ನೀನೆಂದಿಗೂ ಅಮರ .........
ನಮ್ಮ ಶಾಲೆಯ ವಿದ್ಯಾರ್ಥಿಯಾದ ಲಕ್ಷ್ಮಿ ಅವಳು ನಮ್ಮನ್ನು ಆಗಲಿ ಒಂದು ವರ್ಷವಾಯಿತು. ಅದಕ್ಕಾಗಿ ಅವಳ ನೆನಪಿಗಾಗಿ ಒಂದು ವರ್ಷದ ಪುಣ್ಯ ತಿಥಿ ಸಲುವಾಗಿ ಅವರ ಬೆಳಿಗ್ಗೆ ಪ್ರಾರ್ಥನೆಯಲ್ಲಿ ಮೌನಾಚರಣೆಯನ್ನು ಆಚರಿಸಿದೆವು. ಎಲ್ಲ ಮಕ್ಕಳು ಭಾವುಕರಾದರು.
ಅವರ ತಂದೆ ಅವಳ ನೆನಪಿಗಾಗಿ ಬ್ಯಾನರ್ ಅನ್ನು ಶಾಲೆಗೆ ತಂದರು. ಅದನ್ನು ನೋಡಿ ತುಂಬಾ ನೋವಾಯಿತು. ಅವಳೊಂದಿಗೆ ಆಡಿದ ಅವಳ ಗೆಳತಿಯರಂತೂ ತುಂಬಾ ಬೇಜಾರಾದರು. ಕೆಲವೊಂದಿಷ್ಟು ಮಕ್ಕಳು ಅತ್ತೇಬಿಟ್ಟರು. ಇದು ಮರೆಯಲಾಗದ ದಿನ. ಅವಳ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರ ಹತ್ತಿರ ಬೇಡಿಕೊಳ್ಳುತ್ತೇವೆ.
ಯಾರಾದರೇನು ವಿಧಿಯ ಕಣ್ಣು ಬಿಡದು ಯಾರನು ................
Comments
Post a Comment