ಸ್ನೇಹದ ದಿನದ ಸ್ಮರಣೀಯ ಕ್ಷಣಗಳು 💥👫

 GHPS MANGALAGATTI

  ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ನಮ್ಮ ಜೀವನದಲ್ಲಿ ಅಪರಿಚಿತರಾಗಿ ಒಮ್ಮೆ ಬಂದು ಚಿರಪರಿಚಿತರಾಗಿ ಶಾಶ್ವತವಾಗಿ ಕೊನೆಯವರೆಗೂ ನಮ್ಮೊಂದಿಗೆ ಉಳಿಯುವ ಸುಂದರ ಸಂಬಂಧವೇ ಸ್ನೇಹ...

        ಸ್ನೇಹವು ಮಾನವ ಸಂಬಂಧಗಳಲ್ಲಿಯೇ ಅತ್ಯಂತ ಶಕ್ತಿಶಾಲಿಯಾದ ಅಂಶ. ಈ ಸ್ನೇಹವನ್ನು ಸ್ಮರಿಸಲು, ಆಚರಿಸಲು, ಪ್ರತೀ ವರ್ಷದಂತೆ ಈ ವರ್ಷವೂ ಫ್ರೆಂಡ್‌ಶಿಪ್ ಡೇ ನಮ್ಮ ಶಾಲೆಯಲ್ಲಿ ಹೆಮ್ಮೆಯಂತೆ ನಡೆಯಿತು. ಆ ದಿನ ಬೆಳಿಗ್ಗೆ ಶಾಲೆಗೆ ಬಂದ ಕೂಡಲೇ ಮಕ್ಕಳು ತಮ್ಮ ಕೈಯಲ್ಲಿ ಬಣ್ಣಬಣ್ಣದ ಫ್ರೆಂಡ್‌ಶಿಪ್ ಬ್ಯಾಂಡ್ಸ್ ಹಿಡಿದು, ಸ್ನೇಹಿತರಿಗೆ ಹಾಗೂ ಶಿಕ್ಷಕರಿಗೆ ತೊಡಿಸುತ್ತಾ, ತಮ್ಮ ಸ್ನೇಹಭಾವನೆಗಳನ್ನು ಹಂಚಿಕೊಂಡರು. ನಗುಮುಖಗಳಿಂದ ತುಂಬಿದ ಮಕ್ಕಳ ಮುಖಗಳು ಆ ದಿನದ ಎಲ್ಲವನ್ನು ವಿಶೇಷಗೊಳಿಸಿತು. ಕೆಲವರು ಕಾರ್ಡು ತಯಾರಿಸಿ ತರಿಸಿದರು, ಇನ್ನು ಕೆಲವರು ಸಣ್ಣ ಉಡುಗೊರೆಗಳನ್ನು ನೀಡಿ ತಮ್ಮ ಅನುರಾಗ ವ್ಯಕ್ತಪಡಿಸಿದರು.ಶಿಕ್ಷಕರಾದ ನಮಗೆ ಮಕ್ಕಳ ಈ ನಿಷ್ಕಪಟ ಸ್ನೇಹಭಾವನೆ ನೋಡಿದಾಗ ಎಷ್ಟು ಸಂತೋಷವಾಯಿತೋ ಹೇಳಲು ಮಾತಿಲ್ಲ. ನನ್ನ ಬಾಲ್ಯದ ಸ್ನೇಹದ ದಿನಗಳು ನೆನಪಾಗಿದವು. ಬಾಲ್ಯದ ಆ ಸ್ನೇಹವು ಎಷ್ಟು ಪುಟಾಣಿಯಾಗಿತ್ತೋ ಎಂಬುದು ಮತ್ತೆ ನೆನಪಾಯಿತು.


Thank you




Comments

Popular posts from this blog

Vidya Poshak - Yuva Internship 2024 - Application form

Frequently Asked Questions about Internship 2023

ಇತಿಹಾಸದ ಹನುಮ ದೇವಸ್ಥಾನ