ಧಾರವಾಡ ಗ್ರಾಮೀಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಶ್ರೀ ರಾಮಕೃಷ್ಣ ಸದಲಗಿ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು ಸಂಸ್ಕಾರದಿಂದ ಶಿಕ್ಷಣ ಪಕ್ವ ಗೊಳ್ಳುತ್ತದೆ.  ವಿದ್ಯಾರ್ಥಿ ದೆಸೆಯಲ್ಲಿ ಜ್ಞಾನವನ್ನು   ಸಂಪಾದಿಸಿದರೆ ಸಕಲ ಸಂಪತ್ತು ಸ್ವಾಭಾವಿಕವಾಗಿ ಬರುತ್ತದೆ. ಶಿಕ್ಷಣ ಜೀವನ ಶಿಕ್ಷಣವಾಗಬೇಕು ಪರಿಶ್ರಮದಿಂದ  ದಿವ್ಯ ಜ್ಞಾನ ಪಡೆಯಬಹುದು ದೃಷ್ಟಾಂತಗಳನ್ನು ಹೇಳುವ ಮೂಲಕ ಮಕ್ಕಳ ಮನಸ್ಸು ಮನವನ್ನು ಮುಟ್ಟುವಂತೆ ಮಾತನಾಡಿದರು . ಶಾಲೆಯ ಪರಿಸರ ಉತ್ತಮವಾಗಿದೆ ಶಾಲೆಯ ಅಭಿವೃದ್ಧಿಗಾಗಿ  ಮತ್ತು ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಇಲಾಖೆ ಕಂಕಣಬದ್ಧವಾಗಿದೆ ವಿದ್ಯಾರ್ಥಿಗಳು ಎಲ್ಲಾ ಸೌಲಭ್ಯಗಳನ್ನು  ಪಡೆದು ತಮ್ಮ ಭವಿಷ್ಯವನ್ನು ನಿರ್ಮಿಸಿಕೊಳ್ಳಬೇಕೆಂದು  ಮನವರಿಕೆ ಮಾಡಿದರು ಸರ್ಕಾರಿ ಶಾಲೆಗಳು ಗುಣಾತ್ಮಕವಾದ ಶಿಕ್ಷಣವನ್ನು ನೀಡುತ್ತೇವೆ. ಪಾಲಕರು ಸಹ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿ ತಮ್ಮ ಮಕ್ಕಳಿಗೆ ಕಲಿಸುವ ಶಿಕ್ಷಕರ ಬಗ್ಗೆ ಗೌರವ ಇರಲಿ ತಮ್ಮ ಮಕ್ಕಳ ಸರ್ವಾಂಗಿನ ಅಭಿವೃದ್ಧಿಯಲ್ಲಿ ನಮ್ಮೆಲ್ಲ ಶಿಕ್ಷಕರು ಪಾಠ ಪ್ರವಚನಗಳನ್ನು ಮಾಡುತ್ತಿದ್ದಾರೆ . ಶಾಲಾ ಅಭಿವೃದ್ಧಿಯು ಸಮಿತಿಯವರು ಅಭಿವೃದ್ಧಿ ಕಾರ್ಯಗಳಲ್ಲಿ ಆಸಕ್ತಿ ಶಾಲೆಯನ್ನು ಮುನ್ನಡೆಸಿದ್ದಾರೆ. ಈ ಶಾಲೆಗೆ ದತ್ತಿ ದಾನ ನೀಡಿ ಶಿಕ್ಷಣ ಪ್ರೇಮಿಗಳು ಶಾಲೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಅವರೆಲ್ಲರಿಗೆ ಅಭಿನಂದನೆಯನ್ನು ಸಲ್ಲಿಸಿದರು.


Comments