ವಿಜ್ಞಾನ ಪಾಠ ವೀಕ್ಷಣೆ – ಬೆಳಕು ಅಧ್ಯಾಯ ನಮ್ಮ ಶಾಲೆಗೆ ಪ್ರೋಗ್ರಾಂ ಮ್ಯಾನೇಜರ್ ಮಂಜುನಾಥ್ ಸರ್, ಪ್ರೋಗ್ರಾಂ ಕೋಆರ್ಡಿನೇಟರ್ ಸಾಯಿಗೀತಾ ಮ್ಯಾಮ್ ಹಾಗೂ ವಿಜಯ್ ಸರ್ ಭೇಟಿ ನೀಡಿ ನನ್ನ ತರಗತಿಯನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ನಾನು 7ನೇ ತರಗತಿಯ ವಿಜ್ಞಾನ ಪಾಠ – “ಬೆಳಕು” ಅಧ್ಯಾಯವನ್ನು ನಡೆಸಿದೆನು. ಪಾಠದ ವೇಳೆ ಬೆಳಕು ಸರಳ ರೇಖೆಯಲ್ಲಿ ಚಲಿಸುತ್ತದೆ, ಬೆಳಕಿನ ಪ್ರತಿಫಲನ ಮತ್ತು ದರ್ಪಣ (ಕನ್ನಡಿ) ಕುರಿತು ಸರಳ ಉದಾಹರಣೆಗಳೊಂದಿಗೆ ವಿವರಿಸಲಾಯಿತು. ವಿಷಯವನ್ನು ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ತಿಳಿಸಲು ಸಿಂಹ ಮತ್ತು ಮೊಲದ ಕಥೆಯನ್ನು ಉದಾಹರಣೆಯಾಗಿ ಹೇಳಿ ವಿವರಿಸಿದೆನು. ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಠದಲ್ಲಿ ಭಾಗವಹಿಸಿ, ಪ್ರಶ್ನೆಗಳಿಗೆ ಉತ್ತರಿಸಿ ತಮ್ಮ ತಿಳುವಳಿಕೆಯನ್ನು ಪ್ರದರ್ಶಿಸಿದರು. ವೀಕ್ಷಣೆಗೆ ಬಂದ ಅಧಿಕಾರಿಗಳು ಪಾಠದ ನಿರ್ವಹಣೆ ಮತ್ತು ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆಯನ್ನು ಮೆಚ್ಚಿ ಮೌಲ್ಯಯುತ ಪ್ರತಿಕ್ರಿಯೆ (feedback) ನೀಡಿದರು.