ಕ್ರಿಯಾತ್ಮಕ ನಮ್ಮ ಮಕ್ಕಳ ಗುಣ.
ಕ್ರಿಯಾತ್ಮಕ ನಮ್ಮ ಮಕ್ಕಳ ಗುಣ.
ನಮ್ಮ ಶಾಲೆಯ ಮಕ್ಕಳಿಗೆ ಬಿಳ್ಕೊಡುವ ಸಮಾರಂಭದಲ್ಲಿ ಮಕ್ಕಳು ತಮ್ಮ ಅನುಭವವನ್ನು ಕವನಗಳ ಮೂಲಕ ಹಂಚಿಕೊಂಡರು ಆ ಕವನಗಳು ಶಿಕ್ಷಕರ ಗುಣಗಳನ್ನು ಮಕ್ಕಳಿಗೆ ಯಾವ ರೀತಿ ಅವರು ಪಾಠವನ್ನು ಮಾಡುತ್ತಾರೆ ಅದರ ಅನ್ವಯ ಮಕ್ಕಳು ತಮ್ಮ ಮಾತಿನಲ್ಲಿ ಕವನಗಳನ್ನು ರಚಿಸಿದ್ದರು. ದೇವರ ಸಮಾನ ಸ್ಥಾನದಲ್ಲಿ ಮಕ್ಕಳು ಶಿಕ್ಷಕರನ್ನು ನೋಡುತ್ತಾರೆ ಎಂಬುದಕ್ಕೆ ನಮ್ಮ ಎಲ್ಲಾ ಮಕ್ಕಳು ಮಾಡಿದ ಭಾಷಣ ಅಥವಾ ಹಂಚಿಕೊಂಡ ಅನುಭವಗಳು ಸಾಕ್ಷಿಯಾಗಿ ನಿಂತಿವೆ. ಅವರು ಆ ಏಳು ವರ್ಷ ನಮ್ಮ ಶಾಲೆಯಲ್ಲಿ ಹೇಗೆ ಕಳೆದರೂ ಶಿಕ್ಷಕರ ಮಹತ್ವವೇನು ಅವರು ಕಲಿಸುವ ಪಾಠದ ಮಹತ್ವವನ್ನು ತಮ್ಮ ಪುಟ್ಟ ಪುಟ್ಟ ಸಾಲುಗಳ ಮೂಲಕ ಮನಸ್ಸಿಗೆ ಮುದ ನೀಡುವ ರೀತಿಯಲ್ಲಿ ಮಾತನಾಡಿದರು" ಬೆಳೆಯುವ ಸಿರಿ ಮೊಳಕೆಯಲ್ಲಿ" ಎಂಬ ಮಾತಿನಂತೆ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಗಾದೆಗೆ ನಮ್ಮ ಏಳನೇ ವರ್ಗದ ಮಕ್ಕಳು ಸಾಕ್ಷಿಯಾಗಿದ್ದಾರೆ. ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುವುದರ ಮುಖಾಂತರ ತಮ್ಮ ಅಭಿನಂದನೆಗಳನ್ನು ಶಿಕ್ಷಕರಿಗೆ ತಿಳಿಸಿದರು. ಮತ್ತು ಮಕ್ಕಳಿಗೆ ಯಾವ ತರದ ಶಿಕ್ಷಣ ನೀಡಬೇಕೆಂದು ಅವರ ತರಗತಿಯ ಶಿಕ್ಷಕರು ಏಳು ವರ್ಷದ ತಮ್ಮ ಮಕ್ಕಳೊಂದಿಗೆ ಅನುಭವವನ್ನು ಶಿಕ್ಷಕರು ಸಹ ಭಾಷಣದ ಮೂಲಕ ತಮ್ಮ ಮನಸ್ಸಿನ ಭಾವನೆಗಳನ್ನು ಆ ಮಕ್ಕಳ ಮೇಲಿರುವ ಮುಗ್ಧವಾದ ಗುರು ಮಾತೆಯ ಪ್ರೀತಿಯನ್ನು ತಮ್ಮ ಸುಂದರವಾದ ಸಾಲುಗಳಲ್ಲಿ ಹೂಗಳು ಅರಳಿದಂತೆ ಎಲ್ಲರ ಮನ ತಣಿಸುವಂತೆ ಭಾಷಣದ ಮುಖಾಂತರ ಒಬ್ಬ ಶಿಕ್ಷಕರಿಗೆ ವಿದ್ಯಾರ್ಥಿಗಳು ಯಾವ ರೀತಿ ಕಾಳಜಿಯನ್ನು ಪ್ರೀತಿಯನ್ನು ತೋರಿಸುತ್ತಾರೆಂದು ಗುರು ಮತ್ತು ವಿದ್ಯಾರ್ಥಿಯ ಅವಿನಾಭಾವ ಸಂಬಂಧವನ್ನು ಇಲ್ಲಿ ಎತ್ತಿ ಹಿಡಿದರು. ಇದು ನಮ್ಮ ಕ್ರಿಯಾತ್ಮಕ ವಿದ್ಯಾರ್ಥಿಗಳ ಬೀಳ್ಕೊಟ್ಟ ಸಮಯದಲ್ಲಿ ನಾ ಕಂಡ ಶುಭ ಸಮಯ.
Comments
Post a Comment