ಕನ್ನಡ ರಾಜ್ಯೋತ್ಸವ - ನಮ್ಮ ಹಬ್ಬ
ಕನ್ನಡಿಗರೆಲ್ಲಾ ಸಂಭ್ರಮದಿಂದ ಆಚರಿಸುವ ಹಬ್ಬ. ನಾವೆಲ್ಲಾ ನಮ್ಮ ಶಾಲೆಯಲ್ಲಿ ಅದ್ಬುತವಾಗಿ ಆಚರಿಸಿದೆವು. ನಮ್ಮ ಶಾಲೆಯಿಂದ ನಾವು ಊರೆಲ್ಲಾ ಪರೇಡ್ ಮಾಡಿ ಕನ್ನಡ ನಾಡಿನ ಸಾರವನ್ನು ಬೀರುವ ಪದ್ಯಗಳನ್ನು ಹಾಡಿ ಊರಿನ ಜನರೆಲ್ಲಾ ಕನ್ನಡದ ಬಗೆಗೆ ಗೌರವ ಮೂಡಿಸುವ ಕಾರ್ಯವನ್ನು ಮಾಡಿದೆವು. ನಮ್ಮ ಪರೇಡನೊಂದಿಗೆ ನಮ್ಮ ಕನ್ನಡದ ತೇರನ್ನು ಅಲಂಕರಿಸಿ ನಮ್ಮ ಸಾಹಿತ್ಯ ರತ್ನಗಳನ್ನು ನಮ್ಮ ವಿದ್ಯಾರ್ಥಿಗಳಿಗೂ ಹಾಗೂ ನಮ್ಮ ಊರಿನ ಜನರಿಗೂ ತಿಳಿಸುವ ಪ್ರಯತ್ನವನ್ನು ಮಾಡಿ ಅದನ್ನು ರೂಢಿಯಲ್ಲಿ ತಂದು ಪ್ರದರ್ಶನ ಮಾಡಲಾಯಿತು. 😊
Comments
Post a Comment