ಇಂಜೆಕ್ಷನ್ ಭಯ 💉💉🩸

                                                       ಇಂಜೆಕ್ಷನ್ ಭಯ 💉💉🩸

                             ನಾವು ಬಾಲ್ಯದಿಂದಲೂ ಹೆದರುವುದು ಇಂಜೆಕ್ಷನ್ ಗೆ ಮಾತ್ರ , ಶಾಲೆಯಲ್ಲಿ ಇಂಜೆಕ್ಷನ್ ಕೊಡ್ತಾರೆ ಅಂದರೆ ಆ ದಿನ ಶಾಲೆಗೆ ಬರೋದನ್ನು ಬಿಡ್ತಿದ್ವಿ , ಬೇರೆ ಯಾವುದಕ್ಕೂ ಹೆದರದ ನಾವು ಸಣ್ಣ ಇಂಜೆಕ್ಷನ್ ಗೆ ಹೆದರುವುದು ಸರ್ವೇ ಸಾಮಾನ್ಯ ವಾಗಿತ್ತು , ನಾನು ನನ್ನ ಬಾಲ್ಯದ ದಿನಗಳನ್ನು  ಮೆಲುಕು ಹಾಕುವ ಸನ್ನಿವೇಶವೊಂದು ಇಂದು ನನ್ನ ಕಣ್ಮುಂದೆ ಬಂದಿತು ಅದುವೇ ಟೀಟಿ  ಇಂಜೆಕ್ಷನ್ . 

                                  ಪ್ರತಿಯೊಂದು ಸರಕಾರಿ ಶಾಲೆಯಲ್ಲಿ ೫ ನೇ  ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಇಂಜೆಕ್ಷನ್ ಕೊಡುವುದು ಹತ್ತಿರದ ಸರ್ಕಾರೀ ಆಸ್ಪತ್ರೆಯ ಸಿಬ್ಬಂದಿ  ಹಾಗು ಆಶಾ ಕಾರ್ಯಕರ್ತೆಯರು ಮಾಡುತ್ತಾರೆ . ಈ ಇಂಜೆಕ್ಷನ್ ಕೊಡುವುದರ ಉದ್ದೇಶವೇನೆಂದರೆ ಮಕ್ಕಳಲ್ಲಿ ಯಾವುದೇ ತರಹದ ಸೋಂಕು ತಗಲಬಾರದೆಂಬ ಉದ್ದೇಶದಿಂದ ಈ ಟೀಟಿ  ಇಂಜೆಕ್ಷನ್ ಅನ್ನು ಮಾಡು ತ್ತಾರೆ , ಹೀಗೆ ಸಾಮಾನ್ಯವಾಗಿ ಪ್ರತಿವರ್ಷದ ರೂಢಿಯಂತೆ ಈ ವರ್ಷವೂ ನಮ್ಮ ಶಾಲೆಯಲ್ಲಿ ಮಕ್ಕ ಳಿಗೆ ಇಂಜೆಕ್ಷನ್ ಮಾಡಲು ಬಂದರು . 

ಹೀಗೆ ನರ್ಸ್ ತರಗತಿಯ ಒಳಗೆ ಪ್ರವೇಶಿಸಿದಾಗ ಮಕ್ಕಳ ಮುಖದಲ್ಲಿನ ಭಯ ನನಗೆ ನನ್ನ ಬಾಲ್ಯದ ದಿನಗಳನ್ನು ನೆನಪಿಸಿತು , ನಾನು ಸಹ ಇಂಜೆಕ್ಷನ್ ಎಂದರೆ ಒಂದು ಮೈಲು ದೂರ ಓಡು ತ್ತಿದ್ದವಳು . ಒಂದು ದಿನ ಆಸ್ಪತ್ರೆಯಲ್ಲಿ  ಇಂಜೆಕ್ಷನ್ ನ ಭಯಕ್ಕೆ ಅಮ್ಮನ ಸೆರಗನ್ನು ಹರಿದು ಓಡಿ ದವಳು  ನಾನು, ಅಂತಹ ದಿನಗಳೆಲ್ಲ ನನ್ನ ಕಣ್ಮುಂದೆ ಈ ದಿನ ಬಂತು . 

೫ ನೇ ತರಗತಿಯ ಶಿಕ್ಷಕಿ ನಾನೆ ಆದ್ದರಿಂದ ನನಗೆ ಭಯ ಇದ್ದರೂ ಎಲ್ಲ ಮಕ್ಕಳಿಗೆ ಧೈರ್ಯ ಹೇಳುವ ಕೆಲಸ ಮಾಡಿದೆ, ಆದರು ವಿದ್ಯಾರ್ಥಿಗಳಿಗೆ ಅದೇನೋ ಭಯ ಆ ಸೂಜಿಯನ್ನು  ನೋಡುತ್ತಲೇ ಬಿಕ್ಕಿ ಬಿಕ್ಕಿ ಅತ್ತರು.  ನನಗೆ ಮನದಲ್ಲಿ ಚಡಪಡಿಕೆ ಇಂಜೆಕ್ಷನ್ ಕೊ ಡುವುದಕ್ಕೂ ಮೊದಲೇ ಅಳುವ ಮಕ್ಕಳು ಇನ್ನು ಇಂಜೆಕ್ಷನ್ ಕೊಟ್ಟ ನಂತರ ಅವರನ್ನು ಹೇಗೆ ಸಮಾಧಾನ ಪಡಿಸಲಿ ಎಂಬ ಗೊಂದಲ ನನ್ನದು. 

          ಹಾಗೊ  ಹಿಗೋ   ನರ್ಸ್ ಹಾಗು ಆಶಾಕಾರ್ಯಕರ್ತೆಯರ ಸಹಾಯದಿಂದ ಎಲ್ಲ ವಿದ್ಯಾರ್ಥಿಗಳಿಗೆ ಟೀಟಿ  ಇಂಜೆಕ್ಷನ್ ನ್ನು ಕೊಟ್ಟೆವು ,ಇಂಜೆಕ್ಷನ್ ಕೊಟ್ಟಮೇಲಂತು ಎಲ್ಲ ವಿದ್ಯಾರ್ಥಿಗಳ ಕಣ್ಣಿನಲ್ಲಿ ಕಣ್ಣೀರ ಧಾರೆಯೆ ಹರಿಯಿತು , ಒಂದನೇ ತರಗತಿಯ ಪುಟ್ಟ ಕಂದ ಬೇರೆಯವರಿಗೆ ಇಂಜೆಕ್ಷನ್ ಕೊಡುವುದನ್ನು ನೋಡಿ  ಮನೆಗೆ ಅಳುತ್ತ ಓಡಿದಳು , ಅಮ್ಮ ನಾನು ಶಾಲೆಗೆ ಹೋಗೋದಿಲ್ಲ ಶಾಲೆಯಲ್ಲಿ ಎಲ್ಲರಿಗೂ  ಇಂಜೆಕ್ಷನ್ ಮಾಡ್ತಿದ್ದಾರೆ ಅಂತ , ಆ ಮಗುವಿಗೇನು ಗೊತ್ತು ಈ ಇಂಜೆಕ್ಷನ್ ೫ ನೇ ತರಗತಿಯ ಮಕ್ಕಳಿಗೆ ಮಾತ್ರ ಎಂದು😄  ಹಾಗೆಯೇ  ಎಲ್ಲ ಶಿಕ್ಷಕರು ಹಾಗು ಅಡುಗೆ ಸಿಬ್ಬಂದಿಗಳಿಗೂ ಸಹ ಇಂಜೆಕ್ಷನ್ ನ್ನು ನೀ ಡಲಾಯಿತು . ಆದರೂ ಇಂದಿಗೂ ಸಹ ಇಂಜೆಕ್ಷನ್ ಎಂದರೆ ನನಗೂ ಎಲ್ಲಿಲ್ಲದ ಭಯ , ಇಂಜೆಕ್ಷನ್ ಭೂತವನ್ನು ಹೋಗಲಾಡಿಸುವುದು ಹೇಗೋ ಏನೋ ನಾ ಕಾಣೆ !!!!!





Comments