2022-23 ಶಾಲಾ ಶೈಕ್ಷಣಿಕ ಪ್ರವಾಸ
ಡಿಸೆಂಬರ್ 11 ಶನಿವಾರ ರಾತ್ರಿ ನಾವು ಶಾಲಾ ಶೈಕ್ಷಣಿಕ ಪ್ರವಾಸ 2022 ಮತ್ತು 23ನೇ ಸಾಲಿನ ಪ್ರವಾಸಕ್ಕೆ ಹೊರಟೆವು ಶನಿವಾರ ರಾತ್ರಿ ನಾವು ಕುರುಬಗಟ್ಟಿಯಿಂದ ಕೂಡಲಸಂಗಮಕ್ಕೆ ಹೊರಟೆವು ಎಲ್ಲಾ ಮಕ್ಕಳು ತುಂಬಾ ಖುಷಿಯಿಂದ ಮೋಜು ಮತ್ತು ಮಸ್ತಿಯಿಂದ ಪ್ರವಾಸಕ್ಕೆ ಹೊರಟೆವು ಮುಂಜಾನೆ ಬೆಳಗಿನ ಜಾವ 6:00ಗೆ ನಾವು ಕೂಡಲಸಂಗಮಕ್ಕೆ ತಲುಪಿದೆವು ತದನಂತರ ಬೆಳಗಿನ ಉಪಹಾರ ಅಲ್ಲಿಯೆ ಆಯಿತು ಎಲ್ಲ ವಿದ್ಯಾರ್ಥಿಗಳು ಬಗೆ ಬಗೆಯ ಖಾದ್ಯಗಳನ್ನು ಕೂಡ ತಂದಿದ್ದರು , ಕೂಡಲಸಂಗಮನದಲ್ಲಿ ಬಸವಣ್ಣ ಐಕ್ಯವಾದ ಸ್ಥಳವನ್ನು ನೋಡಿದೆವು ಮತ್ತು ಅಲ್ಲಿನ ಇತಿಹಾಸವನ್ನು ಕೂಡ ಮಕ್ಕಳೊಂದಿಗೆ ನಾವು ಕೂಡ ನಮಗೆ ಗೊತ್ತಿರದ ಮಾಹಿತಿಯನ್ನು ಕೂಡ ತಿಳಿದುಕೊಂಡೆವು ತದನಂತರ ನಮ್ಮ ಪ್ರಯಾಣ ಐಹೊಳೆ ಕಡ ಸಾಗಿತ್ತು ಅಲ್ಲಿ ಪುರಾತನ ಕಾಲದ ದೇವಾಲಯಗಳನ್ನು ಮತ್ತು ಅಲ್ಲಿದೆ ಇತಿಹಾಸವನ್ನು ನೋಡಿದೆವು. ನಂತರ ಅಲ್ಲಿರುವ ಮ್ಯೂಸಿಯಂನಲ್ಲಿ ಕೆಲವೊಂದು ಪುರಾತನ ಕಾಲದ ವಸ್ತು ಗಳನ್ನು ನೋಡಿದೆವು ತದನಂತರ ಪಟ್ಟದಕಲ್ಲು ಬದಾಮಿ ಬನಶಂಕರಿ ಮಹಾಕೂಟ ಶಿವಯೋಗ ಮಂದಿರ ಹೋದೆವು ಎಲ್ಲ ವಿದ್ಯಾರ್ಥಿಗಳು ಪ್ರವಾಸವನ್ನು ಖುಷಿಯಿಂದ ಮಾಡಿದರು,
Comments
Post a Comment