ಮಕ್ಕಳ ಜವಾಬ್ದಾರಿ ಮನೋಭಾವನೆಯನ್ನು ನೋಡಿ ಸಂತೋಷವಾಯಿತು!
ಮಳೆಗಾಲದ ಹಿನ್ನೆಲೆಯಲ್ಲಿ, ಮಕ್ಕಳಿಗೆ “ಬಿಸಿನೀರಿನ ಬಾಟಲಿ ತಂದುಕೊಳ್ಳಿ” ಎಂದು ಹೇಳಿದ್ದೆ. ನಾಳೆಗೆ ತಯಾರಿ ಆಗಬೇಕು ಎಂಬ ಉದ್ದೇಶದಿಂದ. ಸಂತೋಷದ ಸಂಗತಿ ಏನೆಂದರೆ– ಎಲ್ಲಾ ಮಕ್ಕಳು 2 ಲೀಟರ್ ಬಿಸಿನೀರಿನ ಬಾಟಲ್‌ಗಳನ್ನು ತಂದಿದ್ದರು. ಅವರ ಜವಾಬ್ದಾರಿ ಮನೋಭಾವನೆ ಮತ್ತು ಪಾಲನೆಗೆ ನಾನು ತುಂಬಾ ಹರ್ಷಪಟ್ಟೆ. ಇಂತಹ ಚಿಕ್ಕ ಕಾರ್ಯಗಳ ಮೂಲಕ ಮಕ್ಕಳಲ್ಲಿ ಶಿಸ್ತು ಮತ್ತು ಜವಾಬ್ದಾರಿತನ ಬೆಳೆಸಬಹುದು ಎಂಬ ನಂಬಿಕೆ ಮತ್ತಷ್ಟು ಬಲವಾಯಿತು.
Comments
Post a Comment