*ನಶಾ ಮುಕ್ತ ಭಾರತ ಜಾಗೃತಿ ಅಭಿಯಾನದ ಅರಿವು*


 

*ನಶಾ ಮುಕ್ತ ಭಾರತ ಜಾಗೃತಿ ಅಭಿಯಾನದ ಅರಿವು*


  ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಭಿರತದ ಎಲ್ಲಾ ಜಿಲ್ಲೆಗಳಲ್ಲಿ ನಶಾ ಮುಕ್ತ ಭಾರತ ಅಭಿಯಾನ ( NMzBA)ಎಂಬ ಯೋಜನೆಯಡಿ ಜನರಲ್ಲಿ ಮಾದಕ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿಯನ್ನು ಮೂಡಿಸಲು ಅನೇಕ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದು ಅಭಿಯಾನದ 5 ನೇ ವಾರ್ಷಿಕೋತ್ಸವದ ಅಂಗವಾಗಿ ಧಾರವಾಡ ಜಿಲ್ಲೆಯ ಧಾರವಾಡ ತಾಲೂಕಿನ ಸ.ಹಿ.ಪ್ರಾ.ಶಾಲೆ ದೇವರಹುಬ್ಬಳ್ಳಿಯಲ್ಲಿ ದಿನಾಂಕ:13-08-2025 ರಂದು ಬೆಳಿಗ್ಗೆ 10:30 ಕ್ಕೆ ಪ್ರಾರ್ಥನಾ ಸಮದಲ್ಲಿ ಶಾಲಾ ಮಕ್ಕಳಿಗೆ ರಾಷ್ಟ್ರಪ್ರೇಮ ಮತ್ತು ದೇಶಭಕ್ತಿ ಹೆಚ್ಚಿಸುವ ಕಾಗದಿಂದ ರಾಷ್ಟ್ರ ಧ್ವಜ ತಯಾರಿಕೆ,ಪ್ರಬಂಧ ಸ್ಪರ್ಧೆಯನ್ನು ಗ್ರಾಮ ಪಂಚಾಯಿತಿಯ ಸಹಯೋಗದಲ್ಲಿ ಆಯೋಜಿಸಲಾಗಿತ್ತು ಇದೇ ಸಂದರ್ಭದಲ್ಲಿ ವಯಕ್ತಿಕ ಶುಚಿತ್ವ ಮತ್ತು ವ್ಯಕ್ತಿಯ ಆರೋಗ್ಯದ ಬಗ್ಗೆ ಜಾಗೃತಿಗಾಗಿ ನಶಾ ಮುಕ್ತ ಭಾರತ ಅಭಿಯಾನದ ಪ್ರತಿಜ್ಞೆಯನ್ನು ಸ್ವೀಕರಿಸಲಾಯಿತು.
      ಪ್ರತಿಜ್ಞೆಯ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳೊಂದಿಗೆ ಶಾಲಾ ಶಿಕ್ಷಕರು ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿಯ ಪದಾಧಿಕಾರಿಗಳು,ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳು, ಯುವಕರು ಪಾಲ್ಗೊಂಡು ಸಾಮೂಹಿಕವಾಗಿ ಪ್ರತಿಜ್ಞೆಯನ್ನು ಸ್ವೀಕರಿಸುವ ಮೂಲಕ ಅಭಿಯಾನಕ್ಕೆ ಬೆಲೆತಂದರಲ್ಲದೇ ಬೆಂಬಲ ನೀಡಿ ಸಾರ್ಥಕತೆ ಮೆರೆದರು.ಪ್ರಾಮಾಣಿಕವಾಗಿ ಅರ್ಥೈಸಿಕೊಂಡು ಜೀವನ ಶೈಲಿ ಮತ್ತು ಕ್ರಮವನ್ನು ನಿರ್ವಹಿಸುವುದಾಗಿ ಮಕ್ಕಳೊಂದಿಗೆ ಹಿರಿಯರು ಪ್ರತಿಜ್ಞೆ ಮಾಡಿದ್ದು ಮಾದರಿಯಾಗಿತ್ತು.
ನಾವು ಮೊದಲು ನಮ್ಮ ಗ್ರಾಮವನ್ನು ನಶಾ ಮುಕ್ತ ಮಾಡೋಣ ನಂತರ ತಾಲೂಕು, ಜಿಲ್ಲೆ ,ರಾಜ್ಯ ಹಾಗೂ ದೇಶವನ್ನು ನಶಾಮುಕ್ತಗೊಳಿಸೋಣ ಎಂದು ಸಂಕಲ್ಪ ತೊಟ್ಟರು.ಸಮುದಾಯ ಕುಟುಂಬ,ಸ್ನೇಹಿತರು ಮಾತ್ರವಲ್ಲ ನಮ್ಮಿಂದಲೇ ನಾವೆಲ್ಲ ನಶಾ ಮುಕ್ತ ದೇಶವನ್ನಾಗಿ ಮಾಡಲು ದೃಢ ಸಂಕಲ್ಪ ಮಾಡೋಣ,ದೇಶವನ್ನು ಮಾದಕ ದ್ರವ್ಯ ಮುಕ್ತ ರಾಷ್ಟ್ರವನ್ನಾಗಿಸುತ್ತೇವೆಂದು ಪ್ರತಿಜ್ಞೆ ಸ್ವೀಕರಿಸಲಾಯಿತು.
                          ಜೈಹಿಂದ್...

Comments

Popular posts from this blog

Vidya Poshak - Yuva Internship 2024 - Application form

Frequently Asked Questions about Internship 2023

ಇತಿಹಾಸದ ಹನುಮ ದೇವಸ್ಥಾನ