ಕಬಡ್ಡಿ ವಿಜೇತ ಕ್ಷಣ 🏆🏆

                                              ಕಬಡ್ಡಿ ವಿಜೇತ ಕ್ಷಣ 🏆😊🏆

                           ಕಬಡ್ಡಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ , ಬಾಲ್ಯದಿಂದಲೂ ಎಲ್ಲರ ಅಚ್ಚು ಮೆಚ್ಚಿನ ಆಟ ಕಬಡ್ಡಿ , ಕಬಡ್ಡಿಯ ರೋಚಕ ಪಂದ್ಯಾವಳಿಗೆ ಮನಸೋಲದವರಿಲ್ಲ . ಅಷ್ಟೊಂದು ಅಚ್ಚು ಮೆಚ್ಚಿನ ಆಟ ಈ ಕಬಡ್ಡಿ . ಕಬಡ್ಡಿಯ ನಿಯಮಾವಳಿಗಳು ಸ್ವಲ್ಪ ಕಷ್ಟಕರವಾದರೂ ಒಮ್ಮೆ ಕಬಡ್ಡಿ ಆಡಿದವನು ಮತ್ತೆಂದೂ ಹಿಂತಿರುಗಿ ನೋಡಲಾರ . ವಯಕ್ತಿಕವಾಗಿ ನನ್ನ ನೆಚ್ಚಿನ ಅಟಗಳಲ್ಲಿ  ಕಬಡ್ಡಿ ಕೂಡ ಒಂದು . ನನ್ನ ಶಾಲೆಯ ಅವಧಿಯಲ್ಲಿ ತಾಲೂಕ ಮಟ್ಟದಲ್ಲಿ ಕಬಡ್ಡಿಯನ್ನು ಅಡಿ ಗೆದ್ದ ಕ್ಷಣ ಇಂದಿಗೂ ಸಹ ನನ್ನ ಕಣ್ಮುಂದೆಯೇ ಇದೆ , ಎದುರಾಳಿಯನ್ನು ಹಿಡಿದು ಸೆದೆಬಡಿಯುವುದರಲ್ಲಿನ  ರೋಚಕತೆ ಆಟ  ಆಡುವವನಿಗಿಂತ ನೋಡುಗರಲ್ಲಿನ  ಕುತೂಹಲಕ್ಕೆ ಕಾರಣವಾಗುತ್ತದೆ . 

                      ಅಂತಹದ್ದೇ ಒಂದು ರೋಚಕ ಪಂದ್ಯಾವಳಿಗೆ ಸಾಕ್ಷಿಯಾಗಿದ್ದು ನಮ್ಮ ಮುಳ ಮುತ್ತಲ  ಶಾಲೆಯ ಗಂಡು ಮಕ್ಕಳು . ೧೭ ಆಗಸ್ಟ್ ರಂದು ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ ಕ್ಲಸ್ಟರ್ ಹಂತದ ಕಬಡ್ಡಿಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಬಹುಮಾನ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ , ಈ ಕಬಡ್ಡಿ ಪಂದ್ಯವು ಬಹಳ ರೋಚಕ ವಾಗಿತ್ತು ನಮ್ಮ ಶಾಲೆಯ ಎದುರಾಳಿ ಕುರುಬಗಟ್ಟಿ ಶಾಲೆಯ ವಿದ್ಯಾರ್ಥಿಗಳು , ಅವರನ್ನು ಆಟದಲ್ಲಿ ಹಿಂದಿಕ್ಕಿ ನಮ್ಮ ವಿದ್ಯಾರ್ಥಿಗಳು ಗೆದ್ದು ಬಂದಿದ್ದಾರೆ  ಹಳ್ಳಿಯಲ್ಲಿ ಬೆಳೆಯುವ ಮಕ್ಕಳಿಗೆ ಕಬಡ್ಡಿ ಅಟ  ಎಂದರೆ ಪಂಚ ಪ್ರಾಣ , ಆಟದ ಮೈದಾನಕ್ಕೆ ಇಳಿಯುವಾಗ ಸಹಿತ ನಮಸ್ಕರಿಸಿ ಆಟವನ್ನು ಆಡುವ ಸಂಸ್ಕ್ರತಿ ನಮ್ಮದು . ಅಂತಹ ಕಬಡ್ಡಿ ಆಟದಲ್ಲಿ ಪ್ರಥಮ ಬಹುಮಾನ ಪಡೆದುಕೊಂಡ ನನ್ನ ಎಲ್ಲ ನೆಚ್ಚಿನ ವಿದ್ಯಾರ್ಥಿಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ . 



        

 

Comments

Popular posts from this blog

Vidya Poshak - Yuva Internship 2024 - Application form

TPL - Teachers Premier League🏆🏆

Vidya Poshak Yuva Internship 2023