ಅಂತರಾಷ್ಟ್ರೀಯ ಯೋಗ ದಿನಾಚರಣೆ - ನಮ್ಮ ಶಾಲೆಯ ವಿಶೇಷ ಆಚರಣೆ
ಅಂತರಾಷ್ಟ್ರೀಯ ಯೋಗ ದಿನಾಚರಣೆ
ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನವನ್ನು ನಮ್ಮ ಶಾಲೆಯಲ್ಲಿ ಉತ್ಸಾಹದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದರು.ಪ್ರಾರಂಭದಲ್ಲಿ ಮಕ್ಕಳಿಗೆ ಯೋಗದ ಮಹತ್ವದ ಕುರಿತು ಶಿಕ್ಷಕರು ವಿವರಿಸಿದರು. ಅವರು ಯೋಗದ ಉಪಯೋಗಗಳು ಹಾಗೂ ಇದರಿಂದ ಲಭಿಸುವ ಶಾರೀರಿಕ ಮತ್ತು ಮಾನಸಿಕ ಲಾಭಗಳ ಕುರಿತು ಮಾತನಾಡಿದರು.ಬಳಿಕ ಶಾಲಾ ಮೈದಾನದಲ್ಲಿ ಮಕ್ಕಳು ವಿವಿಧ ಯೋಗಾಸನಗಳನ್ನು ಮಾಡಿದರು.
ತಡಾಸನ, ವೃಕ್ಷಾಸನ, ಭುಜಂಗಾಸನ, ಪಾದಹಸ್ತಾಸನ, ನೌಕಾಸನ, ಶವಾಸನ ಮತ್ತು ಪ್ರಣಾಯಾಮವನ್ನು ಎಲ್ಲರೂ ಶಿಸ್ತು ಮತ್ತು ಉತ್ಸಾಹದಿಂದ ಮಾಡಿದರು.ಯೋಗಾಸನದ ಪ್ರತಿ ಕ್ರಮವನ್ನು ನಮ್ಮ ಕ್ರೀಡಾ ಶಿಕ್ಷಕರು ಮಕ್ಕಳಿಗೆ ವಿವರಿಸುತ್ತಾ ಮಾರ್ಗದರ್ಶನ ನೀಡಿದರು.
ಈ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ಯೋಗದ ಬಗ್ಗೆ ಜ್ಞಾನ ಹೆಚ್ಚಾಯಿತು ಮತ್ತು ಶಾರೀರಿಕ ಮಾನಸಿಕ ಒತ್ತಡವನ್ನು ನಿವಾರಣೆಗೆ ಯೋಗ ಸಹಾಯಕ ಎಂಬ ಅರಿವು ಮೂಡಿತು.
ಧನ್ಯವಾದಗಳು
Comments
Post a Comment