Day 3 ಹಳ್ಳಿ ಆಟ – ಹಳ್ಳಿ ಸಂಭ್ರಮ

 

                                       ಹಳ್ಳಿ ಆಟ – ಹಳ್ಳಿ ಸಂಭ್ರಮ

                                ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾದವಾಡ

                                              ಇಂದು ನಮ್ಮ ಬೇಸಿಗೆ ಶಿಬಿರದ ಮೂರನೇ ದಿನವನ್ನು ಅತ್ಯಂತ ಉತ್ಸಾಹ ಮತ್ತು ಸಂತೋಷದೊಂದಿಗೆ ಆರಂಭಿಸಿದೆವು. ದಿನದ ವಿಷಯ “ಹಳ್ಳಿ ಆಟ – ಹಳ್ಳಿ ಸಂಭ್ರಮ”ವಾಗಿದ್ದು, ಗ್ರಾಮೀಣ ಸಂಸ್ಕೃತಿ ಮತ್ತು ಹಳ್ಳಿ ಆಟಗಳ ಮಹತ್ವವನ್ನು ಮಕ್ಕಳಿಗೆ ಪರಿಚಯಿಸುವುದಾಗಿತ್ತು.

ಮೊದಲು ಎಲ್ಲಾ ಮಕ್ಕಳನ್ನು ಆತ್ಮೀಯವಾಗಿ ಸ್ವಾಗತ ಮಾಡಿಕೊಂಡೆವು. ಮಕ್ಕಳು ಸಂತೋಷದಿಂದ ಶಿಬಿರದಲ್ಲಿ ಭಾಗವಹಿಸಿದರು. ಆರಂಭದಲ್ಲಿ ಮಕ್ಕಳ ಉತ್ಸಾಹವನ್ನು ಹೆಚ್ಚಿಸಲು ಒಂದು ಚಿಕ್ಕ ಆಟವನ್ನು ಆಡಿಸಿದೆವು. ಈ ಆಟದ ಮೂಲಕ ಮಕ್ಕಳು ಹಸನ್ಮುಖರಾಗಿದ್ದು, ಮುಂದಿನ ಚಟುವಟಿಕೆಗಳಿಗೆ ಸಿದ್ಧರಾದರು.


                                    

ನಂತರ ನಮ್ಮ ಯಾದವಾಡ ಗ್ರಾಮದ ವಿಶೇಷತೆಗಳ ಬಗ್ಗೆ ಮಕ್ಕಳಿಗೆ ವಿವರವಾಗಿ ತಿಳಿಸಿದೆವು. ನಮ್ಮ ಗ್ರಾಮದ ಸಂಸ್ಕೃತಿ, ಜನರ ಜೀವನ ಶೈಲಿ, ಹಬ್ಬಗಳು ಮತ್ತು ಹಳ್ಳಿ ಸಂಪ್ರದಾಯಗಳ ಬಗ್ಗೆ ಸರಳವಾಗಿ ವಿವರಿಸಿದೆವು. ಜೊತೆಗೆ ನಮ್ಮ ಜನಪದ ಕಲೆಯ ಮಹತ್ವವನ್ನು ಮಕ್ಕಳಿಗೆ ಪರಿಚಯ ಮಾಡಿದೆವು. ಕೋಲಾಟ, ಡೊಳ್ಳು ಕುಣಿತ, ಸೋಬಾನ ಪದಗಳು ಮತ್ತು ಒಗಟುಗಳ ಬಗ್ಗೆ ಮಕ್ಕಳಿಗೆ ವಿವರವಾಗಿ ತಿಳಿಸಿದೆವು. ಈ ಕಲೆಯು ನಮ್ಮ ಪರಂಪರೆಯ ಭಾಗವಾಗಿದ್ದು, ಅವುಗಳನ್ನು ಉಳಿಸುವುದು ನಮ್ಮ ಜವಾಬ್ದಾರಿ ಎಂಬುದನ್ನು ತಿಳಿಸಿದೆವು.

                                     

ಅದಾದ ನಂತರ ಮಕ್ಕಳಿಗೆ ಕೆಲವು ಹಳ್ಳಿ ಆಟಗಳನ್ನು ಆಡಿಸಿದೆವು. ಬಲೂನ್ ಆಟ ಮತ್ತು ಸರಸಳದ ಆಟವನ್ನು ಮಕ್ಕಳು ತುಂಬಾ ಆಸಕ್ತಿಯಿಂದ ಆಡಿದರು. ಈ ಆಟಗಳ ಮೂಲಕ ಮಕ್ಕಳು ತಂಡವಾಗಿ ಕೆಲಸ ಮಾಡುವುದನ್ನು ಮತ್ತು ಒಟ್ಟಿಗೆ ಸಂತೋಷಪಡುವುದನ್ನು ಕಲಿತರು. ಎಲ್ಲಾ ಮಕ್ಕಳು ಉತ್ಸಾಹದಿಂದ ಭಾಗವಹಿಸಿ ತುಂಬಾ ಖುಷಿಪಟ್ಟರು.

ನಂತರ ಕೆಲವು ಹುಡುಗಿಯರು ಮುಂದೆ ಬಂದು ಸುಂದರವಾಗಿ ಸೋಬಾನ ಪದಗಳನ್ನು ಹೇಳಿದರು. ಅವರ ಆತ್ಮವಿಶ್ವಾಸ ಮತ್ತು ಉತ್ಸಾಹ ಎಲ್ಲರನ್ನೂ ಆಕರ್ಷಿಸಿತು. ನಂತರ ಇಬ್ಬರು ಮಕ್ಕಳು ಕೋಲಾಟವನ್ನು ಪ್ರದರ್ಶಿಸಿ, ಇತರ ಮಕ್ಕಳಿಗೂ ಅದನ್ನು ಹೇಗೆ ಮಾಡಬೇಕು ಎಂದು ತೋರಿಸಿದರು. ಇದರಿಂದ ಮಕ್ಕಳು ನಮ್ಮ ಜನಪದ ಕಲೆಯ ಬಗ್ಗೆ ಹೆಚ್ಚು ಆಸಕ್ತಿ ತೋರಿದರು.

                                


ಕೊನೆಯಲ್ಲಿ ಇಂದಿನ ದಿನದ ಚಟುವಟಿಕೆಗಳ ಬಗ್ಗೆ ಚಿಕ್ಕ ಚರ್ಚೆ ನಡೆಸಿದೆವು. ಮಕ್ಕಳು ತಮ್ಮ ಅನುಭವಗಳನ್ನು ಹಂಚಿಕೊಂಡರು ಮತ್ತು ಇಂದಿನ ಶಿಬಿರವು ಅವರಿಗೆ ತುಂಬಾ ಇಷ್ಟವಾಯಿತೆಂದು ಹೇಳಿದರ�


Thank you.....

Comments