Government Higher Primary School Yadwad
ನಮ್ಮ ಯಾದ್ವಾಡ ಶಾಲೆಯಲ್ಲಿ ಈ ವರ್ಷ ಕ್ಲಸ್ಟರ್ ಮಟ್ಟದ ಕ್ರೀಡಾಕೂಟವನ್ನು ಉತ್ಸಾಹದಿಂದ ನಡೆಸಲಾಯಿತು. ಒಟ್ಟು 11 ಶಾಲೆಗಳ ವಿದ್ಯಾರ್ಥಿಗಳು ನಮ್ಮ ಶಾಲೆಗೆ ಬಂದು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದರು. ಬೆಳಿಗ್ಗೆ ಕಾರ್ಯಕ್ರಮ ಧ್ವಜಾರೋಹಣದಿಂದ ಆರಂಭವಾಯಿತು. ಮುಖ್ಯ ಅತಿಥಿಗಳು ಕ್ರೀಡಾ ಮಹತ್ವದ ಬಗ್ಗೆ ಮಾತನಾಡಿ, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಓಟ, ಲಾಂಗ್ ಜಂಪ್, ಹೈ ಜಂಪ್, ಕಬ್ಬಡ್ಡಿ, ಖೋ-ಖೋ ಮತ್ತು ಇನ್ನೂ ಅನೇಕ ಆಟಗಳು ನಡೆಯಿತು. ಎಲ್ಲ ತಂಡಗಳು ತಮ್ಮ ಶಾಲೆಯ ಗೌರವಕ್ಕಾಗಿ ಶ್ರಮಿಸಿ ಉತ್ತಮ ಕ್ರೀಡಾ ಮನೋಭಾವ ತೋರಿಸಿದರು. ನಮ್ಮ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಸಹಾಯ ಮಾಡಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸಿದರು. ದಿನದ ಕೊನೆಯಲ್ಲಿ ವಿಜೇತರ ಹೆಸರುಗಳನ್ನು ಘೋಷಿಸಿ, ಬಹುಮಾನ ವಿತರಣೆ ನಡೆಯಿತು. ಈ ಕ್ರೀಡಾಕೂಟವು ಎಲ್ಲಾ ವಿದ್ಯಾರ್ಥಿಗಳಿಗೆ ಒಗ್ಗಟ್ಟು, ಕ್ರೀಡಾ ಶಿಸ್ತು ಮತ್ತು ಸ್ನೇಹವನ್ನು ಬೆಳೆಸುವ ಒಂದು ಸುಂದರ ಅನುಭವವಾಯಿತು.
Thank you............
Comments
Post a Comment