ಭರ್ಜರಿ ಮತ ಪ್ರಚಾರ
2024 25 ನೇ ಸಾಲಿನ ಶಾಲಾ ಸಂಸತ್ ಚುನಾವಣಾ ಪ್ರಯುಕ್ತ ಅಭ್ಯರ್ಥಿಗಳ ನಾಮ ಪತ್ರಿಕೆಯನ್ನು ಪರಿಗಣಿಸಿ ಅವರಿಗೆ ಗುರುತಿನ ಚಿನ್ಹೆಯನ್ನು ನೀಡಲಾಯಿತು. ಅಭ್ಯರ್ಥಿಗಳು ತಮ್ಮ ತಮ್ಮ ಗುರುತಿನ ಚಿನ್ಹೆಯೊಂದಿಗೆ ಭರ್ಜರಿ ಮತ ಪ್ರಚಾರ ಮಾಡಿದರು. ಇದರಲ್ಲಿ ಒಬ್ಬ ಅಭ್ಯರ್ಥಿಗೆ ಹುಲಿ ಗುರುತಿನ ಚಿನ್ಹೆಯನ್ನು ನೀಡಲಾಗಿದ್ದು ಅವನು ತನ್ನ ಭಾವಚಿತ್ರದ ಅಕ್ಕ ಪಕ್ಕದಲ್ಲಿ ಹುಲಿ ಚಿತ್ರವನ್ನು ನಮೂದಿಸಿ ಪೋಸ್ಟರ್ ಅನ್ನು ತಯಾರಿಸಿ ಮತ ಪ್ರಚಾರ ಮಾಡಿ ಎಲ್ಲರ ಮನೆಗೆದ್ದನು. ಎಲ್ಲಾ ಅಭ್ಯರ್ಥಿಗಳು ಶಾಲಾ ಸ್ವಚ್ಛತೆ, ಉತ್ತಮ ಪರಿಸರ, ಶಾಲಾ ಅಭಿವೃದ್ಧಿಯ ಆಶ್ವಾಸನೆಗಳನ್ನು ನೀಡಿ ಭರ್ಜರಿ ಪ್ರಚಾರ ಮಾಡಿದರು. ಎಲ್ಲ ಅಭ್ಯರ್ಥಿಗಳು ಖುದ್ದಾಗಿ ಪ್ರತಿಯೊಂದು ತರಗತಿಗೆ ಭೇಟಿ ನೀಡಿ ಅಲ್ಲಿರುವ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಮತದಾನದ ಪ್ರಚಾರ ಮಾಡಿದರು.
Comments
Post a Comment