ಮೊಗ್ಗೊಂದು ಹೂವಾದಾಗ

                                

                    ಮೊಗ್ಗೊಂದು ಹೂವಾದಾಗ


ಕುರುಬಗಟ್ಟಿ ಅನ್ನುವುದು ಒಂದು ಪುಟ್ಟ ಗ್ರಾಮ. ಅಲ್ಲಿ ಒಟ್ಟಾರೆ 2000 ಮನೆಗಳು ಇರಬಹುದು ಎನ್ನಿಸುತ್ತಿತ್ತು, 


ಆ ಗ್ರಾಮದಲ್ಲಿ ಒಂದು ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ತನ್ನದೇ ಆದ ದೊಡ್ಡ ಅಕ್ಷರದ ಹೆಸರಿನಿಂದ ಬಹಳ ದೊಡ್ಡ ಕಟ್ಟಡದ ವೈಖರಿಯಿಂದ ಮಿಂಚುತ್ತಿತ್ತು, ಅಲ್ಲಿ ಹೂವಿನ ತರಹ ಕಂಗೊಳಿಸುತ್ತಿರುವ ಪುಟ್ಟ ಪುಟ್ಟ ಮಕ್ಕಳು ಆಟವಾಡುತ್ತಿದ್ದರು, ಚಿಲಿಪಿಲಿ ಪಕ್ಷಿಗಳ ತರಹ ಧ್ವನಿಯನ್ನು ಹೊರಡಿಸಿ ಓದುತ್ತಿದ್ದರು, ಶಾಲೆಯ ಮುಂದೆ ಒಂದು ದೊಡ್ಡ ಮರ ಅದರ ಮುಂಭಾಗದಲ್ಲಿ ಒಂದು ದೊಡ್ಡ ಕಟ್ಟೆ ನಿರ್ಮಾಣವಾಗಿತ್ತು ಅಲ್ಲಿ ಮಕ್ಕಳು ಓದಲು ಕೂಡುವುದು ನೋಡುವುದೇ ದೊಡ್ಡ ಸಂಭ್ರಮ,

 

ಈ ಶಾಲೆಗೆ ನಾನು ಶಿಕ್ಷಕಿಯಾಗಿ ಹೋದಾಗ ನನಗೆ ನಮ್ಮ ಪ್ರೋಗ್ರಾಮ್ ಮ್ಯಾನೇಜರ್ ಮೊದಲನೇ ದಿನ ನಮ್ಮನ್ನು ಕುರುಬಗಟ್ಟಿ ಶಾಲೆಗೆ ಕರೆತಂದು ಅಂದಿನ ಮುಖ್ಯ ಶಿಕ್ಷಕರಿಗೆ ನಮ್ಮ ಪರಿಚಯ ಮಾಡಿಸಿ, ನಮ್ಮನ್ನು ಶಾಲೆಗೆ ಶಿಕ್ಷಕಿಯರಾಗಿ ಕರೆತಂದ ಉದ್ದೇಶವನ್ನು ಪ್ರಸ್ತಾಪಿಸಿ, ನಮಗೆ ಇನ್ನು ಮುಂದೆ ಇದೇ ಶಾಲೆಯಲ್ಲಿ ನಿಮ್ಮ ಶಿಕ್ಷಕಿ ವೃತ್ತಿಯನ್ನು ಮುಂದುವರೆಸಬೇಕು ಎಂದು ಹೇಳಿ ಕುರುಬಗಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಬಿಟ್ಟು ಹೋದರು.


ಆ ದಿನ ನಾನು ಆ ಶಾಲೆಯಲ್ಲಿ ಇದ್ದು ಮಕ್ಕಳ ಪರಿಚಯ ಮಾಡಿಕೊಂಡೆ, ಮಕ್ಕಳು ತುಂಬಾ ಚೆನ್ನಾಗಿ ನಮ್ಮ ಜೊತೆ ಮಾತನಾಡಿದರು ಹಾಗೆಯೇ ನಮ್ಮ ಬಗ್ಗೆ ತಿಳಿದುಕೊಳ್ಳಲು ಉತ್ಸಾಹದಿಂದ ಪ್ರಶ್ನೆಗಳನ್ನು ಕೇಳಿದರು ನಿಮ್ಮ ಊರು ಯಾವುದು? ನೀವು ಯಾವ ವಿಷಯನ್ನು ಬೋಧಿಸುತ್ತಿರಿ? ನೀವು ಯಾವ ಶಿಕ್ಷಣವನ್ನು ಮುಗಿಸಿ ಇಲ್ಲಿ ಬಂದಿದ್ದೀರಿ? ಯಾವ ವಿಷಯವನ್ನು ಕಲಿಸುತ್ತೀರಿ? ಯಾವ ತರಗತಿಯನ್ನು ತೆಗೆದುಕೊಳ್ಳುತ್ತೀರಿ? ಹೀಗೆ ಹತ್ತು ಹಲವಾರು ಪ್ರಶ್ನೆಗಳನ್ನು ಕೇಳುತ್ತಾ ಆ ದಿನ ಮುಕ್ತಾಯಗೊಂಡಿತ್ತು.


ಮಾರನೇ ದಿನ ನಾವು ಶಾಲೆಗೆ ಹೋದಾಗ ನಮ್ಮ ವಿಷಯವನ್ನು ಯಾವ ಯಾವ ತರಗತಿಗೆ ಬೋಧಿಸಬೇಕೆಂದು ಒಂದು ನೀಲಿ ನಕಾಶೆ ಹಾಕಿಕೊಂಡು ನಮ್ಮ ತರಗತಿಗೆ ಹೋದೇವು ,ಹಾಗೆ ನನ್ನನ್ನು ಐದನೇ ತರಗತಿ ಶಿಕ್ಷಕಿಯಾಗಿ ನೇಮಕ ಮಾಡಿದ್ದರು ಹಾಗಾಗಿ 5ನೇ ತರಗತಿಯ ಎಲ್ಲಾ ಜವಾಬ್ದಾರಿಯನ್ನು ನೋಡುವುದು ನನ್ನ ಕರ್ತವ್ಯವಾಗಿತ್ತು. 

ತರಗತಿಗೆ ನಾನು ಗಣಿತ ಪರಿಸರ ಅಧ್ಯಯನವನ್ನು ಬೋಧಿಸುತ್ತಿದೆ, ಮತ್ತೆ ನನ್ನ ತರಗತಿಗೆ ಮೋಟೋ,ವಿಜನ್, ಗೋಲ್, ರೂಲ್ಸ್, ಕೂಡ ಮಾಡಿದ್ದೆ ಮಕ್ಕಳು ಅದನ್ನೇ ಪಾಲಿಸುತ್ತಿದ್ದರು, ಮತ್ತು ಏಳನೇ ತರಗತಿಗೆ ವಿಜ್ಞಾನ ವಿಷಯವನ್ನು ಕೂಡ ಬೋಧಿಸುತ್ತಿದೆ.


ಹಾಗೆ ಹಲವಾರು ವಿದ್ಯಾರ್ಥಿಗಳನ್ನು ಕೂಡ ಬಹಳ ಗಮನಿಸುತ್ತಿದ್ದೆ ಅವರ ಹವ್ಯಾಸ ಚಟುವಟಿಕೆಗಳನ್ನು ಕೂಡ ಗಮನಿಸುತ್ತಿದ್ದೆ ಹಾಗೆ ಅಂತಹ ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿ ಮೇಲೆ ನನಗೆ ಎಲ್ಲಿಲ್ಲದ ಒಲವು ಏಕೆಂದರೆ ಮೊದಲಿಗೆ ಅವನು ನನ್ನ ಜೊತೆ ಮಾತನಾಡಲೂ ಭಯಪಡುತ್ತಿದ್ದ ಶಾಲೆಗೆ ಹಾಜರಾಗುತ್ತಿರಲಿಲ್ಲ ಮತ್ತೆ ಅವನಿಗೆ ಓದುವುದು, ಬರೆಯುವುದು ,ಅಂದರೆ ಅವನಿಗೆ ಬಹಳ ಬೇಸರದ ಕೆಲಸ ಬರೀ ಕ್ರಿಕೆಟ್ ಕಬಡ್ಡಿ ಆಡುವುದರಲ್ಲಿ ಅವನಿಗೆ ಬಹಳಷ್ಟು ಆಸಕ್ತಿ ಆದರೆ ನನಗೊಂದು ಹಟ ಅವನನ್ನು ಬದಲಾವಣೆ ಮಾಡಬೇಕು.

 ಯಾವ ರೀತಿ ಎಂದರೆ 'ಅವನಿಗೆ ಯಾವುದು ಕಷ್ಟ ಅಂದುಕೊಂಡಿದ್ದಾನೆ ಅವನು ಅದೇ ಕೆಲಸವನ್ನು ಪ್ರೀತಿಸುವಂತೆ ಮಾಡಬೇಕು' ಎಂದು ಅವನನ್ನು ಹಾಗೆ ಮಾಡಲು ಏನು ಮಾಡಬೇಕೆಂದು ಯೋಚನೆ ಮಾಡಿದೆ,


 ಅವಾಗ ನನಗೆ ಒಂದು ವಿಷಯ ಗೊತ್ತಾಗಿದ್ದು ಏನೆಂದರೆ ಅವನು ಶಿಕ್ಷಕರೊಂದಿಗೆ ಬೆರೆತಿಲ್ಲ ಹಾಗೆ ಅವನಿಗೆ ಯಾವ ವಿಷಯವೂ ಕೂಡ ಸರಿಯಾಗಿ ಅರ್ಥ ಮಾಡಿಸಿಲ್ಲ ಹಾಗೆ ಶಿಕ್ಷಕರು ಅವರ ಜೊತೆ ಬಹಳಷ್ಟು ಸಂವಹನ ಮಾಡಿಲ್ಲ, ಹಾಗಾಗಿ ಅವನಿಗೆ ಓದುವುದು ಬರೆಯುವುದು ಇಷ್ಟ ಇಲ್ಲ ಆದ್ದರಿಂದ ಅವನಿಗೆ  ಶಿಕ್ಷಕರೆಂದರೆ ಬಹಳ ಭಯ ಮತ್ತೆ ಶಾಲೆಗೆ ಗೈರು ಹಾಜರಾಗುತ್ತಿದ್ದ  ಅವನ ಮನಸ್ಸಿನಲ್ಲಿ ಶಾಲೆಯೆಂದರೆ ಭಯ ಎಂಬ ವಿಷಯ ಬೇರೂರಿತ್ತು .

ಆದ್ದರಿಂದ ನಾನು ಅವನ ಮನೆಗೆ ಹೋಗಿ ಬಹಳ ಪ್ರೀತಿಯಿಂದ ಸಂವಹನ ಮಾಡಿ ನನ್ನ ಪರಿಚಯ ಮಾಡಿಕೊಂಡು, ಅವನ ಜೊತೆ ಟೀ ಕುಡಿದು ಬಹಳ ಮಾತಾನಾಡಿದೆ, ಮೊದಲಿಗೆ ಅವನು ಹೆದರಿದ ನಂತರ ನನ್ನ ಮಾತುಗಳು ಅವನಿಗೆ ಬಹಳ ಪ್ರೀತಿಯಿಂದ ಅಂದರೆ ತಮ್ಮ ಸ್ನೇಹಿತರ ತರ ಭಾಸವಾಯಿತು ಎನಿಸುತ್ತದೆ, ಹಾಗಾಗಿ  ಹತ್ತು ನಿಮಿಷಗಳ ನಂತರ ಬಹಳ ಚೆನ್ನಾಗಿ ಮಾತನಾಡಿದ ಮತ್ತು ನಾನು ದಿನಾಲೂ ಶಾಲೆಗೆ ಬರುತ್ತೇನೆ ಎಂದು ಕೂಡ ಹೇಳಿದ.


ಮಾರನೇ ದಿನ ಹಾಜರಿ ಹಾಕುವಾಗ ನಮಗೊಂದು ಶಾಕಿಂಗ್ ನ್ಯೂಸ್ ಅದೇನೆಂದರೆ ಸತತವಾಗಿ ಗೈರುಹಾಜರು ಇದ್ದ ಹುಡುಗನ ಧ್ವನಿ ಕೇಳಿ ನನಗೆ ಆಶ್ಚರ್ಯವಾಯಿತು ಮತ್ತು ಖುಷಿಯಾಯಿತು ಹಾಗೆ ನಾನು ಅವನು ಬಂದ ಖುಷಿಗೆ ಹಾಡು ಹಾಡಿಸಿ ತರಗತಿ ಶುರುಮಾಡಿದೆ, ಮತ್ತು ನನ್ನ ತರಗತಿ ಯಾವಾಗಲೂ ಚರ್ಚೆ, ಪ್ರಶ್ನೆಗಳಿಂದಲೇ, ತುಂಬಿರುತ್ತದೆ ಹಾಗಾಗಿ ಎಲ್ಲ ವಿದ್ಯಾರ್ಥಿಗಳು ಮಾತನಾಡುವುದು ನಗುವುದು ನಡುವೆ ಜೋಕ್ ಹೇಳುವದರಿಂದ ಅವನಿಗೂ ನಗು ಬರುವುದು, ಆದರೆ ಅವನಿಗೆ ನಾನು ಹೇಳುವ ವಿಷಯದ ಬಗ್ಗೆ ಕಿಂಚಿತ್ತು ಗೊತ್ತಿರಲಿಲ್ಲ ಆದರೂ ಅವನು ಶಾಲೆಗೆ ಬಂದಿದ್ದ ಖುಷಿ ಇತ್ತು ನನಗೆ.


ಹಾಗಾಗಿ ಮತ್ತೆ ಸಮಯಸಿಕ್ಕಾಗ ಅವನ ಜೊತೆ ಮಾತನಾಡಿ ಅವನಿಗೆ ಕನ್ನಡ ಗಣಿತ ಪರಿಸರ ಅಧ್ಯಯನ ವಿಷಯಗಳ ಬಗ್ಗೆ ಇರುವ ಪ್ರಾರಂಭಿಕ ಜ್ಞಾನವನ್ನು ತಿಳಿದುಕೊಂಡೆ, ಅವನಿಗೆ ಕನ್ನಡ ಓದುವುದು ಕ್ಲಿಷ್ಟಕರವಾಗಿದ್ದು ಮತ್ತು ಗಣಿತದ ಮೂಲ ಕ್ರಿಯೆಗಳನ್ನು ಕೂಡ ಸ್ವಲ್ಪ ಬರುತ್ತಿತ್ತು ಹಾಗೆ ಅವನಿಗೆ ಆಟದಲ್ಲಿ ಆಸಕ್ತಿ ಇರುವುದರಿಂದ ಓದುವದರಿಂದ ಸ್ವಲ್ಪ ದೂರ ಉಳಿದಿದ್ದ.


ಹಾಗಾಗಿ ನಾನು ಅವನಿಗೆ ಬಹಳ ಹೊತ್ತು ಕೊಡುತ್ತಿದ್ದೆ ಅವನು ಏನೇ ತಪ್ಪು ಮಾಡಿದರು ಓದುವದರಲ್ಲಿ ಅವನಿಗೆ ಉತ್ತಮ, ಟ್ರೈ ಮಾಡಿ ಅಲ್ಲ ಸಾಕು, ನೀನು ತುಂಬಾ ಜಾಣ ಅನ್ನುತ್ತಿದ್ದೆ, ಅದರ ಜೊತೆಗೆ ತಿಳಿಸಿ  ಕೊಡುತ್ತಿದ್ದೆ ಅವನಿಗೆ ನನ್ನ ಹೊಗಳಿಕೆಯ ಮಾತುಗಳು ಅವನಿಗೆ ಖುಷಿ  ಕೊಡುವುದಕ್ಕಿಂತ ಅವನನ್ನು ಹುರಿದುಂಬಿಸುತ್ತಿತ್ತು, 


ಹಾಗಾಗಿ ಅವನು ಚಿಕ್ಕ-ಚಿಕ್ಕ ವಿಷಯವನ್ನು ಕಲಿಯಲು ಕೂಡ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದ, ಮತ್ತು ಪ್ರತಿ ಸರತಿ ಕೂಡ ಬಂದು ತಾನು ಕಲಿತಿರುವ ಶಬ್ದ ಆಗಲಿ ವಿಷಯ ಆಗಲಿ ನನ್ನ ಹತ್ತಿರ ಬಂದು ಹಂಚಿಕೊಳ್ಳುತ್ತಿದ್ದ ,ನಾನು ಅವನಿಗೆ ಬಹಳ ಜಾನ ಆಗಿದ್ದಿ ಇನ್ನು ಸ್ವಲ್ಪ ಪ್ರಯತ್ನ ಮಾಡು, ನೀನು ಬಹಳ ಪ್ರಯತ್ನ  ಮಾಡುತ್ತಿದೆಯಾ ಹಾಗಾಗಿ ನೀನು ಹತ್ತು ದಿನದಲ್ಲಿ ಕನ್ನಡ ಓದಲು ಕಲಿಯುತ್ತಿಯ ಮತ್ತು ಗಣಿತ ಮೂಲಕ್ರಿಯೆ  ನಿನಗೆ ಬಹಳ ಸರಳವಾಗಿ ಅರ್ಥವಾಗುತ್ತಿದೆ ಅಂತ ಹೇಳಿ ಅವನಿಗೆ ಪ್ರತಿಯೊಂದು ಮೂಲ ಕ್ರಿಯೆಗಳನ್ನು ತಿಳಿಸಿಕೊಟ್ಟೆ. 


ಹಲವಾರು ವಸ್ತುಗಳನ್ನು ಬಳಸಿಕೊಂಡು ಅವನು ಲೆಕ್ಕಗಳನ್ನು ಬಿಡಿಸಲು ಕಲಿತುಕೊಂಡನು ಉದಾಹರಣೆಗೆ -ಕಲ್ಲು ,ದುಡ್ಡು. ಬಳಪ ಬಳಸಿಕೊಂಡು ಲೆಕ್ಕ ಮಾಡುತ್ತಿದ್ದ. ಹಾಗೆ ತರತಿಯಲ್ಲಿ ಪ್ರಶ್ನೆಗಳನ್ನು ಕೇಳುವುದು ,ಗೆಳೆಯರೊಂದಿಗೆ   ಮತ್ತು ಎಲ್ಲ ಶಿಕ್ಷಕರೊಂದಿಗೆ ಬೆರೆಯುತ್ತಿದ್ದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ ಮತ್ತು ಎಲ್ಲ ವಿಷಯಗಳಲ್ಲಿ ತುಂಬಾ ಆಸಕ್ತಿ ತೋರಿಸುತ್ತಾನೆ.


ಒಟ್ಟಾರೆಯಾಗಿ ಹೇಳಬೇಕೆಂದರೆ ಅವನು ಈಗ ಆಲ್ರೌಂಡರ್ ಎನ್ನಬಹುದು ಏಕೆಂದರೆ ಪ್ರತಿಯೊಂದರಲ್ಲಿ ಭಾಗವಹಿಸುತ್ತಾನೆ ಸಾಂಸ್ಕೃತಿಕವಾಗಿಯೂ ಬದಲಾವಣೆಯನ್ನು ಹೊಂದಿದ್ದಾನೆ  ಹಾಗೆ ಪೋಷಕರು ಕೂಡ ತಮ್ಮ ಮಗನ ಬಗ್ಗೆ ಹೆಮ್ಮೆಪಡುತ್ತಿದ್ದಾರೆ ,

ಇದು ನನಗೂ ಖುಷಿ ತಂದುಕೊಟ್ಟಿದೆ.


ಹಾಗೆ ಪ್ರತಿಯೊಬ್ಬ ವಿದ್ಯಾರ್ಥಿ ಬದಲಾವಣೆಯಾಗಲು ಶಿಕ್ಷಕರ ಪಾತ್ರ ಮಹತ್ವದಾಗಿದೆ. ಹಾಗೆ ಎಲ್ಲ ಶಿಕ್ಷಕರು ಮಕ್ಕಳ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಬೋಧನೆ ಮಾಡುವದರಿಂದ ಪ್ರತಿಯೊಬ್ಬ ವಿದ್ಯಾರ್ಥಿ ಬದಲಾವಣೆ ಹೊಂದುತ್ತಾನೆ.

ಸುಷ್ಮಾ ಅಪ್ಪಣ್ಣವರ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುರುಬಗಟ್ಟಿ.


Comments