ಸೇವಾ ನಿವೃತ್ತಿ ಹೊಂದಿದ ಗುರುಮಾತೆಯರಿಗೆ ಸನ್ಮಾನ ಹಾಗೂ ಅಭಿನಂದನಾ ಸಮಾರಂಭ.
GHPS Mangalagatti
ಮುಗ್ಧ ಮನದಲ್ಲಿ ಅಕ್ಷರಗಳನ್ನು ಬಿತ್ತಿಮಕ್ಕಳ ಭವಿಷ್ಯಕ್ಕೆ ಬೆಳಕನ್ನು ಚೆಲ್ಲಿ ಸುಂದರ ನಾಡು ಕಟ್ಟುವ ನಮ್ಮ ನಿಮ್ಮೆಲ್ಲರ ನೆಚ್ಚಿನ ಶಿಕ್ಷಕರಾದ ಶ್ರೀಮತಿ ವಜ್ರಾವತಿ ಪಾಟೀಲ್ ಮೇಡಂ ಅವರು ಹಾಗೂ ತೆಂಬದ ಮೇಡಂ ಅವರ ಸೇವಾ ನಿವೃತ್ತಿ ಹೊಂದಿದ ಗುರುಮಾತೆಯರಿಗೆ ಸನ್ಮಾನ ಹಾಗೂ ಅಭಿನಂದನಾ ಸಮಾರಂಭ.
೨ನೇ ಆಗಸ್ಟ್ ೨೦೨೫ ರಂದು ನಮ್ಮ ಶಾಲೆಯಲ್ಲಿ ಬಹಳ ಅರ್ಥಪೂರ್ಣವಾದ ಹಾಗೂ ಭಾವನಾಪೂರ್ಣ ಕ್ಷಣದ ಸಾಕ್ಷಿಯಾಗಿದ್ದುದು ನಮ್ಮ ಹೆಡ್ ಮಾಸ್ಟರ್ ಅವರ ನಿವೃತ್ತಿ ದಿನಾಚರಣೆ.ಈ ವಿಶೇಷ ದಿನದ ಕಾರ್ಯಕ್ರಮವನ್ನು ಎಲ್ಲರೂ ಒಂದು ಕುಟುಂಬದಂತೆ ಸೇರಿ ಅದ್ಭುತವಾಗಿ ಆಚರಿಸಿತು.
ಕಾರ್ಯಕ್ರಮದ ಆರಂಭವನ್ನು ಪ್ರಾರ್ಥನೆ ಹಾಗೂ ದೀಪ ಪ್ರಜ್ವಲನೆಯೊಂದಿಗೆ ಮಾಡಲಾಯಿತು. ನಂತರ ಶಾಲೆಯ ಮಕ್ಕಳಿಂದ ಸುಂದರ ಸ್ವಾಗತ ಗೀತೆ, ಕಾರ್ಯಕ್ರಮಗಳು ಜರುಗಿದವು. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯಿಂದ ಎಲ್ಲರ ಮನ ಗೆದ್ದರು.ಶಿಕ್ಷಕರಾದವರು, ಹಳೆಯ ವಿದ್ಯಾರ್ಥಿಗಳು ಮತ್ತು ಊರಿನ ಗಣ್ಯರು ಹಾಜರಿದ್ದು, ಮುಖ್ಯೋಪಾಧ್ಯಾಯರ ಕುರಿತು ತಮ್ಮ ಅಪಾರ ಗೌರವವನ್ನು ವ್ಯಕ್ತಪಡಿಸಿದರು. ಅವರ ಶಿಸ್ತಿನ ಆಡಳಿತ, ಮಕ್ಕಳ ಮೇಲಿನ ಕಾಳಜಿ, ಮತ್ತು ಶಾಲೆಯ ಪ್ರಗತಿಗೆ ನೀಡಿದ ಅಮೂಲ್ಯ ಸೇವೆಯನ್ನು ಎಲ್ಲರೂ ಸ್ಮರಿಸಿದರು.ಅಂತಿಮವಾಗಿ, ನಿವೃತ್ತಿ ಭಾಷಣದಲ್ಲಿ ನಮ್ಮ ವಜ್ರಾವತಿ ಪಾಟೀಲ್ ಮತ್ತು ಪ್ರಮೀಳಾ ತೆಂಬದ ಅವರು ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿ, ತಮ್ಮ ಶಿಕ್ಷಣ ಜೀವನದ ಸ್ಪೂರ್ತಿಯ ಘಟನೆಗಳನ್ನು ಹಂಚಿಕೊಂಡರು. ಅವರ ಮಾತುಗಳು ಎಲ್ಲರ ಕಣ್ಣಲ್ಲೂ ಭಾವನೆಯ ಕಣ್ಣೀರನ್ನು ಮೂಡಿಸಿತು. ಅವರು ನಿವೃತ್ತಿ ಜೀವನ ಸುಖಕರವಾಗಿರಲಿ, ಮತ್ತು ಆರೋಗ್ಯವಂತರಾಗಿರಲಿ, ಸಂತೋಷದಿಂದಿರಲಿ ಎಂಬುದು ನನ್ನ ಹಾರೈಕೆ.
ಧನ್ಯವಾದಗಳು
Comments
Post a Comment