ಕರುನಾಡು ಕಂಡ ಅಪ್ರತಿಮ ದಾಸ ನಮ್ಮ ಕನಕದಾಸ
ನಾವು 18/11/2024 ರಂದು ಕನಕದಾಸರ ಜಯಂತಿಯನ್ನು ಆಚರಿಸಿದೆವು. ಬೆಳಿಗ್ಗೆ ಮಕ್ಕಳು ಹೂಗಳೊಂದಿಗೆ ಶಾಲೆಗೆ ಬಂದಿದ್ದರು. ಎಲ್ಲ ಶಿಕ್ಷಕರು ಪೂಜಾ ಸಿದ್ಧತೆಗಳನ್ನು ಮಾಡಿ, ನಂತರ ಪೂಜೆಯನ್ನು ಶುರುಮಾಡಿದೆವು. ಆಮೇಲೆ ಶಿಕ್ಷಕರು ಕನಕದಾಸರ ಬಗ್ಗೆ ಒಂದಿಷ್ಟು ಮಾಹಿತಿ ನೀಡಿದರು. ನಾನು ಕೂಡ ಅವರ ಕೀರ್ತನೆಗಳನ್ನು ಹೇಳಿದೆ. ಮಕ್ಕಳು ತುಂಬಾ ಖುಷಿ ಪಟ್ಟರು.
ದಾಸರ ಬಗ್ಗೆ ಹೇಳಲು ತುಂಬಾ ಖುಷಿ ಆಯಿತು. ಪೂಜೆ ಮುಗಿದ ನಂತರ ಎಲ್ಲ ಮಕ್ಕಳು ಉಪಹಾರವನ್ನು ಸೇವಿಸಿದರು. ನಂತರ ಅವರ ಕೀರ್ತನೆಗಳನ್ನು ಎಲ್ಲರು ಹಾಡಿದರು ( ಎಲ್ಲರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ) ಎಂತ ಅದ್ಬುತವಾದ ಸಾಲುಗಳು ಬರೆದ ದಾಸರಿಗೆ ನಾನು ಶರಣಾದೆ.
ಕನಕ ಎಂದರೆ ಕರುನಾಡ ಕಣಜ
ಕನಕ ಎಂದರೆ ಕರುನಾಡ ಕಣ್ಮಣಿ
ಎಂತ ಅದ್ಬುತ ವ್ಯಕ್ತಿ ನಮ್ಮ್ ಕನಕದಾಸರು.............
Comments
Post a Comment