ಶಾಲಾ ಮಟ್ಟದ ಪ್ರತಿಭಾ ಕಾರಂಜಿ
ಶಾಲಾ ಮಟ್ಟದ ಪ್ರತಿಭಾ ಕಾರಂಜಿ 2024-25 ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೇ ತಯಾರಿ ಮಾಡುವಲ್ಲಿ ಶಾಲಾ ಮಟ್ಟದಲ್ಲಿ ಆಯ್ಕೆ ಪ್ರಕ್ರಿಯೆಯನ್ನು ದಿನಾಂಕ 22/07/2024 ರಂದು GHPS ಹಳ್ಳಿಗೇರಿ ಶಾಲೆಯಲ್ಲಿ ನಡೆಸಲಾಯಿತು. ಎಲ್ಲ ವಿದ್ಯಾರ್ಥಿಗಳು ಅತಿ ಉತ್ತಮವಾದ ಪ್ರದರ್ಶನ ನೀಡಿದರು, ಅದರಲ್ಲಿ ಪ್ರತಿ ಹಲವರು ಆಯ್ಕೆ ಆದರು. ಮುಖ್ಯ ಶಿಕ್ಷಕರ ಸಲಹೆಯಂತೆ ಹಾಗೂ ಎಲ್ಲ ತರಗತಿಯ ಶಿಕ್ಷಕರ ಮೆರೆಯಲ್ಲಿ 1ನೇ ತರಗತಿ ಇಂದ 4ನೇ ತರಗತಿ ಮಕ್ಕಳಿಗೆ ಮೊದಲಿಗೆ ಸ್ಪರ್ಧೆ ಪ್ರಾರಂಭಿಸಿದೆವು, ಕಂಠಪಾಠ, ಅಭಿನಯ ಗೀತೆ , ದೇಶಭಕ್ತಿ ಗೀತೆ , ಹೀಗೆ ಹಲವಾರು ಸ್ಪರ್ಧೆಗಳಲ್ಲಿ ಆ ಪುಟ್ಟ ಮುಗ್ದ ಮಕ್ಕಳು ತುಂಬಾ ಚನ್ನಾಗಿ ಭಾಗವಹಿಸಿದರು. ಭಾಗವಹಿಸಿದ ಮಕ್ಕಳಿಗೆ ಚಪ್ಪಾಳೆಗಳ ಮೂಲಕ ಅಭಿನಂದಿಸಿ. ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು. ಆಯ್ಕೆ ಆದ ಮಕ್ಕಳು ತುಂಬಾ ಖುಷಿ ಪಟ್ಟರು ಹಾಗು ಚನ್ನಾಗಿ ತಯಾರಿ ಮಾಡುತ್ತೇವೆ ಎಂದು ಹೇಳಿದರು. 5 ರಿಂದ 7ನೇ ತರಗತಿ ಅವರು ಸಹ ಎಲ್ಲ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು ತುಂಬಾ ಉತ್ತಮವಾದ ಪ್ರದರ್ಶನ ನೀಡಿದರು ಕ್ಲೇ ಮಾಡೆಲಿಂಗ್ ಅಂತೂ