ಗುರುಗಳು ಕೇವಲ ಪಾಠ ಕಲಿಸುವವರಲ್ಲ, ಅವರು ಮಕ್ಕಳ ಜೀವನವನ್ನು ರೂಪಿಸುವ ಶಿಲ್ಪಿಗಳು. ನಿಜವಾದ ಗುರು ಎಂದರೆ ಮಕ್ಕಳ ಜೊತೆ ಮಕ್ಕಳಾಗಬಲ್ಲವನು. ಅವರ ಮನಸ್ಸಿನ ಜಗತ್ತಿನಲ್ಲಿ ಹೆಜ್ಜೆ ಹಾಕಿ, ಆಟ, ನಗು, ಕಲಿಕೆ – ಎಲ್ಲದರಲ್ಲೂ ಸಹಪಾಲಿಯಾಗುವವನು.ಮಕ್ಕಳ ನಗುವನ್ನು ಹಂಚಿಕೊಂಡಾಗ, ಅವರ ಸಣ್ಣ ತಪ್ಪುಗಳನ್ನು ಪ್ರೀತಿಯಿಂದ ತಿದ್ದಿದಾಗ, ಅವರ ಕುತೂಹಲದ ಪ್ರಶ್ನೆಗಳಿಗೆ ಉತ್ತರ ಹುಡುಕಿದಾಗ, ಗುರುವು ಮಕ್ಕಳ ಕಣ್ಣಲ್ಲಿ ನಿಜವಾದ ಹೀರೋ ಆಗುತ್ತಾನೆ. ಇಂತಹ ಗುರುಗಳ ಸಾನ್ನಿಧ್ಯದಲ್ಲಿ ಮಕ್ಕಳು ಪಾಠವನ್ನು ಕೇವಲ ಓದು ಮಾತ್ರವಲ್ಲ, ಬದುಕಿನ ಪಾಠವನ್ನು ಕಲಿಯುತ್ತಾರೆ.ಗುರುಗಳು ಮಕ್ಕಳ ಜೊತೆ ಆಟ ಆಡಿದಾಗ, ಹಾಡು ಹಾಡಿದಾಗ, ಹಬ್ಬ-ಕಾರ್ಯಕ್ರಮಗಳಲ್ಲಿ ಬೆರೆತು ಪಾಲ್ಗೊಂಡಾಗ, ಮಕ್ಕಳಿಗೆ ಶಾಲೆ ಎರಡನೇ ಮನೆಯಂತೆ ಅನ್ನಿಸುತ್ತದೆ. ಅವರು ತಿಳಿದುಕೊಳ್ಳುತ್ತಾರೆ – “ನಮ್ಮ ಗುರುಗಳು ಕೇವಲ ಶಿಕ್ಷಕರು ಅಲ್ಲ, ನಮ್ಮ ಜೊತೆ ನಿಂತು ದಾರಿದೀಪವಾಗಿರುವ ಅಪ್ಪ-ಅಮ್ಮರಂತವರು.”ಮಕ್ಕಳ ಹೃದಯ ಗೆಲ್ಲುವ ಗುರುಗಳ ಕೈ ಹಿಡಿದಾಗ, ಕಲಿಕೆಯ ಹಾದಿ ಸುಲಭವಾಗುತ್ತದೆ. ಅಲ್ಲಿ ಪುಸ್ತಕದ ಜ್ಞಾನಕ್ಕಿಂತಲೂ ಹೆಚ್ಚು ಪ್ರೀತಿಯ ಪಾಠ, ಸಹನೆಯ ಪಾಠ, ಒಗ್ಗಟ್ಟಿನ ಪಾಠ ಮಕ್ಕಳು ಕಲಿಯುತ್ತಾರೆ.
GHPS Mangalagatti ನಮ್ಮ ಶಾಲೆಯ ಮಕ್ಕಳ ಸಿಹಿ ಸಾಧನೆ GHPS Lokur ನಲ್ಲಿ ಈ ಬಾರಿ ಕ್ಲಸ್ಟರ್ ಲೆವೆಲ್ ಪ್ರತಿಭಾ ಕಾರಂಜಿಯನ್ನು ಹಬ್ಬದ ಸಂಭ್ರಮದಲ್ಲಿ ನಡೆಸಲಾಯಿತು. ಹಲವಾರು ಶಾಲೆಗಳ ಮಕ್ಕಳು ಒಂದೇ ವೇದಿಕೆಯಲ್ಲಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು. ನಮ್ಮ ಶಾಲೆಯ ಮಕ್ಕಳು ಉತ್ಸಾಹದಿಂದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು ಹಾಡು, ನೃತ್ಯ, ಭಜನೆ, ಚಿತ್ರಕಲೆ, ಕಥೆ ಹೇಳುವಿಕೆ ಮತ್ತು ಇನ್ನಷ್ಟು. ಮಕ್ಕಳು ವೇದಿಕೆಯ ಮೇಲೆ ಮಿಂಚಿದ ಕ್ಷಣಗಳು ಎಲ್ಲರಿಗೂ ಹೆಮ್ಮೆ ತಂದವು. ಸ್ಪರ್ಧೆಗಳ ಅಂತ್ಯದಲ್ಲಿ ನಮ್ಮ ಶಾಲೆಯ ಮಕ್ಕಳು ಹಲವಾರು ವಿಭಾಗಗಳಲ್ಲಿ ವಿಜಯ ಸಾಧಿಸಿ ವಿಶೇಷ ಬಹುಮಾನಗಳನ್ನು ಪಡೆದರು. ಮಕ್ಕಳು ಬಹುಮಾನ ಸ್ವೀಕರಿಸಿದಾಗ ಅವರ ಮುಖದಲ್ಲಿ ಹೊಳೆದ ಮುದ್ದಾದ ನಗು ಎಲ್ಲರ ಹೃದಯ ಗೆದ್ದಿತು. thank you

Comments
Post a Comment