ನಿನ್ನಂತಾಗಬೇಕು ಕನಕ
ನವೆಂಬರ್ ೧೮ ರಂದು ನಮ್ಮ ಶಾಲೆಯಲ್ಲಿ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು. ಈ ದಿನ ವಿಶೇಷವಾಗಿ ಕನಕದಾಸರ ಜೀವನ ಮತ್ತು ಅವರ ಭಕ್ತಿಯು ಸಮಾಜಕ್ಕೆ ನೀಡಿದ ಸಂದೇಶಗಳನ್ನು ಸ್ಮರಿಸಲಾಯಿತು. ಅಂದು ಬೆಳಿಗ್ಗೆ 8:30 ಕ್ಕೆ ನಾನು ಶಾಲೆಗೆ ಹಾಜರಾದೆನು. ನಮ್ಮ ವಿದ್ಯಾರ್ಥಿಗಳಲ್ಲಿ ಒಬ್ಬರು ಮಂತ್ರಗಳನ್ನು ಪಠಿಸಿ ಪೂಜೆಗೆ ಚಾಲನೆ ನೀಡಿದರು. ನಮ್ಮ ಹೆಚ್‌ಎಮ್ ಸರ್ ಕನಕದಾಸರ ಜೀವನವನ್ನು ವಿವರಿಸಿ, ಅವರ ಭಕ್ತಿಗಣ ಮತ್ತು ಸಮಾಜದಲ್ಲಿ ಉಂಟುಮಾಡಿದ ಬದಲಾವಣೆಗಳನ್ನು ಕುರಿತು ಮಾತನಾಡಿದರು. ನಂತರ, ಕೆಲವು ವಿದ್ಯಾರ್ಥಿಗಳು ಭಾಷಣಗಳನ್ನು ಮಾಡಿದರು ಮತ್ತು ಕನಕದಾಸರ ಭಕ್ತಿಗೀತೆಗಳನ್ನು ಹಾಡಿದರು. ನಂತರ ನಾವೆಲ್ಲರೂ ಸೇರಿ ಕನಕದಾಸರ ಹಾಡುಗಳನ್ನು ಆಲಿಸಿದೆವು. ಇವುಗಳಲ್ಲಿ "ಕುಲ ಕುಲವೆಂದು ಹೊಡೆದಾಡದಿರಿ" , "ದಾಸನಾಗು ವಿಶೇಷನಾಗು " ಮತ್ತು "ನಿನ್ನಂತಗಬೇಕೊ ಕನಕ" ಎಂಬ ಕನಕದಾಸರ ಪ್ರಸಿದ್ಧ ಗೀತೆಗಳನ್ನು ಆಲಿಸಿದೆವು. ಈ ಹಾಡುಗಳು ಕನಕದಾಸರ ಭಕ್ತಿಯ ಹಾಗೂ ಸಾಮಾಜಿಕ ಸಮಾನತೆಯ ಸಂದೇಶಗಳನ್ನು ಸಾರುತ್ತಿವೆ .
Comments
Post a Comment