ಕನ್ನಡ ಹಬ್ಬ


 

ಇಂದು ನಮ್ಮ ಶಾಲೆಯಲ್ಲಿ ಎಲ್ಲಡೆ ಹಬ್ಬದ ವಾತಾವರಣ ಏಕೆಂದರೆ ಇಡೀ ಕರ್ನಾಟಕ ಆಚರಿಸುತ್ತಿರುವ ನಾಡ ಹಬ್ಬವನ್ನು ಅತ್ಯಂತ ಸಂಭ್ರಮ್ ಸಡಗರದಿಂದ ಆಚರಿಸಿ ಕುಣಿದು ಕುಪ್ಪಳ್ಳಿಸಿ ಸಿಹಿಯೊಂದಿಗೆ ಅನುಭವಿಸಿ ನನ್ನ ನೆನಪುಗಳ ಬುತ್ತಿಗೆ ಮರೆಯಲಾಗದ ಕ್ಷಣಗಳು.

ಎಲ್ಲ ವಿದ್ಯಾರ್ಥಿಗಳು, ಶಿಕ್ಷಕರ ವೃಂದ ಊರಲ್ಲಿ ಕನ್ನಡ ಮಾತೆಯ ಮೆರವಣಿಗೆಯ ಜೊತೆ ಘೋಷಣೆಗಳ್ಳನ್ನು ಕೂಗುತ್ತ ಕೋಲಾಟವಾಡುತ್ತಾ ಡೊಳ್ಳಿನ ನಾದದ ಜೊತೆಗೆ ಸಾಗಿದರು ಹಾಗೂ ಎಲ್ಲ ವಿದ್ಯಾರ್ಥಿಗಳಿಗೆ ವೇಷಭೂಷಣ ಧರಿಸಿಕೊಂಡು ಬರಲು ಹಿಂದಿನ ದಿನ ಸೂಚನೆ ನೀಡಲಾಗಿತ್ತು ಅದರ ಪ್ರಕಾರ ಪ್ರತಿ ತರಗತಿಯ ವಿದ್ಯಾರ್ಥಿಗಳು ವೇಷಭೂಷಣದಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿ ಕನ್ನಡ ನಾಡ ಹಬ್ಬಕ್ಕೆ ಇನ್ನಷ್ಟು ಮೆರಗಣ್ಣ ತಂದರು.

Comments