅವನ ಮುಕ್ತ ನಗು ತುಂಬಾ ಇಷ್ಟವಾಗಿತ್ತು. ಯಾರೆಂದು ವಿಚಾರಿಸಿದಾಗ ತಿಳಿದದ್ದು ಅವನದು ಶಾಲೆಗೆ ಹೊಸ ಅಡ್ಮಿಶನ್ ಎಂದು ಮತ್ತು ಅವನಿಗೆ ನಾನೇ ವರ್ಗ ಶಿಕ್ಷಕಿ ಎಂದು.


ಒಂದು ಬಾರಿ ಕ್ಲಾಸಿನಲ್ಲಿ ಪಾಠ ಮಾಡುತ್ತಿರುವಾಗ ಮಕ್ಕಳ ಗದ್ದಲ ಜೋರಾಗಿತ್ತು. ನನ್ನ ಸಹನೆಯೂ ಮೀರಿತ್ತು. ಮಕ್ಕಳ ಮೇಲೆ ಮುನಿಸಿಕೊಂಡು ನೀವು ಗಲಾಟೆ ನಿಲ್ಲಿಸುತ್ತೀರಾ ನಾನು ಕ್ಲಾಸ್ ಬಿಟ್ಟು ಹೊರಗಡೆ ಹೋಗಬೇಕಾ ಎಂದು ಕೇಳಿದಾಗ ಹುಡುಗ ಎದ್ದುನಿಂತು ಸಾರೀ ಟೀಚರ್ ನಾವು ಸುಮ್ಮನೆ ಕುಳಿತುಕೊಳ್ಳುತ್ತೇವೆ ಎಂದು ಮುಗ್ಧ ಧ್ವನಿಯಲ್ಲಿ ನನಗೆ ಅದು ತುಂಬಾ ಇಷ್ಟವಾಗಿತ್ತು.ನಂತರ ಕ್ಲಾಸ್ ಮುಗಿದ ಮೇಲೆ ಆ ಗುಡುಗಿನ ಬಗ್ಗೆ ತಿಳಿದುಕೊಳ್ಳಬೇಕೆಂದು ನಿಸಿ ಅವನನ್ನು ಕರೆದು ಮತ್ತು ಅವನ ಬಗ್ಗೆ ವಿಚಾರಿಸಿದಾಗ ಗೊತ್ತಾಯಿತು ಅವನ ಹೆಸರು ನಾಗರಾಜ್ ಮತ್ತು ಅವನು ಇರುವುದು ಅವನ ಅತ್ತೆಯ ಮನೆಯಲ್ಲಿ ಎಂದು ಅವನ ಅಪ್ಪ ಅಮ್ಮ ಮತ್ತು ತಂಗಿ ಬೇರೆ ಊರಲ್ಲಿದ್ದಾರೆ ಗೊತ್ತಾಯ್ತು ಅವನು ಕಳಿಸಿದೆ.


ಒಂದು ಬಾರಿ ಕ್ಲಾಸಿನಲ್ಲಿ ಒಂದು ಚಿತ್ರ ಬಿಡಿಸುವ ಚಟುವಟಿಕೆ ನೀಡಿದ್ದೆ.ನಾನು ಹೇಳಿದ ರೀತಿಯಲ್ಲಿ ಯಾವ ಮಕ್ಕಳು ಬಿಡುತ್ತಿರಲಿಲ್ಲ ಹಾಗಾಗಿ ತ್ತು ಹಾಗೆಯೇ ಎಲ್ಲ ಮಕ್ಕಳು ಚಿತ್ರಗಳು ತ್ತಿರುವುದನ್ನು ಗಮನಿಸುತ್ತಾ ಹೋದೆ ಅದರಲ್ಲಿ ಒಂದು ಚಿತ್ರ ನನ್ನ ಗಮನ ಸೆಳೆದಿತ್ತು. ತುಂಬಾ ಚೆನ್ನಾಗಿ ಬೆಳೆಸಿದ್ದ ಆಕಾಶ, ಚಂದ್ರ, ನಕ್ಷತ್ರ ಎಲ್ಲವನ್ನು ಕೂಡ. ವಿದ್ಯಾರ್ಥಿ ನೋಡಿ ಆಶ್ಚರ್ಯವಾಯಿತು. ನಾಗಾರ್ಜುನಗೆ ಚಿತ್ರಕಲೆಯಲ್ಲಿ ಆಸಕ್ತಿ ಇದೆಯಾ ಎಂದೇ ಅವನು ಏನು ಮಾತನಾಡಲೇ ಇಲ್ಲ. ಅವನ ಪಕ್ಕದಲ್ಲಿರುವ ಮಕ್ಕಳು ಟೀಚರ್ ಅವನು ತುಂಬಾ ಚೆನ್ನಾಗಿ ಚಿತ್ರ ಬಿಡಿಸುತ್ತಾನೆ ಎಂದರು. ನಂತರ ನನಗೆ ಗೊತ್ತಾಗಿತ್ತು ಅವನಿಗೆ ಅದರಲ್ಲಿ ತುಂಬಾ ಆಸಕ್ತಿ ಇದೆ ಎಂದು. ಮಾರನೇ ದಿನ ಎಲ್ಲ ಮಕ್ಕಳಿಗೂ ಪಾಠ ಓಡಿಸುತ್ತಿದ್ದೆ ಕೆಲವು ಮಕ್ಕಳು ಸರಾಗವಾಗಿ ಓದಿದರೆ ಕೆಲವರು ತಡವರಿಸುತ್ತಿದ್ದ ರು. ಈಗ ನಾಗರಾಜನ ಸರದಿ ಬಂದಿತ್ತು. ಓದು ಎಂದು ಹೇಳಿದೆ ಸುಮ್ಮನೆ ನಿಂತುಕೊಂಡ ಮತ್ತೆ ಹೇಳಿದೆ ಓದು ಎಂದು ಅವನು ನನಗೆ ಓದಲು ಬರುವುದಿಲ್ಲ ಟೀಚರ್ ಎಂದ.ನನಗೆ ತುಂಬಾ ಬೇಸರವಾಗಿತ್ತು ಮಕ್ಕಳನ್ನೆಲ್ಲ ಇನ್ನೊಮ್ಮೆ ವಿಚಾರಿಸಿದೆ ಅವನು ಓದುವನು ಇಲ್ಲವೋ ಎಂದು ಮಕ್ಕಳೆಲ್ಲರೂ ಇಲ್ಲ ಎಂದು ತಲೆಯಾಡಿಸಿದರು ಅಂತರವನ್ನು ಕರೆದು ನಾನು ಕೆಲವೊಂದು ಶಬ್ದಗಳನ್ನು ಹೇಳಿದೆ ಕಷ್ಟಪಡುತ್ತಿದ್ದ ಮುಗಿದ ಮೇಲೆ ಅವನಿಗೆ ನನ್ನನ್ನು ಭೇಟಿಯಾಗುವಂತೆ ಹೇಳಿ ಮಕ್ಕಳಿಗೆಲ್ಲ ಹೋಂವರ್ಕ್ ನೀಡಿದೆ.




ಕ್ಲಾಸ್ ಮುಗಿದ ಮೇಲೆ ನಾಗೇಶನನ್ನು ಬಂದು ಭೇಟಿಯಾದ ನಾನು ಅವನಿಗೆ ದಿನಾಲು ಕೆಲವೊಂದು ಹೋಂವರ್ಕ ಕೊಡುತ್ತೇನೆ ಮಾಡು ಎಂದು ಹೇಳಿದೆ ಅವನು ತಲೆಯಾಡಿಸಿದ ನೋಟ್ ಪುಸ್ತಕ ತರಿಸಿಕೊಂಡು ಅವನಿಗೆ ಯಾವ ಹಂತದಲ್ಲಿ ಕೊಡಬೇಕೆಂದು ತಿಳಿದುಕೊಂಡು ನಂತರ ಅವನಿಗೆ ಪ್ರತಿದಿನವೂ ಇದನ್ನು ಚಾಚೂ ತಪ್ಪದೆ ನನಗೆ ಮಾಡಿಕೊಂಡು ಬಂದು ವರದಿ ಒಪ್ಪಿಸಬೇಕೆಂದು ಹೇಳಿದ ಕೆಲಸವನ್ನು ಮಾಡುತ್ತಿದ್ದ ಮತ್ತು ಅವನು ಬಿಡಿಸಿದ ಚಿತ್ರಗಳನ್ನು ತಂದು ತೋರಿಸುತ್ತಿದ್ದ ನೋಡಿದಾಗ ಅವರಿಗೆ ತುಂಬ ಆಸಕ್ತಿ ಇದೆ ಎಂದು ಅರಿವಾಯಿತು.ಹೀಗೆ ದಿನಗಳು ಕಳೆಯುತ್ತಿದ್ದವು ಅವನು ನಿಧಾನವಾಗಿ ಓದಲು ಕಲಿಯುತ್ತಿದ್ದ ಮತ್ತು ನಾನು ತೆಗೆದುಕೊಂಡ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ತೆಗೆಯಲು ಶುರು ಮಾಡಿದ.

ಶಾಲೆಯಲ್ಲಿ ಗಾಂಧೀ ಜಯಂತಿ ಪ್ರಯುಕ್ತ ಚಿತ್ರಕಲೆ ಸ್ಪರ್ಧೆ ಏರ್ಪಡಿಸಿದ್ದೆವು ಅದಕ್ಕಾಗಿ ಎಷ್ಟು ಮಕ್ಕಳು ಭಾಗವಹಿಸುತ್ತಾರೆಂದು ಮಕ್ಕಳ ಹೆಸರನ್ನು ತೆಗೆದುಕೊಂಡಿದ್ದರು ಭಾಗವಹಿಸಿದ್ದಾರೆ ಎಂದು ಕೇಳಿದಾಗ ಕೆಲವು ಮಕ್ಕಳು ಎದ್ದುನಿಂತರು ನಾಗರಾಜ ಕಡೆಗೆ ನೆಟ್ಟಿತ್ತು ಅವನು ಭಾಗವಹಿಸಲು ಹೆಸರು ನಮೂದಿಸಿ ಇರಲಿಲ್ಲ ಕಾರಣವನ್ನು ಗದರಿಸಿದಾಗ ಅಳಲು ಶುರು ಮಾಡಿದ್ದ . ಅವರನ್ನು ಸಮಾಧಾನಿಸಿ ಕೇಳಿದಾಗ ಹೇಳಿದ  ತನಗೆ ಭಾಗವಹಿಸಲು ಭಯ ವೆಂದು ಹೇಳಿದ. ನಂತರ ಮನೆಗೆ ಡೈರಿ ಹೇಳಿ ಮನವೊಲಿಸಿ ಭಾಗವಹಿಸಲು ಒಪ್ಪಿಸಿದ್ದೆ ಆ ದಿನ ಬಂದೇಬಿಟ್ಟಿತು ಎಲ್ಲ  ಮಕ್ಕಳು ಚಿತ್ರವನ್ನು ಬಿಡಿಸಲು ಶುರುಮಾಡಿದ್ದರು ನಾಗರಾಜ ಭಯದಿಂದ ನಾನು ಹೋಗುವುದಿಲ್ಲ ನಡೆಯುತ್ತಾ ಟೀಚರ್ ಎಂದು ಕೇಳಿದ ಹೋಗೆಂದು ಸ್ವಲ್ಪ ಗಟ್ಟಿ ದನಿಯಲ್ಲಿ ಹೇಳಿದೆ. ನಂತರ ಅವನ ಹೋಗಿ ಚಿತ್ರ ಬಿಡಿಸಲು ಶುರುಮಾಡಿದ ನಂತರ ಎಲ್ಲ ಡ್ರಾಯಿಂಗ್ ಗಳನ್ನು ಸಂಗ್ರಹಿಸಿಟ್ಟುಕೊಂಡು ಬೇರೆ ಶಿಕ್ಷಕರು ಅದನ್ನು ಯಾರು ಪ್ರಥಮ ಎಂದು ನಿರ್ಧರಿಸಿದ್ದರು.ನಾನು ಕುತೂಹಲ ತಡೆಯಲಾಗದೆ ಹೋಗಿ ಕೇಳಿದಾಗ ನನಗೆ ತುಂಬಾ ಸಂತೋಷವಾಗಿತ್ತು ಮತ್ತು ನಾನು ನಾಗರಾಜನನ್ನು ಮನವೊಲಿಸಬೇಕು ಸಾರ್ಥಕವಾಯಿತೆಂದು ಯಾಕೆಂದರೆ ಅವರು ಚಿತ್ರಕ್ಕೆ ಪ್ರಥಮ ಬಹುಮಾನ ಬಂದಿತ್ತು ಪ್ರಥಮ ಬಹುಮಾನವಾಗಿ ಅವನಿಗೆ ಸ್ಕೂಲ್ ಬ್ಯಾಗ್ ಸಿಕ್ಕಿತ್ತು. ಅವನು ತುಂಬಾ ಸಂತೋಷಗೊಂಡ ಮತ್ತು ನನ್ನ ಬಳಿಬಂದು ಥ್ಯಾಂಕ್ಯೂ ಟೀಚರ್ ಎಂದ. ಆಗ ನನಗೆ ತುಂಬಾ ಸಂತೋಷವಾಗಿತ್ತು.


ಒಂದು ದಿನ ಶಾಲೆಯಲ್ಲಿ ನಾಗರಾಜ ಹುಟ್ಟಿದ ಹಬ್ಬ ಆಚರಿಸಲು ಅವನ ಸ್ನೇಹಿತರೆಲ್ಲರೂ ತಯಾರಿ ಮಾಡಿಕೊಂಡಿದ್ದರು ನಾನು ತರಗತಿಗೆ ಹೋದ ತಕ್ಷಣ ವಿಶ್ ಮಾಡಿದೆ ನಂತರ ಅವನು ಕೇಕ್ ಕತ್ತರಿಸಿದ ಆದರೆ ಶಾಲೆಯಲ್ಲಿ ಆ ತರಹದ ಹುಟ್ಟುಹಬ್ಬದ ಆಚರಣೆ ಮಾಡುವಂತಿರಲಿಲ್ಲ. ಮಕ್ಕಳೆಲ್ಲಾ ಹೊಸ ಹುಮ್ಮಸ್ಸಿನಿಂದ ಮಾಡಿದ್ದರು ನಂತರ ಶಾಲೆಯ ಶಿಕ್ಷಕರು ಬಂದು ಇನ್ನೊಮ್ಮೆ ಈ ರೀತಿ ಮಾಡಬಾರದು ಎಂದು ಹೇಳಿದ್ದರು ಅಷ್ಟಕ್ಕೆ ಸುಮ್ಮನಾಗದ ಮಕ್ಕಳು ನಾಗರಾಜನನ್ನು ಕರೆದುಕೊಂಡು ಹೋಗಿ ತಲೆಯ ಮೇಲೆ ಮೊಟ್ಟೆ ಹಾಕಿ ಆಚರಣೆ ಮಾಡಿದ್ದರು. ಇದು ಶಿಕ್ಷಕರಿಗೆ ಗೊತ್ತಾಗಿ ಎಲ್ಲಾ ಮಕ್ಕಳಿಗೂ ಹೊಡೆದಿದ್ದರು ಮತ್ತು ನಾಗರಾಜನಿಗೆ ನಿನ್ನ ಅಪ್ಪ ಅಮ್ಮನನ್ನು ಕರೆದುಕೊಂಡು ಬರುವಂತೆ ತಾಕೀತು ಮಾಡಿದ್ದರು ಅವನು ಬಂದು ಅಳುತ್ತಾ ನನ್ನ ಮುಂದೆ ಹೇಳಿದ ಟೀಚರ್ ನಾನು ಇರುವುದು ಅತ್ತೆ ಮನೆಯಲ್ಲಿ ಅವರು ಮೊದಲೇ ನನಗೆ ಹಿಂಸೆ ನೀಡುತ್ತಾರೆ ಇನ್ನು ಈ ತರಹದ ವಿಷಯ ಗೊತ್ತಾದರೆ ನನಗೆ ತುಂಬಾ ಕಷ್ಟ ನೀಡುತ್ತಾರೆಂದು ನನಗೆ ಬೇಸರವೆನಿಸಿ ನಾನು ಶಿಕ್ಷಕರೊಂದಿಗೆ ಮಾತನಾಡುತ್ತೇನೆ ನೀನು ಕ್ಲಾಸ್ಗೆ ಹೋಗೆಂದು ಕಳುಹಿಸಿದೆ.


ನಾನು ಹೋಗಿ ಶಿಕ್ಷಕರ ಜೊತೆಗೆ ಮಾತನಾಡುವ ಅಷ್ಟರಲ್ಲಿ ಅವರು ಅವನ ಮನೆಗೆ ಫೋನ್ ಮಾಡಿ ಈ ವಿಷಯದ ಬಗ್ಗೆ ಹೇಳಿಬಿಟ್ಟಿದ್ದರು ನಾನು ಅವರಿಗೆ ತುಂಬಾ ಚಿಕ್ಕ ವಿಷಯವನ್ನು ಈ ರೀತಿ ಮಾಡುವುದು ಬೇಡವಾಗಿತ್ತು ಸರ್ ಎಂದೆ ಅದಕ್ಕೆ ಅವರು ಇವರಿಗೆ ಬುದ್ಧಿ ಕಲಿಸಬೇಕು ಬಿಡಿ ಮೇಡಂ ಎಂದರು ನಂತರ ನಾನು ಕ್ಲಾಸಿಗೆ ತೆರಳಿದೆ ಕ್ಲಾಸಿನಲ್ಲಿ ನಾಗರಾಜನ ಮುಖವನ್ನು ನೋಡಲಾಗುತ್ತಿರಲಿಲ್ಲ ಅವನು ತುಂಬಾ ಬೇಸರಗೊಂಡಿದ್ದ ಒಬ್ಬರು ಶಿಕ್ಷಕರು ಬಂದು ಅವನನ್ನು ಮನೆಗೆ ಕಳುಹಿಸಿ ಮೇಡಂ ಅವನ ನಾಟಕ ಜಾಸ್ತಿ ಆಗಿದೆ ಎಂದರು ಅವನು ಅಳಲು ಶುರುಮಾಡಿದ ನಾನು ಸಮಾಧಾನಿಸಿದೆ . ಸರ್ ಹೋಗ್ಲಿಬಿಡಿ ಚಿಕ್ಕ ಹುಡುಗ ಎಂದೆ ಅವರು ನನ್ನ ಮಾತನ್ನು ಕೇಳಲಿಲ್ಲ ಕಳಿಸಿ ಮೇಡಂ ಎಂದರು ನಾನು ಮರು ಮಾತನಾಡಲು ಅವಕಾಶವೇ ನೀಡಲಿಲ್ಲ ಅದಕ್ಕಾಗಿ ನಾನು ನನ್ನ ಕ್ಲಾಸ್ ಮುಗಿದ ಮೇಲೆ ಕಳಿಸುವೆ ಎಂದೆ. ಆ ಶಿಕ್ಷಕರು ಹೋದರು ನಂತರ ನಾನು ಆ ಹುಡುಗನನ್ನ ಸಮಾಧಾನಿಸಿ ಪಾಠ ಮುಂದುವರೆಸಿದೆ. ಪಾಠ ಮಾಡುತ್ತಿರುವಾಗ ಹುಡುಗನ ಅತ್ತೆ ಬಂದು ಆ ಹುಡುಗನನ್ನು ಕಳಿಸಿ ಎಂದಳು ನಾನು ಕ್ಲಾಸ್ ಮುಗಿದ ಮೇಲೆ ಕಳಿಸುವ ಎಂದರೂ ಕೂಡ ಅವಳು ಅವನತ್ತ ಹೋಗಿ ಅವನನ್ನು ಎಳೆದುಕೊಂಡು ಹೊಡೆಯಲಾರಂಭಿಸಿದರು ಮತ್ತು ಅವನನ್ನು ಬೈ ಯಲು ಶುರು ಮಾಡಿದಳು. ನಾನು ಎಷ್ಟು ಹೇಳಿದರೂ ಕೇಳಲಿಲ್ಲ ಅವನನ್ನು ಹೊಡೆಯುತ್ತಲೇ ಮನೆಗೆ ಕರೆದುಕೊಂಡು ಹೋದಳು ನನಗೆ ತುಂಬಾ ದುಃಖವಾಗಿತ್ತು ನನ್ನ ಮುಂದೆಯೇ ಅಷ್ಟು ಹೊಡೆದಿದ್ದಳು ಮನೆಗೆ ಕರೆದುಕೊಂಡು ಹೋಗಿ ಏನು ಮಾಡುವರು ಎಂದು ಭಯವಾಗಿತ್ತು.

 ನಂತರ ನಾನು ನಮ್ಮ ಮೇಡಂ ಗೆ ಕಾಲ್ ಮಾಡಿ ಏನು ಮಾಡಬೇಕೆಂದು ವಿಚಾರಿಸಿದೆ ನಂತರ ಅವರು ಅವರ ಮನೆಗೆ ಹೋಗಿ ಬನ್ನಿ ಎಂದು ಹೇಳಿದಾಗ ಬೇಗ ಅವರ ಮನೆಗೆ ಹೋಗಿ ಆ ಹುಡುಗನನ್ನು ಹೊಡೆಯಬೇಡಿ ಅವನದೇನೂ ತಪ್ಪಿಲ್ಲ ಎಂದು ಅವರ ಮನೆಯವರಿಗೆ ತಿಳಿಸಿ ಹೇಳಿದ್ದೆ ಆಗವರು ಸರಿ ಎಂದು ತಲೆಯಾಡಿಸಿದರು . 

ನಂತರ ನಾಗರಾಜನನ್ನು ಹೊರಗೆ ಕರೆದು ಅವರೇನಾದರೂ ನೋಡಿದರೆ ನನಗೆ ಹೇಳು ಎಂದು ನನ್ನ ಫೋನ್ ನಂಬರನ್ನು ಅವನಿಗೆ ಕೊಟ್ಟೆ. ಅವನು ಅಳುತ್ತಾ ಟೀಚರ ನೀವು ಬರದೇ ಹೋಗಿದ್ದರೆ ಇನ್ನೂ ಹೊಡೆಯುತ್ತಿದ್ದರು ಎಂದು ಹೇಳಿದ್ದ ಅವನನ್ನು ಸಮಾಧಾನ ಮಾಡಿ ಅಲ್ಲಿಂದ ಹೊರಟೆ.ಮಾರನೇ ದಿನ ನಾಗರಾಜ್ ಸ್ಕೂಲಿಗೆ ಬಂದಾಗ ಮತ್ತೆ ವಿಚಾರಿಸಿದೆ ಮನೆಯಲ್ಲಿ ಏನಾದರೂ ಆಯ್ತಾ ಎಂದು ಅವನು ಇಲ್ಲ ಎಂದು ತಲೆಯಾಡಿಸಿದ ಮತ್ತು ನಿನ್ನೆ ಬಂದಿದ್ದಕ್ಕೆ ಎಂದ. ಕ್ಲಾಸಿನಲ್ಲಿ ಎಲ್ಲ ಮಕ್ಕಳಿಗೂ ಬುದ್ಧಿ ಹೇಳಿದ್ದೆ ಇನ್ನೊಮ್ಮೆ ಈ ತರಹ ಮಾಡಬಾರದೆಂದು ಎಲ್ಲ ಮಕ್ಕಳು ತಲೆಯಾಡಿಸಿದರು.


ಈ ಘಟನೆಯಿಂದ ನಾಗ ತುಂಬಾ ಬದಲಾವಣೆ ಹೊಂದಿದ್ದ ಸ್ನೇಹಿತರ ಜೊತೆ ಸೇರುವುದನ್ನು ಕಡಿಮೆ ಮಾಡಿದ್ದ ಮತ್ತು ಓದುವುದರ ಕಡೆಗೆ ಜಾಸ್ತಿ ಲಕ್ಷ ವಹಿಸಿದ್ದ ಅವನಿಗೆ ಏನಾದರೂ ತಿಳಿಯದಿದ್ದರೆ ಬಂದು ನನ್ನನ್ನು ಕೇಳುತ್ತಿದ್ದ ಮತ್ತು ಹೊಸದಾಗಿ ಏನಾದರೂ ಚಿತ್ರ ಬಿಡಿಸಿದ್ದಾರೆ ತೋರಿಸುತ್ತಿದ್ದ.ವಿಜ್ಞಾನ ದಿನದ ಪ್ರಯುಕ್ತ ಒಂದು ಸ್ಪರ್ಧೆ ಇಟ್ಟಿದ್ದೇನೆ ಅದರಲ್ಲಿ ಅವನು ಹೊಸ ಆಲೋಚನೆಯೊಂದಿಗೆ ಬಂದು ನನ್ನ ಬಳಿ ಹೇಳಿಕೊಂಡಿದ್ದ ನಾನು ಇದನ್ನು ಮಾಡುತ್ತೇನೆ ಎಂದು ಎಂದು ತಲೆಯಾಡಿಸಿದೆ ಮತ್ತು ಅವನು ಅದರಲ್ಲಿ ಬಹುಮಾನವನ್ನು ಪಡೆದಿದ್ದ.




 ಮೊದಲು ಭಾಗವಹಿಸಲು ಭಯಪಡುತ್ತಿದ್ದ ಹುಡುಗ ಈಗ ಎಲ್ಲದರಲ್ಲಿಯೂ ಭಾಗವಹಿಸಲು ಇಷ್ಟಪಡುತ್ತಾನೆ ಮತ್ತು ಓದುವುದರಲ್ಲಿ ಯೂ ಸಹ ಆಸಕ್ತಿ ತೋರಿಸುತ್ತಾನೆ ಮತ್ತು ಸರಾಗವಾಗಿ ಓದುವುದನ್ನು ಕಲಿಯುತ್ತಿದ್ದಾನೆ. ಪರೀಕ್ಷೆಯಲ್ಲಿಯೂ ಸಹ ಉತ್ತಮ ಅಂಕಗಳನ್ನು ಪಡೆಯುತ್ತಾನೆ. ನಾನು ಮೊದಲು ನೋಡಿದ ನಾಗರಾಜ ಈಗ ನೋಡುತ್ತಿರುವುದಕ್ಕೆ ತುಂಬಾ ವ್ಯತ್ಯಾಸವಿದೆ ಮೊದಲು ತುಂಬಾ ಹಿಂಜರಿಯುತ್ತಿದ್ದ ಈಗ ಎಲ್ಲದರಲ್ಲೂ ಭಾಗವಹಿಸುತ್ತಾನೆ.ತುಂಬಾ ಖುಷಿಯಾಗುತ್ತದೆ ಈ ತರಹದ ಬದಲಾವಣೆಯನ್ನು ನನ್ನ ವಿದ್ಯಾರ್ಥಿಯಲ್ಲಿ ನೋಡಿ ಇದೇ ರೀತಿ ಎಲ್ಲಾ ವಿದ್ಯಾರ್ಥಿಗಳನ್ನು ಬದಲಾಯಿಸಬೇಕೆಂಬ ಹಂಬಲವಿದೆ.




Comments

Popular posts from this blog

Vidya Poshak - Yuva Internship 2024 - Application form

Vidya Poshak Yuva Internship 2023

TPL - Teachers Premier League🏆🏆