ನನ್ನ ವಿದ್ಯಾರ್ಥಿ

                 ಕುರುಬಗಟ್ಟಿ ಎನ್ನುವುದು ಒಂದು ಪುಟ್ಟ ಗ್ರಾಮ ಈ ಊರಿಗೆ ನಾನು ವಿದ್ಯಾ ಪೋಷಕ ವತಿಯಿಂದ ಸಹ ಶಿಕ್ಷಕಿಯಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುರುಬಗಟ್ಟಿಯಲ್ಲಿ ಎರಡು ವರ್ಷ ಕಾರ್ಯ ನಿರ್ವಹಿಸುತ್ತಿದೆನೆ.

 ಈ ಎರಡು ವರ್ಷದಲ್ಲಿ ಹಲವಾರು ವಿದ್ಯಾರ್ಥಿಗಳಲ್ಲಿ ಬದಲಾವಣೆ ಕಂಡಿದ್ದೇನೆ ನಾನು 6ನೇ ತರಗತಿಗೆ ಗಣಿತ ಮತ್ತು ವಿಜ್ಞಾನ ಬೋಧಿಸುತ್ತೇನೆ ಹಾಗೂ ಏಳನೇ ತರಗತಿಗೆ ಇಂಗ್ಲಿಷ್ ವಿಷಯವನ್ನು ಭೋದಿಸುತ್ತೇನೆ. 

ಇದೀಗ ನಾನು 7ನೇ ತರಗತಿಯಲ್ಲಿ ಬದಲಾವಣೆಯನ್ನು ಹೊಂದಿರುವ ವಿದ್ಯಾರ್ಥಿಗಳಲ್ಲಿ  ನಾನು ಈಗ ಒಂದು ವಿದ್ಯಾರ್ಥಿಯಲ್ಲಿ ಆಗಿರುವ ಬದಲಾವಣೆ ಹೇಳಲು ಬಯಸುತ್ತೇನೆ.

ನಾನು ಏಳನೇ ತರಗತಿಗೆ ಇಂಗ್ಲಿಷ್ ವಿಷಯವನ್ನು ಭೋದಿಸುತ್ತಿದ್ದೆ ಆ ತರಗತಿಯಲ್ಲಿ 34 ವಿದ್ಯಾರ್ಥಿಗಳು ಇದ್ದರು ಅದರಲ್ಲಿ ಬೆರಳೆಣಿಕೆ ಎಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಇಂಗ್ಲಿಷ್ ಓದಲು ಮತ್ತು ಸಂಪೂರ್ಣವಾಗಿ ಬರೆಯಲು ಕಲಿತಿದ್ದರು. 

ಕೆಲವೊಂದು ವಿದ್ಯಾರ್ಥಿಗಳಿಗೆ ಅಲ್ಪಬೆಟ್ಸ್ ಕೂಡ ಬರೆಯಲು ಮತ್ತು ಓದಲು ಬರುತ್ತಿಲ್ಲ ಆದರೆ ಅದೇ ವಿದ್ಯಾರ್ಥಿಗಳಲ್ಲಿ ಒಂದು ವಿದ್ಯಾರ್ಥಿಯು ವೀರೇಶನ್ನುವ ವಿದ್ಯಾರ್ಥಿ ಅವನು ಸ್ವಲ್ಪ ಒರಟ ಮತ್ತು ತುಂಬಾನೇ ಉಡಾಳ ವಿದ್ಯಾರ್ಥಿ ಅವನಿಗೆ ಓದುವುದು ಬರೆಯುವುದಾದರೆ ಇಷ್ಟನೇ ಆಗುತ್ತಿದ್ದಿಲ್ಲ ಅವನು ಎಲ್ಲರ ಕ್ಲಾಸಿನಲ್ಲಿ ಮಾಡಿದ ಹಾಗೆ ಗಲಾಟೆ ನಗ- ಚಾಟಿಕೆ ಇದೆಲ್ಲವನ್ನು ನನ್ನ ಕ್ಲಾಸಿನಲ್ಲಿ ಕೂಡ ಮಾಡುತ್ತಿದ್ದ.


ಅವನಿಗೆ ಬರೀ ಆಟವಷ್ಟೇ ಮತ್ತು ತನ್ನ ಗೆಳೆಯರ ಜೊತೆ ಜಗಳ ಇದಷ್ಟೇ ಅವನ ಹವ್ಯಾಸವಾಗಿತ್ತು ಆದರೆ ನನ್ನ ಕ್ಲಾಸಿನಲ್ಲಿ ಮೊದಲು ಅವನು ತುಂಬಾನೇ ಗಲಾಟೆ ಮಾಡುವುದು ಮತ್ತು ಹೊಮರ್ ಕೂಡ ಮಾಡುತ್ತಿದ್ದಿಲ್ One on Call ತೆಗೆದುಕೊಂಡೆ ಕೆಲವೊಂದು ಕೊರತೆಗಳನ್ನು ನಾನು ಪಾಯಿಂಟ ಮಾಡಿದೆ ಅದೇ ರೀತಿ ಅವನಿಗೆ ಹೋಂವರ್ಕ್ ಮತ್ತು ವಿಷಯವನ್ನು ತಿಳಿಸಲು ಪ್ರಯತ್ನ ಪಟ್ಟೆ ತದನಂತರ ಆ ವಿದ್ಯಾರ್ಥಿಗೆ ಹೋಂವರ್ಕ್ ಎಲ್ಲ ಕೊಟ್ಟಾಗ ಮಾಡಿಕೊಂಡು ಬರುತ್ತಿದ್ದ ಹಾಗೆ ನಾನು ಅವನಿಗೆ ತುಂಬಾನೇ ಅಪ್ರಿಷಿಯೇಟ್ ಮಾಡುತಿದ್ದೆ ಹಾಗೆ ಅವನು ಜಾಣನಿದ್ದಾನೆ ಅಂತ ಹೇಳಿ ಕ್ಲಾಸಿನಲ್ಲಿ ಅವನಿಗೆ ಚಪ್ಪಾಳೆ ಸ್ಟಾರ್ ಇದೆಲ್ಲ ಮಾಡುವುದರ ಮೂಲಕ ಅವನನ್ನು ಖುಷಿಪಡಿಸುತ್ತಿದ್ದೆ.



ಆದ್ದರಿಂದ ಅವನಿಗೆ ನನ್ನ ವಿಷಯದಲ್ಲಿ ತುಂಬಾನೇ ಆಸಕ್ತಿ ಬರತೊಡಗಿತ್ತು ಅವನಿಗೆ ಎಬಿಸಿಡಿ ಕೂಡ ಬರುತ್ತಿದ್ದಿಲ್ಲ ಆ ನಂತರ ಅವನು ನನ್ನ ಹತ್ತಿರ ಬಂದು ಪ್ರತಿದಿನ ಇಂಗ್ಲಿಷ್ ಯಾವ ರೀತಿ ಓದಬೇಕು ಮತ್ತು ಬರೆಯಬೇಕು ಎಂದು ಕುತೂಹಲದಿಂದ ಬಂದು ತಾನಾಗಿಯೇ ಹೋಂವರ್ಕ್ ಕೇಳುತ್ತಿದ್ದ ಮತ್ತು ತಪ್ಪದೇ ಪ್ರತಿದಿನ ಇಂಗ್ಲಿಷ್ ಕಲೆಯಲು ಪ್ರಯತ್ನ ಪಡುತ್ತಿದ್ದ ಅವನ ಸತತವಾದ ಪರಿಶ್ರಮ ಮತ್ತು ಪ್ರಯತ್ನದಿಂದ ಆ ವಿದ್ಯಾರ್ಥಿಯು ಇಂಗ್ಲೀಷ್ ಪಾಠವನ್ನು ಒಂದು ವರುಷದ ಒಳಗಡೆ ಓದಲು ಮತ್ತು ಬರೆಯಲು ಕಲಿತನು ಈ ವಿದ್ಯಾರ್ಥಿಯ ಬದಲಾವಣೆಯಿಂದ ನನಗೆ ತುಂಬಾನೇ ಖುಷಿಯಾಯಿತು ಮತ್ತು ಹೆಮ್ಮೆಯೂ ಆಯಿತು.




ಸುಷ್ಮಾ ಅಪ್ಪನ್ನವರ

      ಸಹ ಶಿಕ್ಷಕಿ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುರುಬಗಟ್ಟಿ


Comments