ಶಾಲಾ ಸಂಸತ್ ಚುನಾವಣೆ

                                                 

                                              ಶಾಲಾ ಸಂಸತ್ ಚುನಾವಣೆ 2024-2025

                                          ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಪ್ರಕ್ರಿಯೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಲು ವಿದ್ಯಾರ್ಥಿ ಸಂಸತ್ ಚುನಾವಣೆಯನ್ನು ದಿನಾಂಕ 16/07/2024 ರಂದು ನಮ್ಮ ಶಾಲೆ GHPS ತಿಮ್ಮಾಪುರದಲ್ಲಿ ನಡೆಸಲಾಯಿತು.

                                           ಸಾರ್ವತ್ರಿಕವಾಗಿ ಜರುಗುವ ಮಹಾ ಚುನಾವಣೆಗಳ ಮಾದರಿಯಲ್ಲಿಯೇ ಎಲ್ಲ ಹಂತಗಳನ್ನು ಬಳಸಿ ಶಾಲಾ ಸಂಸತ್ ಚುನಾವಣಾ ಪ್ರಕ್ರಿಯೆ ಅಣಕು ಮತದಾನದ ಮೂಲಕ ನಡೆಸಲಾಯಿತು. ಶಾಲಾ ಸಂಸತ್ ರಚನೆಗಾಗಿ ಈ ಚುನಾವಣೆಯಲ್ಲಿ ಚುನಾವಣೆ ನಡೆಸಲು ಅಧಿಸೂಚನೆ, ದಿನಾಂಕ-ಘೋಷಣೆ, ನಾಮಪತ್ರ ಸಲ್ಲಿಕೆ, ನಾಮಪತ್ರಗಳ ಪರೀಶೀಲನೆ, ಪ್ರಚಾರಕ್ಕಾಗಿ ಸಮಯ ನಿಗದಿ,ಮತಗಟ್ಟೆ ಸ್ಥಾಪನೆ, ಮತದಾನ ಪ್ರಕ್ರಿಯೆಕ್ಕಾಗಿ ಪ್ರಿಸೈಡಿಂಗ್ ಮತ್ತು ಪೋಲಿಂಗ ಆಫೀಸರುಗಳಿಗೆ ಕರ್ತವ್ಯ ಹಂಚಿಕೆ, ಮತಗಟ್ಟೆಯೊಳಗೆ ನಿಯಂತ್ರಣ, ಮತದಾರರ ಯಾದಿ, ವೋಟಿಂಗ್ ಕಂಪಾರ್ಟ್ ಮೆಂಟ್ ಮಾಡಲಾಗಿತ್ತು. ಮತದಾನ ದಿನಕ್ಕಿಂತ ಮೂರು ದಿನ ಮುಂಚೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

ಮತದಾನದ ಪ್ರಥಮ ಹಂತ ನಾಮಪತ್ರ ಸಲ್ಲಿಕೆ
                                      19 ವಿದ್ಯಾರ್ಥಿಗಳು ಡೊಳ್ಳು ಬಾರಿಸುವ ಮೂಲಕ ಆಗಮಿಸಿ ಪ್ರಚಾರ ಮಾಡುತ್ತಾ ನಾಮಪತ್ರವನ್ನು ಸಲ್ಲಿಸಿದರು. ಅಭ್ಯರ್ಥಿಗಳ ನಾಮಪತ್ರವನ್ನು ಪರಿಶೀಲಿಸಿ 17 ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಗುರುತಿನ ಚಿಹ್ನೆಯನ್ನು  ನೀಡಿದೆವು. ಇನ್ನುಳಿದ ಇಬ್ಬರು ವಿದ್ಯಾರ್ಥಿಗಳನ್ನು ಅವಿರೋಧ ವಾಗಿ  ಆಯ್ಕೆ ಮಾಡಿದೆವು. ಇದರಿಂದ ಚುನಾವಣೆಗೂ ಮುನ್ನ ನಾಮ ಪತ್ರಿಕೆಯನ್ನು ಸಲ್ಲಿಸಬೇಕು ಎಂಬ ಅರಿವು ವಿದ್ಯಾರ್ಥಿಗಳಲ್ಲಿ  ಮೂಡುವುದು.






ಭರ್ಜರಿ ಮತ ಪ್ರಚಾರ

                      17 ಜನ ಅಭ್ಯರ್ಥಿಗಳು ಡೊಳ್ಳು ಬಾರಿಸುವ ಮೂಲಕ ಮತ ಪ್ರಚಾರ ಮಾಡಿದರು ನಂತರ ಎಲ್ಲರೂ ಪ್ರತಿಯೊಂದು ತರಗತಿಗೆ ತೆರಳಿ. ಅಲ್ಲಿರುವ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಆಶ್ವಾಸನೆಯನ್ನು ನೀಡುವ ಮೂಲಕ ಭರ್ಜರಿ ಪ್ರಚಾರ ಮಾಡಿದರು ಶಾಲಾ ಸ್ವಚ್ಛತೆ ಶಾಲಾ ಅಭಿವೃದ್ಧಿ ಹೀಗೆ ಮುಂತಾದ ಆಶ್ವಾಸನೆಗಳನ್ನು ನೀಡುವ ಮೂಲಕ ಪ್ರಚಾರ ಮಾಡಿದರು ಇದರಲ್ಲಿ ಒಬ್ಬ ವಿದ್ಯಾರ್ಥಿಗೆ ಹುಲಿ ಗುರುತಿನ ಚಿನ್ಹೆಯನ್ನು ನೀಡಿದ್ದು ಅವನು ತನ್ನ ಭಾವಚಿತ್ರದ ಅಕ್ಕ ಪಕ್ಕದಲ್ಲಿ ಹುಲಿಯ ಚಿತ್ರವನ್ನು ನಮೂದಿಸಿರುವ ಪೋಸ್ಟರ್ ಅನ್ನು ತಯಾರಿಸಿ ಹಾಗೂ ಹುಲಿ ಮುಖದ ಚಿತ್ರವನ್ನು ಬಿಡಿಸಿ ಅದನ್ನು ಎಲ್ಲರಿಗೂ ತೋರಿಸಿರುವ ಮೂಲಕ ಭರ್ಜರಿ ಮತ ಪ್ರಚಾರ ಮಾಡಿ ಎಲ್ಲರ ಮನ ಗೆದ್ದನು






ಮತದಾನ 

                               ಎಲ್ಲ ಸಿಬ್ಬಂದಿಗಳು ಮತ ಪೆಟ್ಟಿಗೆಯನ್ನು ಹಿಡಿದು ಮತ್ತೆ ಕೇಂದ್ರಕ್ಕೆ ಆಗಮಿಸಿ ಕರ್ತವ್ಯಕ್ಕೆ ಹಾಜರಾದರೂ ಎಲ್ಲ ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ಆಗಮಿಸಿ ತಮ್ಮ ಆಧಾರ್ ಕಾರ್ಡನ್ನು ಪರಿಶೀಲಿಸಿ ಮತದಾನ ಮಾಡಿದರು. ಅಡುಗೆ ಸಿಬ್ಬಂದಿಗಳು, ಶಿಕ್ಷಕರು, SDMC ಸದಸ್ಯರು, ಗ್ರಾಮಸ್ಥರು, ಆಶಾ ಕಾರ್ಯಕರ್ತೆಯರು ಎಲ್ಲರೂ ಮತದಾನದಲ್ಲಿ ಪಾಲ್ಗೊಂಡಿದ್ದರು. ಮತದಾನದ ಸಮಯದಲ್ಲಿ ಗಲಾಟೆಗಳಾದಲ್ಲಿ ರಕ್ಷಣಾ ಸಿಬ್ಬಂದಿಗಳು ಲಘು ಲಾಟಿ ಪ್ರಹಾರ ನಡೆಸಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿದರು. ಮತದಾನ ಕಾರ್ಯ ಮುಗಿದ ನಂತರ ಮತ ಪೆಟ್ಟಿಗೆಯನ್ನು ಭದ್ರವಾಗಿ ಕಟ್ಟಿ ಸ್ಟ್ರಾಂಗ್ ರೂಮಿಗೆ ರವಾನಿಸಲಾಯಿತು.





ಎಲ್ಲರ ಚಿತ್ತ ಮತ ಎಣಿಕೆಯತ್ತ 


                                                          ಮತದಾನ ಕಾರ್ಯ ಪೂರ್ಣಗೊಂಡ ನಂತರ ಮತ ಎಣಿಕೆ ಕಾರ್ಯಕ್ರಮವನ್ನು ಆಯೋಜಿಸಿದೆವು. ಆಗ ಎಲ್ಲರ ಚಿತ್ತ ಮತ ಎಣಿಕೆ ಎತ್ತ ಸಾಗಿತ್ತು.  
                                                         ಚುನಾವಣೆಯನ್ನು ಉದ್ದೇಶಿಸಿ ನಮ್ಮ ಶಾಲೆಯ ಶಿಕ್ಷಕರು ಮಾತನಾಡಿ ಪ್ರಜಾಪ್ರಭುತ್ವ ಪದ್ಧತಿಯ ಬಗ್ಗೆ ತಿಳಿಸಿದರು. ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಇರುವ ಸರ್ಕಾರ ಪ್ರಜಾಪ್ರಭುತ್ವವಾದರೆ ವಿದ್ಯಾರ್ಥಿಗಳಿಂದ ವಿದ್ಯಾರ್ಥಿಗಳಿಗೋಸ್ಕರ ವಿದ್ಯಾರ್ಥಿಗಳಿಗಾಗಿ  ಇರುವುದೇ ಶಾಲಾ ಸಂಸತ್ತು ಎಂದು ಹೇಳಿದರು. ನಂತರ ಫಲಿತಾಂಶವನ್ನು ಘೋಷಣೆ ಮಾಡಲಾಯಿತು. ಪ್ರಧಾನ ಮಂತ್ರಿ, ಉಪ ಪ್ರಧಾನ ಮಂತ್ರಿ, ಆರೋಗ್ಯ, ಕ್ರೀಡಾ, ಶಿಕ್ಷಣ , ಸಾಂಸ್ಕೃತಿಕ ಹೀಗೆ ಇತ್ಯಾದಿ ವಿಭಾಗಗಳಿಗೆ ನಾಯಕರನ್ನು ನೇಮಕ ಮಾಡಲಾಯಿತು. ವಿದ್ಯಾರ್ಥಿಗಳು ಡೊಳ್ಳು ಬಾರಿಸುವ ಮೂಲಕ ವಿಜಯದ ಸಂಭ್ರಮಾಚರಣೆಯನ್ನು ಆಚರಿಸಿದರು. ಇದೇ ಸಂದರ್ಭದಲ್ಲಿ ಪ್ರಪ್ರಥಮ ಕ್ಯಾಬಿನೆಟ್ ಸಭೆಯನ್ನು ನಡೆಸಿ ವಿದ್ಯಾರ್ಥಿ ಪ್ರಧಾನ ಮಂತ್ರಿಯಾದ ಕುಮಾರಿ ರಕ್ಷಿತಾ ಜಾಲಗರ ಎಲ್ಲ ಮಂತ್ರಿ ಮಂಡಲದವರಿಗೂ ಅಭಿನಂದನೆ ಸಲ್ಲಿಸಿದರು.
                                                       ಹೀಗೆ ನೈಜ ಚುನಾವಣೆಯಂತೆ ಎಲ್ಲ ಹಂತಗಳನ್ನು ಬಳಸಿ ಶಾಲಾ ಸಂಸತ್ ಚುನಾವಣೆ ನಡೆಸಿದೆವು.






Comments