ಪ್ರಾಯೋಗಿಕ ಪರೀಕ್ಷೆ 🧪⚗️
ಪ್ರಾಯೋಗಿಕ ಪರೀಕ್ಷೆ 🧪⚗️
ವಿಜ್ಞಾನ ಎನ್ನುವುದು ಕೇವಲ ಪುಸ್ತಕದ ಜ್ಞಾನದಿಂದ ತಿಳಿಯುವುದಲ್ಲ , ಬದಲಾಗಿ ಪ್ರಾಯೋಗಿಕ ಪರೀಕ್ಷೆಯ ಮೂಲಕ ಜ್ಞಾನ ಭಂಡಾರವನ್ನು ಹೆಚ್ಚಿಸುವ ಸಾಧನವಾಗಿದೆ , ಇದರ ಅನುಸಾರವಾಗಿ ನನ್ನ ವಿಜ್ಞಾನದ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆಯ ಮಹತ್ವವನ್ನು ತಿಳಿಸುವ ಒಂದು ಸಣ್ಣ ಪ್ರಯತ್ನವಾಗಿದೆ. ಪ್ರಯೋಗದ ಮೂಲಕ ವಿದ್ಯಾರ್ಥಿಗಳು ತಮ್ಮ ಪುನರಾವರ್ತಿತ ಪರೀಕ್ಷೆಯ ಮೂಲಕ ವಿಷಯವನ್ನು ತುಂಬಾ ಆಳವಾಗಿ ಅಧ್ಯಯನ ಮಾಡುತ್ತಾರೆ , ಇದರಿಂದ ಅವರ ಜ್ಞಾನ ಹೆಚ್ಚಳವಾಗುತ್ತದೆ .
ಇದೆ ರೀತಿ ನನ್ನ ವಿದ್ಯಾರ್ಥಿಗಳಿಗೆ ಪದಾರ್ಥಗಳನ್ನು ಬೇರ್ಪಡಿಸುವ ವಿಧಾನದಲ್ಲಿ ಒಂದಾದ ಸೋಸುವಿಕೆಯನ್ನು ನನ್ನ ತರಗತಿಯ ಅವಧಿಯಲ್ಲಿ ಮಾಡಲು ಅವಕಾಶ ಕಲ್ಪಿಸಿದೆ , ಇದು ವಿದ್ಯಾರ್ಥಿಗಳಿಗೆ ಬಹಳ ಉತ್ತಮವಾದ ಅವಕಾಶವಾಗಿತ್ತು , ಅವರಿಗೆ ಪ್ರಯೋಗದ ಮೂಲಕ ಹೇಗೆ ಪದಾರ್ಥಗಳನ್ನು ಬೇರ್ಪಡಿಸುವುದು ಎಂಬುದನ್ನು ತಿಳಿದುಕೊಳ್ಳಲು ಸಹಾಯವಾಯಿತು,ಇದರಿಂದ ಎಲ್ಲ ವಿದ್ಯಾರ್ಥಿಗಳು ಸಂತೋಷ ಪಟ್ಟರು .
Comments
Post a Comment