ನನ್ನ ವಿಶೇಷ ವಿದ್ಯಾರ್ಥಿಗಳು
ನನ್ನ ವಿಶೇಷ ವಿದ್ಯಾರ್ಥಿಗಳು
ನಾನು ಕೆಲವು ವಿದ್ಯಾರ್ಥಿಗಳನ್ನು ತುಂಬಾ ನೋಡ್ತೀನಿ ಅದರಲ್ಲಿ ಕೆಲವು ವಿಶೇಷ ವಿದ್ಯಾರ್ಥಿಗಳು ಆಟದಲ್ಲೂ ಪಾಠದಲ್ಲೂ ಮತ್ತು ಇತರ ಚಟುವಟಿಕೆಗಳನ್ನು ಕೂಡ ಮುಂದೆ ಇರುವರು ಅದರಲ್ಲಿ ಮಹಾಂತೇಶ ಮಸೂತಿ ,ಕಿರಣ್ ಕಲ್ಲೂರ್, ಮಾಂತೇಶ್ ಮೊರಬ ನಾಗರಾಜ್ ನಾಯ್ಕರ್, ನಿಖಿಲ್ ಕಾಗಿ, ಸಿದ್ದನಗೌಡ ಪಾಟೀಲ್, ಧನರಾಜ್ ಸೋಗಿ, ನಿರಂಜನ್ ಇವರೆಲ್ಲ ಅತ್ಯಂತ ವಿಶೇಷ ವಿದ್ಯಾರ್ಥಿಗಳು ಇವರು ತಮ್ಮ ವಿಶೇಷ ಕೌಶಲ್ಯದಿಂದ ಶಿಕ್ಷಕರನ್ನು ಸೆಳೆಯುವಂತಹ ಗುಣವನ್ನು ಹೊಂದಿದವರು. ಓದಲು ಬರೆಯಲು ಆಟವಾಡಲು ಪಟ್ಟೆತರ ಚಟುವಟಿಕೆಗಳಲ್ಲೂ ಇವರ ಪ್ರಯತ್ನ ಸಾಧನೀಯ ಇವರು ಆಟಕ್ಕೂ ಸೈ ಇಂತಹ ಪ್ರತಿಭಾವಂತ ವಿದ್ಯಾರ್ಥಿಗಳು ನಾನು ನೋಡಿರುವ ಉತ್ತಮ ವಿದ್ಯಾರ್ಥಿಗಳು ಇವರಲ್ಲಿ ನಿಖಿಲ್ ಕಾಗಿ ಎಂಬ ವಿದ್ಯಾರ್ಥಿ ಧೈರ್ಯವಂತ ಯಾವುದಕ್ಕೂ ನಾನು ಹಿಂದೆ ಸರಿಯುವುದಿಲ್ಲ ಎಂಬ ನಿಲುವು ಇವನಲ್ಲಿ ನಾನು ನೋಡಿದ್ದೇನೆ ಕಿರಣ್ ಕಲ್ಲೂರ್ ಇವನು ಹಿಡಿದ ಕೆಲಸವನ್ನು ಪೂರ್ತಿ ಮಾಡದೇ ಬಿಡುವ ವಿದ್ಯಾರ್ಥಿಯಲ್ಲ ತನ್ನ ಛಲದಿಂದ ಎಲ್ಲರೂ ತನ್ನತ್ತ ತಿರುಗಿ ನೋಡುವಂತಹ ಸಾಧನೆಯ ಶಿಖರವನ್ನು ಏಳನೇ ತರಗತಿಯಲ್ಲಿ ಈ ಮಗು ಪಡೆದುಕೊಂಡಿದೆ ಅದಂತು ಅಪಾರ ಪ್ರಯತ್ನದಿಂದ ಮಕ್ಕಳು ತುಂಬಾ ಆಟದೊಂದಿಗೆ ಪಾಠವನ್ನು ಕಲಿಯಲು ಇಚ್ಚಿಸುವ ವಿದ್ಯಾರ್ಥಿಗಳಲ್ಲಿ ಇವರೆಲ್ಲರೂ ಒಂದು ನಮ್ಮ ಶಾಲೆಯ ಮಕ್ಕಳು ಖೋ,ಖೋ ಆಟದಲ್ಲಿ ಕೂಡ ಕಬಡ್ಡಿ ಆಟದಲ್ಲಿಯೂ ಕೂಡ ಚಿತ್ರಕಲೆಯನ್ನು ಕೂಡ ತುಂಬಾ ಆಸಕ್ತಿಯನ್ನು ಹೊಂದಿದವರು ಇಂತಹ ವಿದ್ಯಾರ್ಥಿಗಳು ಮುಂದಿನ ಭವಿಷ್ಯವನ್ನು ಸರಿಯಾಗಿ ರೂಪಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ ಅವರು ಇಷ್ಟ ಬಂದ ರಂಗದಲ್ಲಿ ತಮ್ಮ ಬೆಳವಣಿಗೆಯನ್ನು ಮುಂದುವರಿಸಲೆಂದು ಆಶಿಸುತ್ತೇನೆ.
Comments
Post a Comment