ಹೆಮ್ಮೆಯ ಕ್ಷಣ: ಧಾರವಾಡ ವಲಯ ಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳ ಅದ್ಭುತ ಸಾಧನೆ! 🏐
19 ನೇ ಅಕ್ಟೋಬರ್ ರಂದು ನಡೆದ ಧಾರವಾಡ ವಲಯ ಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಕ್ರೀಡಾಂಗಣದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
💫 ನಮ್ಮ ಹೆಣ್ಣು ಮಕ್ಕಳ ವಾಲಿಬಾಲ್ ತಂಡ ಶ್ರೇಷ್ಠತೆಯ ಪ್ರದರ್ಶನ ನೀಡಿ ಪ್ರಥಮ ಸ್ಥಾನವನ್ನು ಪಡೆದುಕೊಂಡು, ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ. ಅವರ , ಶಿಸ್ತಿನಿಂದ ತಯಾರಿ ಮತ್ತು ತಂಡದ ಒಗ್ಗಟ್ಟು ಎಲ್ಲರಿಗೂ ಮಾದರಿಯಾಗುವಂತಿದೆ. ಗಂಡು ಮಕ್ಕಳ ವಾಲಿಬಾಲ್ ತಂಡ ಕೂಡ ಅಚ್ಚುಕಟ್ಟಾದ ಆಟದ ಮೂಲಕ ದ್ವಿತೀಯ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಅರ್ಹರಾಗಿದ್ದಾರೆ. ಅವರ ಧೈರ್ಯ ಮತ್ತು ಸ್ಪರ್ಧಾತ್ಮಕ ಮನೋಭಾವನೆ ಸ್ಫೂರ್ತಿದಾಯಕವಾಗಿದೆ.
🎉 ನಮ್ಮ ಶಾಲೆಗೆ ಹೆಮ್ಮೆ ಪಡುವ ಕ್ಷಣ!
ಈ ಸಾಧನೆ ನಮ್ಮ ಶಾಲೆಯ ಕ್ರೀಡಾ ಶೈಕ್ಷಣಿಕ ಮಟ್ಟವನ್ನು ತೋರಿಸುವುದರ ಜೊತೆಗೆ, ಶಾಲೆಯ ಹೆಸರು ಮತ್ತಷ್ಟು ಎತ್ತರಕ್ಕೆ ಏರಿಸಿದೆ. ಇದು ವಿದ್ಯಾರ್ಥಿಗಳ ಶ್ರಮ, ಶಿಕ್ಷಕರ ಮಾರ್ಗದರ್ಶನ ಮತ್ತು ಪೋಷಕರ ಬೆಂಬಲದ ಒಟ್ಟಾರೆ ಫಲಿತಾಂಶ.
🙏 ಎಲ್ಲ ತಂಡಗಳಿಗೆ ಹೃತ್ಪೂರ್ವಕ ಅಭಿನಂದನೆಗಳು!
💐 ಮುಂದಿನ ತಾಲೂಕು ಮಟ್ಟದ ಸ್ಪರ್ಧೆಗೆ ನಮ್ಮ ಶಾಲೆಯ ಶ್ರೇಷ್ಠ ಕ್ರೀಡಾಪಟುಗಳಿಗೆ ಶುಭಾಶಯಗಳು!
"ಇವತ್ತಿನ ಆಟ ನಾಳೆಯ ಗೆಲುವಿಗೆ ಮಾರ್ಗ
ಧನ್ಯವಾದಗಳು 😊
Comments
Post a Comment