ಗಣಿತವು ಮುಖ್ಯವಾಗಿ ಆಟ ಆಡುತ್ತಾ ಕಲಿಯಬಹುದಾದ ಏಕೈಕ ವಿಷಯವಾಗಿದ್ದು, ಮೋಜಿನ ಗಣಿತದ ಮೂಲಕ ಕಲಿಕೆ ಇನ್ನೂ ಆಸಕ್ತಿದಾಯಕವಾಗುತ್ತದೆ. ಇದರಲ್ಲಿ ವಿವಿಧ ರೀತಿಯ ಚಟುವಟಿಕೆಗಳು ಮತ್ತು ಕಲಿಕಾ ವಿಧಾನಗಳು ಒಳಗೊಂಡಿವೆ. ಈ ಸಂದರ್ಭದಲ್ಲಿ 6ನೇ ತರಗತಿಯ ಗಣಿತ ಪಠ್ಯಕ್ರಮದ ಕೊನೆಯ ಪಾಠವಾದ “ಸೊನ್ನೆಯ ಮತ್ತೊಂದು ಬದಿ” ಎಂಬ ಪಾಠವನ್ನು ಬೋಧಿಸುವಾಗ, ಟೋಕನ್‌ಗಳ ಸಹಾಯದಿಂದ ಸಂಕಲನ ಮತ್ತು ವ್ಯವಕಲನ ಮಾಡುವ ಪ್ರಕ್ರಿಯೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು. ವಿದ್ಯಾರ್ಥಿಗಳು ಗಣಿತ ಕಲಿಕೆಯ ಪಾಠೋಪಕರಣಗಳನ್ನು ಬಳಸಿಕೊಂಡು ಲೆಕ್ಕಗಳನ್ನು ಬಿಡಿಸುವ ಮೂಲಕ ಹೆಚ್ಚಿನ ಉತ್ಸಾಹವನ್ನು ತೋರಿಸಿದರು. ಈ ಚಟುವಟಿಕೆ ಆಧಾರಿತ ಕಲಿಕೆಯಿಂದ ವಿದ್ಯಾರ್ಥಿಗಳು ಲೆಕ್ಕಗಳನ್ನು ಯಶಸ್ವಿಯಾಗಿ ಪರಿಹರಿಸಿ ಗಣಿತದ ಬಗ್ಗೆ ಆಸಕ್ತಿ ಮತ್ತು ಆತ್ಮವಿಶ್ವಾಸವನ್ನು ಬೆಳೆಸಿಕೊಂಡರು.


Comments
Post a Comment