ಹುಟ್ಟು ಹಬ್ಬ ಆಚರಿಸಿಕೊಳ್ಳುವಲ್ಲೆ ಸಸಿನೆಡುವ ಉತ್ತಮ ವಿಷಯ
ಹುಟ್ಟು ಹಬ್ಬವನ್ನು ಸಸಿನೆಡುವ ಮೂಲಕ ಆಚರಿಸಿಕೊಳ್ಳುವ ಉತ್ತಮ ವಿಷಯ ✨
ಸರಕಾರಿ ಹಿರಿಯ ಪ್ರಾಥಮಿಕ
ಶಾಲೆ ಕಲ್ಲೆ
ಎಲ್ಲ ಮಕ್ಕಳೂ ತಮ್ಮ ಪ್ರತಿ ಹುಟ್ಟು ಹಬ್ಬವನ್ನು ಸಿಹಿ ತಿಂಡಿ ಮತ್ತು ಕೇಕ್ ಕಟ್ ಮಾಡುವ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸಿಕೊಂಡರೆ ,ನಮ್ಮ ಶಾಲೆಯ ಪ್ರತಿ ವಿದ್ಯಾರ್ಥಿಗಳು ಮಾತ್ರ ತಮ್ಮ ಪ್ರತಿ ವರ್ಷ ಹುಟ್ಟು ಹಬ್ಬದ ಪ್ರಯುಕ್ತವಾಗಿ ಪ್ರತಿಯೊಬ್ಬರೂ ಸಸಿಯನ್ನು ನೆಟ್ಟು ತಮ್ಮ ಸಂತೋಷದ ದಿನವನ್ನು ಸವಿಯುತ್ತಾರೆ .ಇಂದು ಎಲ್ಲ ಸಸಿಗಳು ಕಣ್ಣನ್ನು ಕಂಗೊಳಿಸುವ ಹೂ ಅರಳಿ ಕ್ಷಣ ✨ ಇದು ನಮ್ಮ ಶಾಲೆಯ ಪ್ರಧಾನ ಗುರುಗಳಾದ ಶ್ರೀ. N.G. ಗುರುಪುತ್ರನವರವರ್ ಮಾರ್ಗದರ್ಶನದಿಂದ ವಿದ್ಯಾರ್ಥಿಗಳಿಗೆ ರೂಢಿಕೆಯಾಗಿದ್ದು , ಊರಿನ ಮೆಚ್ಚುಗೆಗೆ ಪಾತ್ರವಾಗಿದ್ದಾರೆ . ಪ್ರತಿಯೊಂದು ವಿದ್ಯಾರ್ಥಿಯು ಗಿಡ ನೆಡುವುದರ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಾರೆ . ಇದು ಒಂದು ಒಳ್ಳೆಯ ಮತ್ತು ಉತ್ತಮ ರೀತಿಯಲ್ಲಿ ಪರಿಸರವನ್ನು ಸಂರಕ್ಷಿಸುವ ಸಲುವಾಗಿ ಅವರ ತಯಾರಿ ಈಗಿನಿಂದಲೇ ಇದ್ದುದರಿಂದ ನಾಳೆಯ ಭವಿಷ್ಯತ್ತಿನಲ್ಲಿ ಅವರ ಚಿಂತನೆಗಳು ನಿರಂತರವಾಗಿ ಉತ್ತಮವಾದ ಭವಿಷ್ಯ ರೂಪಿಸುವಲ್ಲಿ ಒಂದಾಗುತ್ತಾ ,ಅವರ ಪ್ರಕೃತಿಯ ಕಾಳಜಿಯನ್ನು ತೋರಿಸುತ್ತದೆ.
Comments
Post a Comment