ಮುಗ್ಧ ಮನಸ್ಸಿನ ಹೂವುಗಳು ತುಂಟತನದ ಕಂಗಳು
ಮುಗ್ಧ ಮನಸ್ಸಿನ ಹೂವುಗಳು
ತುಂಟತನದ ಕಂಗಳು
ಮುಗ್ಧ ಮನಸ್ಸಿನ ಹೂವುಗಳು ತಾನೊಂದು, ತನಗೊಂದು , ತನದೊಂದು ಎಂದು ಆಡುವಾಗ ಗದ್ದಲ ದಂತೆ ಎನಿಸುತ್ತದೆ. ಅದೇ ಮಧುರವಾಗಿ ಹಾಡುತ್ತಾ,ನಲಿಯುತ್ತಾ,ಕುಣಿಯುತ್ತಾ ಆಡಿದಂತೆ ಶಾಲೆಗೆ ಒಂದು ಕಳೆ ಬಂದಂತೆ ಎನಿಸುತ್ತದೆ. ಆಟವಾಡಿ ಪಾಠಮುಗಿದ ನಂತರ ಅವರಾಡುವ ಮಾತು ಸವಿ ಬೆಲ್ಲದಂತೆನಿಸುತ್ತದೆ. ಅವರಾಡುವ ಮಾತೆಲ್ಲ ಮುಗಿದಮೇಲೆ ನಾಚಿಕೆಯಿಂದನೂ ಅಥವಾ ಭಯಂದಿಂದಾನೋ ಸುಮ್ಮನೆ ಕುಳಿತಾಗ ಶಾಲೆಯು ಪೂರ್ಣ ಸ್ತಬ್ದವಾಗುತ್ತದೆ. ಆ ಮೌನದಲಿ ಮುಖವು ಬುದ್ದನಂತೆ ಕಾಣುತ್ತಿರುತ್ತದೆ.
Comments
Post a Comment