ನಾಮಪತ್ರ ಸಲ್ಲಿಕೆ
ನಮ್ಮ ಶಾಲೆಯಲ್ಲಿ 2024- 25 ನೇ ಸಾಲಿನ ಶಾಲಾ ಸಂಸತ್ ಚುನಾವಣೆಯನ್ನು ದಿನಾಂಕ 16/7/2024 ರಂದು ಆಯೋಜಿಸಲಾಗಿತ್ತು. ಇದರ ಅಂಗವಾಗಿ ಚುನಾವಣೆಯ ಪ್ರಥಮ ಹಂತ ನಾಮಪತ್ರ ಸಲ್ಲಿಕೆಯನ್ನು ದಿನಾಂಕ 15/7/2024 ರಂದು ಹಮ್ಮಿಕೊಳ್ಳಲಾಗಿತ್ತು. ಇದರ ಅಂಗವಾಗಿ 19 ವಿದ್ಯಾರ್ಥಿಗಳು ಡೊಳ್ಳು ಬಾರಿಸುವ ಮೂಲಕ ಆಗಮಿಸಿ ತಮ್ಮ ನಾಮಪತ್ರವನ್ನು ದಿನಾಂಕ 15/7/2024 ರಂದು ಸಲ್ಲಿಸಿದರು. ಅಭ್ಯರ್ಥಿಗಳ ನಾಮಪತ್ರವನ್ನು ಪರಿಗಣಿಸಿ ಅದರಲ್ಲಿ 17 ಜನರನ್ನು ಆಯ್ಕೆ ಮಾಡಿದ್ದು ಅವರಿಗೆ ಗುರುತಿನ ಚಿಹ್ನೆಯನ್ನು ನೀಡಲಾಯಿತು. ಇನ್ನುಳಿದ ಇಬ್ಬರು ಅಭ್ಯರ್ಥಿಗಳನ್ನು ನೇರವಾಗಿ ವಿಧಾನ ಪರಿಷತ್ತಿಗೆ ಆಯ್ಕೆ ಮಾಡಿದೆವು. ಇದರಿಂದ ವಿದ್ಯಾರ್ಥಿಗಳು ವಿಧಾನಸಭೆ ವಿಧಾನಪರಿಷತ್ತಿನ ಬಗ್ಗೆ ತಿಳಿದುಕೊಂಡರು. ಶಾಲಾ ಸಂಸತ್ ಚುನಾವಣೆಯನ್ನು ನೈಜ ಚುನಾವಣೆಯಂತೆ ನೆರವೇರಿಸುವ ಪ್ರಯತ್ನ ಮಾಡಿದೆವು. ಈ ಮೂಲಕ ವಿದ್ಯಾರ್ಥಿಗಳಿಗೆ ಮತದಾನ ಹಾಗೂ ಚುನಾವಣೆಯ ಬಗ್ಗೆ ಅರಿವು ಮೂಡಿಸಲಾಯಿತು. ಚುನಾವಣೆಯ ಪ್ರಥಮ ಹಂತ ನಾಮಪತ್ರ ಸಲ್ಲಿಕೆಯನ್ನು ಅದ್ದೂರಿಯಾಗಿ ನೆರವೇರಿಸಲಾಯಿತು.
Comments
Post a Comment