ಸ್ಪರ್ಧಾತ್ಮಕ ಕ್ರೀಡಾ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಗೆಲುವಿನ ಹೆಮ್ಮೆ 🏆
GHPS Mangalagatti
೨೦೨೫ ಆಗಸ್ಟ್ ೭ರಂದು ನಾನು ನಮ್ಮ ಮಂಗಳಗಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳನ್ನು ಕರುಬಗಟ್ಟಿ ಶಾಲೆಗೆ ಸ್ಪರ್ಧಾತ್ಮಕ ಕ್ರೀಡಾ ಸ್ಪರ್ಧೆಗಾಗಿ ಕರೆದುಕೊಂಡು ಹೋದೆ. ಈ ಸ್ಪರ್ಧೆಯಲ್ಲಿ ನಮ್ಮ ಮಕ್ಕಳು ಎಲ್ಲಾ ಕ್ರೀಡೆಗಳಲ್ಲಿಯೂ ಬಹಳ ಚುರುಕಾಗಿಯೂ, ಉತ್ಸಾಹದಿಂದಲೂ ಭಾಗವಹಿಸಿದರು.ವಿಶೇಷವಾಗಿ, ನಮ್ಮ ಶಾಲೆಯ ವಿದ್ಯಾರ್ಥಿಗಳು ವಾಲಿಬಾಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮತ್ತು ತ್ರೋಬಾಲ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿದ ಸುದ್ದಿ ನಮಗೆಲ್ಲರಿಗೂ ಹರ್ಷದಾಯಕವಾಗಿದೆ. ಅಲ್ಲದೆ, ಇತರ ಕ್ರೀಡೆಗಳಲ್ಲಿಯೂ ನಮ್ಮ ಮಕ್ಕಳು ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಪಡೆದು ನಮ್ಮ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.
ಮಕ್ಕಳು ಆಟವಾಡಿದಾಗ ಅವರ ಮುಖದ ಉಲ್ಲಾಸ, ಆತ್ಮವಿಶ್ವಾಸ ತುಂಬಿದ ದೃಷ್ಟಿಗಳು ಹಾಗೂ ತಂಡಸ್ಫೂರ್ತಿ ನನ್ನ ಮನಸ್ಸನ್ನು ತುಂಬಾ ಸಂತೋಷದಿಂದ ತುಂಬಿದವು. ಇಂತಹ ಸ್ಪರ್ಧೆಗಳು ಮಕ್ಕಳಲ್ಲಿ ಕ್ರೀಡಾ ಮನೋಭಾವನೆ, ಸಹಕಾರ ಮತ್ತು ಆರೋಗ್ಯದ ಮಹತ್ವವನ್ನು ಬೆಳೆಸುವಲ್ಲಿ ಸಹಾಯಮಾಡುತ್ತವೆ.
ಧನ್ಯವಾದಗಳು
Comments
Post a Comment