ಅಕ್ಷರ ಅಭ್ಯಾಸ
ಅಕ್ಷರ ಅಭ್ಯಾಸ
ಒಂದನೇ ತರಗತಿಯ ವಿದ್ಯಾರ್ಥಿಗಳಿಗೆ ನಮ್ಮ ಶಾಲೆಯಲ್ಲಿ ಪ್ರಥಮವಾಗಿ ಅಕ್ಷರ ಅಭ್ಯಾಸವನ್ನು ಮಾಡಿಸಿ ಸಿಹಿಯನ್ನ ಹಂಚಿ ಶಾಲೆಗೆ ದಾಖಲು ಮಾಡಿಕೊಳ್ಳಲಾಯಿತು. ಅಕ್ಷರ ಅಭ್ಯಾಸ ಕಾರ್ಯಕ್ರಮದಲ್ಲಿ ಒಂದನೇ ತರಗತಿಯ ವಿದ್ಯಾರ್ಥಿಗಳಿಗೆ ಹಳದಿ ಕೆಂಪು ಹಾಗೂ ಬಿಳಿ ಅಕ್ಕಿಯಲ್ಲಿ ಅಕ್ಷರ ಬರೆಸುವುದರ ಮೂಲಕ ಸಾಂಕೇತಿಕವಾಗಿ ಐದು ವಿದ್ಯಾರ್ಥಿಗಳಿಂದ ಅಕ್ಷರ ಅಭ್ಯಾಸ ಕಾರ್ಯಕ್ರಮವನ್ನು ಜರುಗಿಸಿ ಎಲ್ಲ ಒಂದನೇ ತರಗತಿಯ ವಿದ್ಯಾರ್ಥಿಗಳನ್ನು ಶುಭ ಕೋರಿ ಸ್ವಾಗತಿಸಿಕೊಳ್ಳಲಾಯಿತು. ಈ ಕಾರ್ಯಕ್ರಮವು ನಮ್ಮ ಶಾಲೆಯ ಶಿಕ್ಷಕ ವೃಂದವು ವಿದ್ಯಾರ್ಥಿಗಳ ಮೇಲೆ ಇಟ್ಟಿರುವ ಕಾಳಜಿಯನ್ನ ಪ್ರತಿಬಿಂಬಿಸುವ ಉದಾಹರಣೆಯಾಗಿದೆ ಪ್ರತಿ ವಿದ್ಯಾರ್ಥಿಯ ಭವಿಷ್ಯವೂ ಉಜ್ವಲವಾಗಲಿ ಎಂಬುದು ಅವರ ಆಶಯ.
Comments
Post a Comment