ನಮ್ಮ ನಡೆ ಜಿಲ್ಲಾ ಮಟ್ಟದ ಕಡೆ
ನಮ್ಮ ನಡೆ ಜಿಲ್ಲಾ ಮಟ್ಟದ ಕಡೆ
ನಮ್ಮ ಶಾಲೆಯ ಮಕ್ಕಳು ಕೋಕೋ ತಾಲೂಕ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ ಇದು ನಮ್ಮ ಶಾಲೆಗೆ ಹೆಮ್ಮೆಯ ವಿಷಯ ನಮ್ಮ ಶಾಲೆಯ ಎಲ್ಲಾ ಶಿಕ್ಷಕರು ಅವರಿಗೆ ಶುಭ ಹಾರೈಕೆಯನ್ನು ತಿಳಿಸಿದ್ದಾರೆ ಮತ್ತು ಅವರು ತಮ್ಮ ಮುಂದಿನ ನಡೆಯನ್ನು ಜಿಲ್ಲಾಮಟ್ಟದ ಕಡೆಗೆ ಬೆಳೆಸಿದ್ದಾರೆ ಅದಕ್ಕಾಗಿ ಪ್ರತಿದಿನ ಬೆಳಗ್ಗೆ 5:00 ಸಮಯಕ್ಕೆ ಎದ್ದು ತಮ್ಮ ಖೋ,ಖೋ, ಆಟವನ್ನು ಆಡುತ್ತಾರೆ ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿಗಳು ಅವರಿಗೆ ಈ ಆಟದಲ್ಲಿ ತರಬೇತಿಯನ್ನು ನೀಡುತ್ತಿದ್ದಾರೆ ಎಲ್ಲಾ ಮಕ್ಕಳಿಗೂ ಅವರು ಪ್ರೋತ್ಸಾಹಿಸಿ ಪ್ರತಿಯೊಂದು ಅಂಶವನ್ನು ಮತ್ತು ನಿಯಮವನ್ನು ಹೇಳಿಕೊಟ್ಟು ಅವರಿಗೆ ತರಬೇತಿಯನ್ನು ನೀಡುತ್ತಿದ್ದಾರೆ ನಮ್ಮ ವಿದ್ಯಾ ಪೋಷಕದ ಕಡೆಯಿಂದ ನಮ್ಮ ಶಾಲೆಯ ಕಡೆಯಿಂದ ಆ ಮಕ್ಕಳಿಗೆ ಹೃತ್ಪೂರ್ವಕರಾದ ಧನ್ಯವಾದಗಳು ಹಾಗೆ ನಮ್ಮ ಮಕ್ಕಳು ಜಿಲ್ಲಾಮಟ್ಟದಲ್ಲಿಯೂ ಕೂಡ ಪ್ರಥಮ ಸ್ಥಾನಕ್ಕೆ ಬರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಇದನ್ನು ನೋಡಿದರೆ ನನಗೆ ಪ್ರಯತ್ನ ಪಟ್ಟರೆ ಪ್ರತಿಫಲ ಪ್ರತಿಫಲ ಖಂಡಿತ ಇದೆ. ಯಾವುದೇ ಕೆಲಸವಾಗಲಿ ಶ್ರದ್ದೆ ಮತ್ತು ಭಕ್ತಿಯಿಂದ ಮಾಡಬೇಕು ಮತ್ತು ನಮ್ಮ ಪ್ರಯತ್ನ ನಿರಂತರವಾಗಿರಬೇಕು ಕಳೆದ ವರ್ಷ ನಮ್ಮ ಮಕ್ಕಳ ಪ್ರಯತ್ನ ಈ ವರ್ಷ ಸಾಕಾರವಾಗಿ ಅವರ ಶ್ರಮ ಪ್ರತಿಫಲ ರೂಪದಲ್ಲಿ ಅವರಿಗೆ ದೊರಕುತ್ತಿದೆ ಇದು ನಮ್ಮ ಶಾಲೆಯ ಹೆಮ್ಮೆಯ ವಿಷಯ ಅಷ್ಟೇ ಅಲ್ಲದೆ ವೈಯಕ್ತಿ ಕ್ರೀಡೆಗಳಲ್ಲಿಯೂ ನಮ್ಮ ಮಕ್ಕಳು ಪ್ರಥಮ ಸ್ಥಾನದಲ್ಲಿದ್ದಾರೆ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ನಮ್ಮ ಶಾಲೆಯ ಏಳನೇ ತರಗತಿಯ ಮಗು ಶಾಲೆಯಲ್ಲಿ ಮಕ್ಕಳಿಗೆ ಆಟಗಳ ಸ್ಪರ್ಧೆಯಲ್ಲಿ ಪ್ರೋತ್ಸಾಹಿಸುವುದು ಸಾಂಸ್ಕೃತಿಕ ಸ್ಪರ್ಧೆಯಲ್ಲಿಯೂ ಕೂಡ ಪ್ರೋತ್ಸಾಹಿಸು ಬಹುಮುಖ್ಯ ಅಂಶವಾಗಿದೆ ಇದನ್ನು ನಮ್ಮ ಶಾಲೆಯಲ್ಲಿ ಎಲ್ಲ ಗುರುಗಳು ಕಟ್ಟಾಗಿ ಮಾಡುತ್ತಿದ್ದಾರೆ.
Comments
Post a Comment