ಚಿಂತೆ ಬಿಡಿಸೊ ಚಿಣ್ಣರ ಹಬ್ಬ
ನವೆಂಬರ್ ತಿಂಗಳಿನಲ್ಲಿ ವಿದ್ಯಾಪೋಷಕ್ ವತಿಯಿಂದ ಚಿಣ್ಣರ ಹಬ್ಬ ಎಂಬ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿದ್ದರು. ೨೨ ಶಾಲೆಗಳಿಂದ ೧೪೮ ವಿದ್ಯಾರ್ಥಿಗಳು ಭಾಗವಹಿಸಿದ್ದರು. ನೋಡಲು ತುಂಬಾ ಖುಷಿ ಆಯಿತು. ಎಲ್ಲ ಮಕ್ಕಳಿಗೂ ವಿವಿದ ರೀತಿಯ ಆಟಗಳನ್ನು ಆಡಿಸಿದರು. ಅದರ ಜೊತೆ ಬಹುಮಾನಗಳನ್ನು ನೀಡಿದೆವು ಅದನ್ನು ಸ್ವೀಕರಿಸಿದ ಅವರಿಗೆ ತುಂಬಾ ಖುಷಿ ಆಯಿತು.
ಮಕ್ಕಳಿಗೆ ಒಂದೇ ಅಟ ಸೀಮಿತವಿರಲಿಲ್ಲ ಅವರು ಬೇರೆ ಬೇರೆ ಆಟಗಳಿಗೂ ಭಾಗವಹಿಸಲು. ಕೆಲವು ಮಕ್ಕಳು ಹಾಡು, ಚಿತ್ರಕಲೆ, ನೃತ್ಯ, ಇತ್ಯಾದಿ ಕಾರ್ಯಕ್ರಮದಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದರು. ಎಲ್ಲ ಮಕ್ಕಳು ನಮಗೆ ತುಂಬಾ ಖುಷಿ ಆಯಿತು ಎಂದು ನಮ್ಮ ಹತ್ತಿರ ಹಂಚಿಕೊಂಡರು ಅದನ್ನು ಕೇಳಿ ನಮಗೂ ಸಂತೋಷವಾಯಿತು.
ಆಹಾ,,, ಎಂತ ಚೆಂದ ಚಿಣ್ಣರ ಹಬ್ಬ...........
Comments
Post a Comment