ಕನ್ನಡ ರಾಜ್ಯೋತ್ಸವ

  



                                                   ನಾವು ನವೆಂಬರ್ ೧ ರಂದು ನಮ್ಮ ಶಾಲೆಯಲ್ಲಿ ೬೮ ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿದೆವು. ಕನ್ನಡ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸುವುದರ ಮೂಲಕ ಕಾರ್ಯಕ್ರಮವನ್ನು ಆರಂಭಿಸಿದೆವು. ಕೆಲವು ಮಕ್ಕಳು ಕರ್ನಾಟಕ ಮಾತೆಯ ವೇಷಭೂಷಣವನ್ನು ಧರಿಸಿಕೊಂಡು ಬಂದಿದ್ದರು. ಕರ್ನಾಟಕ ಮಾತೆಯ ಭಾವಚಿತ್ರವನ್ನು ಹಿಡಿದು ಕನ್ನಡ ಘೋಷಣೆಗಳೊಂದಿಗೆ ಮೆರವಣಿಗೆ ಮಾಡಿ ಕನ್ನಡ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದೆವು. ಎಲ್ಲ ಮಕ್ಕಳು,ಶಿಕ್ಷಕರು, SDMC ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಶೋಭೆಯನ್ನು ತಂದರು. ಎಲ್ಲ ಮಕ್ಕಳು ಕನ್ನಡ ರಾಜ್ಯೋತ್ಸವದ ಬಗ್ಗೆ ಭಾಷಣ, ಹಾಡುಗಳನ್ನು ಹಾಡಿದರು.  ಕೊನೆಯದಾಗಿ ಕನ್ನಡ ಗೀತೆಗಳನ್ನು ಆಲಿಸುವುದರ ಮೂಲಕ ಕಾರ್ಯಕ್ರಮವನ್ನು ಸಂಪನ್ನಗೊಳಿಸಿದೆವು. 


Comments