ಗುರು ಪೂರ್ಣಿಮೆಯ ವಿಶೇಷತೆ
ಗುರು ಪೂರ್ಣಿಮೆಯ ವಿಶೇಷತೆ
ಕಲ್ಲೆ ಗ್ರಾಮದಲ್ಲಿ ಇರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿಯ ಮಕ್ಕಳು ಸ್ವತಃ ತಾವೇ ಅವಲೋಕನ ಮಾಡಿ , ಗುರುಗಳಿಗೆ ವಂದನೆ ಹೇಳುವ ಕುರಿತು ಮಾಡಿದ ಒಂದು ಕಾರ್ಯಕ್ರಮ . ಎಲ್ಲ ಏಳನೇ ತರಗತಿಯ ಮಕ್ಕಳು ಹರುಷದಿಂದ ಮತ್ತು ಹೊಂದಾಣಿಕೆಯಿಂದ ಕಾರ್ಯಕ್ರಮವನ್ನು ನಡೆಸಿ ಆ ಕಾರ್ಯಕ್ರಮಕ್ಕೆ ಮೆರಗು ತಂದರು .
ನಮ್ಮ ಶಾಲೆಯ ಪ್ರಧಾನ ಗುರುಗಳಾದ , ಶ್ರೀಯುತ ಗುರುಪುತ್ರಣವರ ಗುರುಗಳು ಅಧ್ಯಕ್ಷ ಸ್ಥಾನದಲ್ಲಿದ್ದು ಉಳಿದ ಸಹ ಶಿಕ್ಷಕರಾದ ಸಾತನ್ನವರ್ ಗುರುಗಳು , ಚಕ್ರಸಾಲಿ ಗುರುಗಳು , ಸಾವಿತ್ರಿ ಗುರುಗಳು ,ದೀಪಾ ಪತ್ತಾರ ಗುರುಗಳು, ಸಹ ಉಪಸ್ಥಿತರಿದ್ದರು . ತುಂಬಾ ಚೆನ್ನಾಗಿ ಮಕ್ಕಳು ಕಾರ್ಯನಿರ್ವಹಿಸಿದರು . ಮತ್ತು ತುಂಬಾ ವಿಧೇಯವಾಗಿ ನಮನವನ್ನು ಸಲ್ಲಿಸಿದರು .
ಎಲ್ಲ ಗುರುಗಳಿಗೆ ಡೈರಿ ಹೂವಿನ ಸಸಿಯನ್ನು ನೀಡುವುದರೊಂದಿಗೆ ಮಕ್ಕಳು ಎಲ್ಲ ಗುರುಗಳಿಗೆ ನಮನ ಸಲ್ಲಿಸಿದರು . ನಮ್ಮ ಶಾಲೆಯ ಪ್ರಧಾನ ಗುರುಗಳಾದ ಶ್ರೀಯುತ ಗುರುಪುತ್ರಣವರ್ ಗುರುಗಳು " ಹರ ಮುನಿದರು ಗುರು ಕಾಯುವನು " ಎಂಬ ವೇದ ವಾಕ್ಯವನ್ನು ಪರಿಚಯಿಸಿ ಅದರೊಂದಿಗೆ ಗುರುವಿನ ಮಹತ್ವವನ್ನು ತಿಳಿಸಿದರು . ಮತ್ತು ನಮ್ಮ ಶಾಲೆಯ ಪ್ರಧಾನ ಗುರುಗಳು ವಿದ್ಯಾರ್ಥಿಗಳು ಉಡುಗೊರೆಯಾಗಿ ತಂದ ಡೈರಿ ಹೂವಿನ ಸಸಿಯನ್ನು ವಿದ್ಯಾರ್ಥಿಗಳಿಗೆ ನೀಡಿ, ನೆಟ್ಟು ಪೋಷಿಸಿ ಎಂಬ ಕಿವಿಮಾತನ್ನು ವಿದ್ಯಾರ್ಥಿಗಳಿಗೆ ಅವುಗಳ ಜವಾಬ್ದಾರಿಯನ್ನು ನೀಡಿದರು . ಆ ಎಲ್ಲ ಸಸಿಗಳ ಮೇಲುಸ್ತುವಾರಿಯನ್ನು ಶಾಲೆಯ ವಿದ್ಯಾರ್ಥಿನಿಯಾದ ನೀರಾವರಿ ಮಂತ್ರಿಗಳಾದ ಸೌಜನ್ಯ ವಗೆನ್ನವರ ಗೆ ತಿಳಿಸಿದರು . ನಮ್ಮ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿಗಳಾದ ರುದ್ರಗೌಡ ರಾಚನಗೌಡ್ರ್, ವೀವೆಕಾನಂದ ವಗೆನ್ನವರ , ಮತ್ತು ಲಕ್ಷ್ಮಿ ವಗೆನ್ನವರ , ಮೂವರು ವಿದ್ಯಾರ್ಥಿಗಳು ಗುರುಗಳಿಗೆ ತಮ್ಮ ತೊದಲು ನುಡಿಯಲ್ಲಿ ಧನ್ಯವಾದ ಹೇಳಿ ಈ ಕಾರ್ಯಕ್ರಮಕ್ಕೆ ವಿನಂತಿ ನೀಡಿದರು.
Comments
Post a Comment