ವರ್ಷದ ಮೊದಲ ವರುಣ ತಂದ ಹರುಷ
ನಿಜವಾದ ಸಂತೋಷ 😍💛
ಮಂಗಳವಾರದಂದು 2025ನೇ ವರ್ಷದ ಪ್ರಥಮ ಮಳೆಮಧ್ಯಾಹ್ನ ಊಟದ ನಂತರ ಬಂದಿತು. ಆಗ ಮಕ್ಕಳೆಲ್ಲರೂ ತುಂಬಾ ಸಂತೋಷದಿಂದ ಮಳೆಯಲ್ಲಿ ಓಡಾಡುತ್ತಿದ್ದರು,ಮಳೆಯಲ್ಲಿ ನೃತ್ಯವನ್ನು ಮಾಡಿದರು ಅವರಿಗೆ ಬೇಕಾದ ಹಾಗೆ ಮಳೆಯಲ್ಲಿ ಕುಣಿದಾಡಿದರು ಅವರ ಜೊತೆಗೆ ನಾವು ಶಿಕ್ಷಕರು ಸಹ ಮಳೆಯಲ್ಲಿ ನಲಿದಾಡಿದೆವು. ನಮ್ಮ ವಿದ್ಯಾರ್ಥಿಗಳು ಈ ವರ್ಷದ ಮೊದಲ ಮಳೆಯನ್ನುಅತ್ಯಂತ ಖುಷಿಯಿಂದ ಸ್ವಾಗತ ಮಾಡಿದರು ಆ ಸಂದರ್ಭದಲ್ಲಿ ನನಗೆ ನನ್ನ ಬಾಲ್ಯದ ದಿನಗಳು ತುಂಬಾ ನೆನಪಾದವು. ಆ ದಿನದಂದು ನಾನು ನಾನು ನನ್ನ ಮಕ್ಕಳ ಸಂತೋಷವನ್ನು ಕಣ್ತುಂಬಿಕೊಂಡೆ😊💗
Comments
Post a Comment