ಮಕ್ಕಳೊಂದಿಗೆ ಆಟ
ಎಂ ಪಿ ಎಸ್ ನರೇಂದ್ರ ಶಾಲೆಯಲ್ಲಿ ಶಿಕ್ಷಕಿಯಾಗಿ ಮಕ್ಕಳೊಂದಿಗೆ ಆಟವನ್ನು ಸ್ಮರಿಸಿಕೊಳ್ಳುವ ನೆನಪು ಸುಂದರ ಇಂದು ನಾನು ನಮ್ಮ ಏಳನೇ ತರಗತಿಯ ಮಕ್ಕಳೊಂದಿಗೆ ಬ್ಯಾಡ್ಮಿಂಟನ್ ಆಟವನ್ನು ಆಡಿದ್ದು ತುಂಬಾ ಸುಂದರ ಅದರಲ್ಲಿ ಗುಂಪುಗಳಾಗಿ ವಿಂಗಡಿಸಿ ಆಟ ಆಡಿದವು ಅದೊಂದು ಸುಂದರ ಗಳಿಗೆ ಮಕ್ಕಳಿಗೆ ಆಟವಾಡುವುದು ಎಂದರೆ ತುಂಬಾ ಇಷ್ಟ ಅದರಲ್ಲಿ ಖೋ,ಖೋ ಕಬಡ್ಡಿ ವಾಲಿಬಾಲ್ ಥ್ರೂ ಬಾಲ್ ಬಾಲ್ ಕೇರಂ, ಲಗೋರಿ ಚಿನ್ನಿದಾಂಡು, ಇಂತಹ ಆಟಗಳನ್ನು ಮಕ್ಕಳು ಬಹಳ ಇಷ್ಟಪಟ್ಟು ಆಡುತ್ತಾರೆ ಅವರಿಗೆ ಆ ವಯಸ್ಸಿನಲ್ಲಿ ಇಂತಹ ಸುಂದರವಾದ ಆಟಗಳು ತುಂಬಾ ಇಷ್ಟ ಆಗುತ್ತದೆ ಅದರಲ್ಲೂ ಮಕ್ಕಳು ಹೆಚ್ಚು ಸ್ವತಂತ್ರವಾಗಿ ಸ್ವಯಿಚ್ಛೆಯಿಂದ ತಮಗೆ ಇಷ್ಟ ಬಂದಂತಹ ಆಟಗಳನ್ನು ಆಡಬೇಕು ಇದು ಅವರಿಗೂ ಆನಂದ ಮತ್ತು ಸಂತೋಷ ಇವತ್ತು ನಮ್ಮ ಮಕ್ಕಳ ಬ್ಯಾಡ್ಮಿಂಟನ್ ಆಟದೊಂದಿಗೆ ಸಮಯ ತುಂಬಾ ಸುಂದರ ವರ್ಣಿಸಲಾಗದ ಗಳಿಗೆ. ಪಾಠಕ್ಕಿಂತ ಆಟವನ್ನು ತುಂಬಾ ಇಷ್ಟಪಡುತ್ತಾರೆ ಅದಕ್ಕಾಗಿ ಶಿಕ್ಷಕರು ಆಟದೊಂದಿಗೆ ಪಾಠ ಮಾಡುವುದು ಉತ್ತಮ ಮತ್ತು ಇದು ವಿದ್ಯಾರ್ಥಿಗಳು ತಮ್ಮ ಗಮನವನ್ನು ಶಿಕ್ಷಕರ ಕಡೆ ಸೆಳೆಯುತ್ತದೆ ಅವರ ಪುಟ್ಟ ಮನಸ್ಸಿನಲ್ಲಿ ಶಿಕ್ಷಕರಿಗೆ ಎಲ್ಲದ ಗೌರವ ಮತ್ತು ಪ್ರೀತಿಯು ಕೂಡ ಹೆಚ್ಚಿಸುವುದು.
Comments
Post a Comment