ಸೃಜನಶೀಲ ವಿದ್ಯಾರ್ಥಿಗಳ ಬೀಳ್ಕೊಟ್ಟ. ಸಮಯ
ಸೃಜನಶೀಲ ವಿದ್ಯಾರ್ಥಿಗಳ ಬೀಳ್ಕೊಟ್ಟ. ಸಮಯ
ನಮ್ಮ ಶಾಲೆಯಲ್ಲಿ ಶುಕ್ರವಾರ 15/03/2024. ನಾವು ಸರಸ್ವತಿ ಪೂಜಾ ಹಾಗೂ ಏಳನೇ ತರಗತಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಿದ್ದವು ಈ ಕಾರ್ಯಕ್ರಮದಲ್ಲಿ ಎಲ್ಲಾ ಸ್‌ಡಿಎಂಸಿ ಸಭೆಯ ಸದಸ್ಯರು ಮತ್ತು ಶಾಲೆಯ ಮುಖ್ಯ ಗುರುಗಳು ಮತ್ತು ಗುರು ಮಾತೆಯರು ಹಾಜರಿದ್ದು ಮುದ್ದು ಮಕ್ಕಳು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ತದನಂತರ ಕಾರ್ಯಕ್ರಮದಲ್ಲಿ ಸರಸ್ವತಿ ಪೂಜೆಯನ್ನು ಮಾಡಿ ನಂತರ ಸರಸ್ವತಿಗೆ ನಮ್ಮ ವಿದ್ಯಾರ್ಥಿಗಳ ಮುಂದಿನ ಗುರಿ ಮತ್ತು ಕನಸುಗಳು ನನಸಾಗಲೆಂದು ಕೇಳಿಕೊಂಡು ತದನಂತರ ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿಗಳಿಗೆ ನಮ್ಮ ಶಾಲೆಯ ಮಕ್ಕಳಿಗೆ ಕೋಕೋ ಆಟದಲ್ಲಿ ಸಹಾಯ ಮಾಡಿದಂತಹವರಿಗೆ ಸನ್ಮಾನ ಮಾಡಲಾಯಿತು ಮತ್ತು ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿಗಳಿಗೆ ಪಡೆದ ಅಂಕಗಳ ಆಧಾರದ ಮೇಲೆ ಬಹುಮಾನವನ್ನು ವಿತರಿಸಲಾಯಿತು. ಮತ್ತು ಅವರ ಪಠ್ಯೇತರ ಚಟುವಟಿಕೆಗಳಿಗೂ ಕೂಡ ಬಹುಮಾನವನ್ನು ಕೊಡಲಾಯಿತು. ನಮ್ಮ 7ವರ್ಗದ ಮಕ್ಕಳು ವರ್ಗ ಮಕ್ಕಳು ರಾಮನ್ ಅವಾರ್ಡ್ ಪ್ರಥಮ ಬಹುಮಾನ ತೆಗೆದುಕೊಂಡುದ್ದಕ್ಕಾಗಿ ಮತ್ತು ಕವನ ವಾಚನದಲ್ಲಿ ರಾಜ್ಯಮಟ್ಟಕ್ಕೆ ಎರಡನೇ ಬಹುಮಾನ ತೆಗೆದುಕೊಂಡದ್ದಕ್ಕಾಗಿ ಆ ಮಕ್ಕಳಿಗೆ ಸನ್ಮಾನವನ್ನು ಮಾಡಲಾಯಿತು ನಂತರ ಕೆಲವು ಶಿಕ್ಷಕರು ಮಕ್ಕಳ ಜೊತೆಗೆ ತಮ್ಮ ನೆನಪುಗಳ ಸಿಹಿ ಬುತ್ತಿಯನ್ನು ಹಂಚಿಕೊಂಡರು ಮಕ್ಕಳು ಕೂಡ ತಾವು ಏಳು ವರ್ಷಗಳ ಕಾಲ ಕಲಿತು ಸಾಗಿ ಬಂದೆ ನೆನಪಿನ ಬುತ್ತಿಯನ್ನು ಬಿಚ್ಚಿದರು. ಅದು ''ಕವನ ಕವಿತೆಗಳ ಶಿಕ್ಷಕರ ಗುಣಗಳಿಗನ್ವಯ ವಾಗಿ ತುಂಬಿತ್ತು'' ಅದನ್ನು ಕೇಳಲು ಇಂಪು ಕೇಳಿದ ವರಮಾನ ತಂಪು ಸೃಜನಶೀಲ ವಿದ್ಯಾರ್ಥಿಗಳಾದ ನಮ್ಮ ವಿದ್ಯಾರ್ಥಿಗಳನ್ನು ಶಾಲೆಯ ವತಿಯಿಂದ ಈ ಕಾರ್ಯಕ್ರಮದಲ್ಲಿ ಹರಸಿ ಆಶೀರ್ವದಿಸಿ ಬಿಳ್ಕೊಡಲಾಯಿತು. ಇದೊಂದು ಶುಭ ಸನ್ಮಾನ ಸಂದರ್ಭ ಸೃಜನಶೀಲ ವಿದ್ಯಾರ್ಥಿಗಳಿಗೆ ನಮ್ಮ ಕಾರ್ಯಕ್ರಮದಲ್ಲಿ ವರ್ಗದ ಮಕ್ಕಳು ಕೂಡ ತಮ್ಮ ಅನುಭವಗಳನ್ನು ಸುಗಮವಾಗಿ ಸರಳವಾಗಿ ಹಂಚಿಕೊಂಡರು. ಎಲ್ಲಾ ಗಣ್ಯರು ಮತ್ತು ಮಕ್ಕಳು ನಮ್ಮ ವಿದ್ಯಾ ಪೋಷಕ ಸಂಸ್ಥೆಯ ಕೊಡುಗೆ ಸಹಾಯ ನೆನಪಿಸಿ ಧನ್ಯವಾದಗಳು ಕೂಡ ತಿಳಿಸಿದರು ನಮ್ಮ ಕೆಲವು ಮಕ್ಕಳು ನಮ್ಮ ವಿದ್ಯಾಪೋಷಕ ಸಂಸ್ಥೆಯೊಂದಿಗೆ ನ ಕಾರ್ಯಕ್ರಮಗಳನ್ನು ತಮ್ಮ ಮಾತಿನಲ್ಲಿ ನುಡಿದರು ಮತ್ತು ತಮ್ಮ ನೆನಪುಗಳನ್ನು ಕೂಡ ಹಂಚಿಕೊಂಡರು. ಇದೊಂದು ಸುಂದರವಾದ ಸೂ ಸಮಯ ನಮ್ಮ ಮುದ್ದು ಮಕ್ಕಳಿಗೆ ಬೀಳ್ಕೊಟ್ಟ ಸಮಯ.
Comments
Post a Comment