ಪರಿಸರ ಜಾಗೃತಿ ಮೂಡಿಸುವ ಮತ್ತು ಮಕ್ಕಳಲ್ಲಿ ಪ್ರೀತಿ, ಸಂಬಂಧ ಮತ್ತು ಹೊಣೆಗಾರಿಕೆಯನ್ನು ಬೆಳೆಸುವ ಉದ್ದೇಶದಿಂದ, ನಮ್ಮ ಶಾಲೆಯಲ್ಲಿ "ಪ್ರತಿಯೊಂದು ಮಗುವೂ, ತಾಯಿಗೊಂದು ಮರ" ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದ ಭಾಗವಾಗಿ, ಪ್ರತಿಯೊಂದು ವಿದ್ಯಾರ್ಥಿಯು ತನ್ನ ತಾಯಿಯೊಂದಿಗೆ ಸೇರಿ ಒಂದು ಗಿಡವನ್ನು ನೆಡುವ ಮೂಲಕ ಪ್ರಕೃತಿಯ ಬಗ್ಗೆ ಕಾಳಜಿಯ ಮೌಲ್ಯವನ್ನು ಅಳವಡಿಸಿಕೊಂಡರು. ತಾಯಿಯೆಂದರೆ ಪೋಷಣೆ, ತಾಯಿಯೆಂದರೆ ಬೆಳೆಸುವ ಶಕ್ತಿ. ಈ ತತ್ವವನ್ನು ಗಿಡ ನೆಡುವ ಮೂಲಕ ಮಕ್ಕಳಿಗೆ ನೇರವಾಗಿ ಅನುಭವಿಸಲು ಅವಕಾಶವಾಯಿತು.
Comments
Post a Comment