ಬದಲಾವಣೆಗೆ ತಕ್ಕ ಪ್ರತಿಫಲ

            ಎಲ್ಲರಿಗೂ ನಮಸ್ಕಾರ ನಾನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುರುಬಗಟ್ಟಿಯಲ್ಲಿ ಸಹ ಅಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.


ನಾನು ವಿದ್ಯಾ ಪೋಷಕ ವತಿಯಿಂದ ಲೋ ಸಹ ಶಿಕ್ಷಕಿ ಆಗಿ ಈ ಶಾಲೆಯಲ್ಲಿ ಎರಡು ವರ್ಷಗಳ ಕಾಲ ವಿಜ್ಞಾನ ಗಣಿತ ಹಾಗೂ ಇಂಗ್ಲಿಷ್ ವಿಷಯವನ್ನು ಆರು ಮತ್ತು ಏಳನೇ ತರಗತಿಗೆ ಬೋಧಿಸಿದ್ದೇನೆ.


ಈ ಒಂದು ಕಥೆಯಲ್ಲಿ ನನ್ನ ಒಂದು ವಿದ್ಯಾರ್ಥಿಯ ಬದಲಾವಣೆ ಕುರಿತು ವಿವರಿಸುತ್ತೇನೆ.


ನಾನು ಈಗಿನ ಆರನೇ ತರಗತಿ ಮಕ್ಕಳಿಗೆ ವಿಜ್ಞಾನ ಮತ್ತು ಗಣಿತ ವಿಷಯವನ್ನು ಬೋಧಿಸುತ್ತೇನೆ ಇದರಲ್ಲಿ ಒಟ್ಟಾರೆಯಾಗಿ 49 ವಿದ್ಯಾರ್ಥಿಗಳು ಇದ್ದರು ನನಗೆ ವಿಜ್ಞಾನ ಮತ್ತು ಗಣಿತ ವಿಷಯವನ್ನು ಬೋಧಿಸುವುದರ ಜೊತೆಗೆ ಅವರಿಗೆ ಕೆಲವೊಂದು ಸ್ಪರ್ಧೆಗಳನ್ನು ಇಡುತ್ತಿದ್ದೆ ಹಾಗೆ ಅವರಲ್ಲಿ ಕಲಿಯುವಿಕೆಯಲ್ಲಿ ಮಾತನಾಡುವಿಕೆಯಲ್ಲಿ ಓದುವುದರಲ್ಲಿ ಬರೆಯುವುದರಲ್ಲಿ ಹೀಗೆ ಹಲವಾರು ವ್ಯತ್ಯಾಸಗಳನ್ನು ನಾನು ಕಂಡಿದ್ದೇನೆ



 ಅದರಲ್ಲಿ ಒಂದು ವಿದ್ಯಾರ್ಥಿಯು ಸ್ಕೂಲಿಗೆ ಬರುತ್ತಿದ್ದಿಲ್ಲ ಏಕೆಂದರೆ ಕರೋನಾ ಮುಗಿದ ನಂತರ ಅವನಿಗೆ ಶಾಲೆ ಪಾಠ ಶಿಕ್ಷಕರು ಅಂದರೆ ಏನೋ ಒಂದು ಭಯ ಇತ್ತು ಹೀಗೆ ನಾನು ಪ್ರತಿದಿನ ಹಾಜರಿ ತೆಗೆದುಕೊಳ್ಳುವಾಗ ಆ ಒಂದು ವಿದ್ಯಾರ್ಥಿ ಗೈರು ಹಾಜರಿರುತ್ತಿದ್ದ ನಾನು ಒಂದು ಎರಡು ವಾರಗಳ ಸುಮ್ಮನಿದ್ದೆ ಆನಂತರ ಗೆಳೆಯರನ್ನು ವಿಚಾರಿಸಿದಾಗ ಅವನು ತುಂಬಾನೇ ಬುದ್ಧಿವಂತ ವಿದ್ಯಾರ್ಥಿಯಾಗಿದ್ದ ಆದರೆ ಕರೋನ ಬಂದ ನಂತರ ಅವನಿಗೆ ಶಾಲೆಗೆ ಬರುವುದು ಅಭ್ಯಾಸ ಮಾಡುವುದು ಅವನಿಗೆ ಇಷ್ಟವಾಗುತ್ತಿದ್ದಿಲ್ಲ. 


ಹಾಗಾಗಿ ಅವನನ್ನು ಶಾಲೆಗೆ ಕರೆ ತರಲು ನಾನು ಅವನಿಗೆ ಮತ್ತು ಅವನ ಪೋಷಕರಿಗೆ ಕರೆ ಮಾಡಿದೆ ಅವಾಗು ಕೂಡ ಅವರ ಪೋಷಕರು ಅವನಿಗೆ ಶಾಲೆಗೆ ಹೋಗು ಎಂದಾಗಲು ಅವನು ಯಾವುದೇ ರೀತಿ ಶಾಲೆಗೆ ಬರಲು ಒಪ್ಪಿಕೊಳ್ಳುತ್ತಿದ್ದಿಲ್ಲ ಒಂದು ದಿನ ನಾನು ಅವನ ಮನೆಗೆ ಹೋದೆ ಅವನು ನನ್ನನ್ನು ನೋಡಿ ಅವಿತುಕೊಳ್ಳಲು ಆರಂಭಿಸಿದ ಆನಂತರ ನಾನು ಅವನಿಗೆ ನನ್ನ ಸಮಯ ಕರೆದುಕೊಂಡು ಅವನನ್ನು ಪ್ರೀತಿಯಿಂದ ಮಾತನಾಡಿಸಿದೆ ಅದರ ಜೊತೆಗೆ ಅವನಿಗೆ ನೀನು ಶಾಲೆಗೆ ಬಂದರೆ ನಿನ್ನಷ್ಟು ಬುದ್ಧಿವಂತ ವಿದ್ಯಾರ್ಥಿ ನಮ್ಮ ತರಗತಿಯಲ್ಲಿ ಯಾರೂ ಇಲ್ಲ ನೀನೇ ಮೊದಲು ಬರುತ್ತಿ ಕ್ಲಾಸಿಗೆ ಹಾಗೆ ಅವನಿಗೆ ನೀನು ಶಾಲೆಗೆ ಬ್ಯಾಗ್ ತರಬೇಡ ಒಂದು ಪುಸ್ತಕ ಒಂದು ಪೆನ್ನು ಅಷ್ಟೇ ತೆಗೆದುಕೊಂಡು ಬಾ, ನಿನ್ನನ್ನೇ ನಾನು ಕ್ಲಾಸಿನ ಲೀಡರ್ ಮಾಡುತ್ತೇನೆ ಹಾಗೆ ನಿನಗೆ ಯಾವ ರೀತಿ ಇಷ್ಟಾನೋ ಆ ರೀತಿ ನೀನು ಕ್ಲಾಸಿಗೆ ಕೂರಬಹುದು ಮತ್ತು ನಿನಗೆ ಯಾವ ವಿಷಯ ಇಷ್ಟ ಅದನ್ನು ಕೂಡ ನೀನು ಕಲಿಯಬಹುದು ಅದರ ಜೊತೆಗೆ ಆಟ ಆಡಿಸುತ್ತೇನೆ ಚಿತ್ರ ತೆಗಿಸುತ್ತೇನೆ ಹೀಗೆ ಹಲವಾರು ರೀತಿ ಅವನಿಗೆ ಖುಷಿ ಪಡಿಸುತ್ತಾ ಅವನನ್ನು ನಾಳೆಯಿಂದ ಶಾಲೆಗೆ ಬರಬೇಕೆಂದು ಹೇಳಿ ಬಂದೆ.


 ಮಾರನೇ ದಿನಾ ನೋಡಿದರೆ ಅವನು ನಾನು ಹೇಳಿದ ಹಾಗೆ ಶಾಲೆಗೆ ಒಂದು ಪೆನ್ನು ಒಂದು ಪುಸ್ತಕ ಅಷ್ಟೇ ತೆಗೆದುಕೊಂಡು ಬಂದ ಅವತ್ತಿನ ದಿನ ಅವನು ಗೆಳೆಯರ ಜೊತೆ ಕೂರಲು ಹಿಂಜರಿದ ಆ ಒಂದು ಕ್ಲಾಸಿನಲ್ಲಿ ನಾನು ಅವನಿಗೆ ಗೆಳೆಯರನ್ನು ಮಾಡಿಸಿ ಕೊಟ್ಟೆ ಹಾಗೆ ಆ ಒಂದು ಕ್ಲಾಸಿನಲ್ಲಿ ಹಾಡು ನಾಟಕ ಆಟ ಈ ಮುಖಾಂತರ ಆ ಒಂದು ಕ್ಲಾಸ್ ಕಲಿಸಿದೆ ಇದರಿಂದ ಅವನು ತುಂಬಾನೇ ಖುಷಿ ಪಟ್ಟ ಹಾಗೆ ಅವನೇ ಬಂದು ಹೇಳಿದ ಮೇಡಂ ನಾನು ನಾಳೆಯಿಂದ ಶಾಲೆಗೆ ಬ್ಯಾಗ್ ಹಾಕಿಕೊಂಡು ಬರುತ್ತೇನೆ ಇನ್ನು ಮುಂದೆ ಶಾಲೆ ತಪ್ಪಿಸುವುದಿಲ್ಲ ಎಂದ,



ಅದೇ ರೀತಿ ಅವನು ದಿನಾಲು ಶಾಲೆಗೆ ಬರಲು ಪ್ರಾರಂಭಿಸಿದ ಅದರ ಜೊತೆಗೆ ಎಲ್ಲಾ ವಿಷಯಗಳನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದ ಜೊತೆಗೆ ಅವನಿಗೆ ಬಂದಿರುವ ಡೌಟ್ ಮತ್ತು ಅವನ ಕ್ಲಿಷ್ಟಕರ ವಿಷಯಗಳನ್ನು ನನ್ನ ಹತ್ತಿರ ಬಂದು ಹೇಳಲು ಆರಂಭಿಸಿದ ಹಾಗೆ ಅವನಿಗೆ ನಾನು ಸಹಾಯವನ್ನು ಕೂಡ ಮಾಡುತ್ತಿದ್ದೆ ಹಾಗೆ ವಿಷಯವನ್ನು ತಿಳಿಸಿ ಹೇಳುತ್ತಿದೆ ಹೀಗೆ ಮುಂದುವರೆಯುತ್ತಾ ನಂದು ಮತ್ತು ಆ ವಿದ್ಯಾರ್ಥಿಯು ಒಂದು ಒಳ್ಳೆ ಸಂಬಂಧ ಅವನಿಗೆ ನಾನು ಫೇವರೆಟ್ ಟೀಚರ್ ಆದೆ ಹಾಗೆ ಅವನ ಬದಲಾವಣೆಯನ್ನು ನೋಡಿ ಅವನ ತಂದೆ ತಾಯಿಗಳು ಕೂಡ ನನಗೆ ಕರೆ ಮಾಡಿ ಧನ್ಯವಾದಗಳು ಕೂಡ ಹೇಳಿದ್ದರು ಹಾಗೆ ಈ ವಿದ್ಯಾರ್ಥಿಯು ಓದುವುದು ಬರೆಯುವುದಲ್ಲದೆ ಎಲ್ಲಾ ಸ್ಪರ್ಧೆಗಳಲ್ಲಿಯೂ ಭಾಗವಹಿಸುತ್ತಿದ್ದಾನೆ.



 ಅದರ ಜೊತೆಗೆ ಗೆಳೆಯರ ಜೊತೆ ಉತ್ತಮ ಬಾಂಧವ್ಯವನ್ನು ಕೂಡ ಹೊಂದಿದ್ದಾನೆ ಹಾಗೆ ಅವನಿಗೆ ನಾನು ಎರಡು ವರ್ಷ ನನ್ನ ಮುಗಿದ ನಂತರ ಹೋಗುತ್ತೇನೆ ಅನ್ನೋದು ಕೂಡ ಅವನಿಗೆ ಬೇಜಾರಾಗಿದೆ, ಅವನು ಅತ್ತನು ಕೂಡ 


ಹಾಗೆ ಇಂತಹ ಒಂದು ಒಳ್ಳೆಯ ಶಾಲೆ ವಿದ್ಯಾರ್ಥಿಗಳು ನನಗೆ ಪರಿಚಯ ಮಾಡಿಸಿಕೊಟ್ಟ ವಿದ್ಯಾ ಪೋಷಕ ಸಂಸ್ಥೆಗೆ ಧನ್ಯವಾದಗಳು ಹೇಳಲು ಇಷ್ಟಪಡುತ್ತೇನೆ ಹಾಗೆ ನನಗೆ ಈ ಒಂದು ಶಿಕ್ಷಕಿಯಾಗಿ ನೇಮಕಗೊಂಡಿದ್ದರಿಂದ ನನ್ನಲ್ಲಿ ನಾನು ಹಲವಾರು ಬದಲಾವಣೆಯನ್ನು ಕೂಡ ಕಂಡುಕೊಂಡಿದ್ದೇನೆ ಅದರ ಜೊತೆಗೆ ಉತ್ತಮ ಶಿಕ್ಷಕಿ ಕೂಡ ಆಗಿದ್ದೇನೆ ಮತ್ತು ಎಲ್ಲ ವಿದ್ಯಾರ್ಥಿಗಳು ಪೋಷಕರು ಇಂದ ನನಗೆ ಒಳ್ಳೆಯ ಪ್ರೀತಿ ಮತ್ತು ಗೌರವ ದೊರೆತಿದೆ .


                            ಥ್ಯಾಂಕ್ಯು ವಿದ್ಯಾ ಪೋಷಕ


 ಸುಷ್ಮಾ ಅಪ್ಪನವರ್

   ಸಹ ಶಿಕ್ಷಕಿ 

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುರುಬಗಟ್ಟಿ


Comments

Popular posts from this blog

Vidya Poshak - Yuva Internship 2024 - Application form

Vidya Poshak Yuva Internship 2023

TPL - Teachers Premier League🏆🏆