ಶಾಲಾ ಮಟ್ಟದ ಪ್ರತಿಭಾ ಕಾರಂಜಿ
ಶಾಲಾ ಮಟ್ಟದ ಪ್ರತಿಭಾ ಕಾರಂಜಿ 2024-25
ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೇ ತಯಾರಿ ಮಾಡುವಲ್ಲಿ ಶಾಲಾ ಮಟ್ಟದಲ್ಲಿ ಆಯ್ಕೆ ಪ್ರಕ್ರಿಯೆಯನ್ನು ದಿನಾಂಕ 22/07/2024 ರಂದು GHPS ಹಳ್ಳಿಗೇರಿ ಶಾಲೆಯಲ್ಲಿ ನಡೆಸಲಾಯಿತು. ಎಲ್ಲ ವಿದ್ಯಾರ್ಥಿಗಳು ಅತಿ ಉತ್ತಮವಾದ ಪ್ರದರ್ಶನ ನೀಡಿದರು, ಅದರಲ್ಲಿ ಪ್ರತಿ ಹಲವರು ಆಯ್ಕೆ ಆದರು.
ಮುಖ್ಯ ಶಿಕ್ಷಕರ ಸಲಹೆಯಂತೆ ಹಾಗೂ ಎಲ್ಲ ತರಗತಿಯ ಶಿಕ್ಷಕರ ಮೆರೆಯಲ್ಲಿ 1ನೇ ತರಗತಿ ಇಂದ 4ನೇ ತರಗತಿ ಮಕ್ಕಳಿಗೆ ಮೊದಲಿಗೆ ಸ್ಪರ್ಧೆ ಪ್ರಾರಂಭಿಸಿದೆವು, ಕಂಠಪಾಠ, ಅಭಿನಯ ಗೀತೆ , ದೇಶಭಕ್ತಿ ಗೀತೆ , ಹೀಗೆ ಹಲವಾರು ಸ್ಪರ್ಧೆಗಳಲ್ಲಿ ಆ ಪುಟ್ಟ ಮುಗ್ದ ಮಕ್ಕಳು ತುಂಬಾ ಚನ್ನಾಗಿ ಭಾಗವಹಿಸಿದರು. ಭಾಗವಹಿಸಿದ ಮಕ್ಕಳಿಗೆ ಚಪ್ಪಾಳೆಗಳ ಮೂಲಕ ಅಭಿನಂದಿಸಿ. ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು. ಆಯ್ಕೆ ಆದ ಮಕ್ಕಳು ತುಂಬಾ ಖುಷಿ ಪಟ್ಟರು ಹಾಗು ಚನ್ನಾಗಿ ತಯಾರಿ ಮಾಡುತ್ತೇವೆ ಎಂದು ಹೇಳಿದರು.
5 ರಿಂದ 7ನೇ ತರಗತಿ ಅವರು ಸಹ ಎಲ್ಲ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು ತುಂಬಾ ಉತ್ತಮವಾದ ಪ್ರದರ್ಶನ ನೀಡಿದರು ಕ್ಲೇ ಮಾಡೆಲಿಂಗ್ ಅಂತೂ ಅದ್ಭುತವಾಗಿತ್ತು. ಒಬ್ಬ ವಿದ್ಯಾರ್ಥಿ ಪರಿಸರ ದ ಬಗ್ಗೆ ಅತಿ ಸುಂದರ ಚಿತ್ರದ ಮೂಲಕ ಹಸಿರು ನಮ್ಮ ಉಸಿರು ಎನ್ನುವ ಮುಖ್ಯ ಸಂದೇಶ ನೀಡಿದ್ದಾನೆ.
ನಮ್ಮ ಶಾಲೆಯ ೮ನೇ ತರಗತಿಯ ವಿದ್ಯಾರ್ಥಿನಿಯರು ಅತಿ ಸುಂದರ ರಂಗೋಲಿ ತೆಗೆಯುವ ಮೂಲಕ ಶಾಲಾ ಮಟ್ಟದ ಸ್ಪರ್ಧೆಗೆ ಇನ್ನು ಹೆಚ್ಚಿನ ಕಲೆ ತಂದರು. ಜಾನಪದ ನೃತ್ಯ, ದೇಶಭಕ್ತಿ ಗೀತೆ, ಘಝಲ್ ಈ ತರಹ ಮುಂತಾದ ಸ್ಪರ್ಧೆಗೆ ಭಾಗವಹಿಸಿ ನಮ್ಮ ಕಾರ್ಯಕ್ರಮದ ಮೆರಗು ಹೆಚ್ಚಿಸಿದರು. ನಮ್ಮ ಶಾಲಾ ಮಟ್ಟದಲ್ಲಿ ಆಯೋಜಿಸಿದ್ದ ಪ್ರತಿಭಾ ಕಾರಂಜಿ ಉತ್ತಮವಾಗಿ ನಡೆಯಿತು ಮತ್ತು ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಮೂಡುವಲ್ಲಿ ಒಂದು ಹೆಜ್ಜೆ ಮುಂದಾಯಿತು.
ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಮೂಡಿಸುವುದು .......
Comments
Post a Comment