ಚಿಣ್ಣರ ಅಂಗಳದಲ್ಲಿ ಅರಳಿದ ಅಂಬಾರಿ 🐘🐘

                         ಚಿಣ್ಣರ ಅಂಗಳದಲ್ಲಿ ಅರಳಿದ ಅಂಬಾರಿ 🐘🐘

   

                ದಸರಾ ,,,,,,,,,,,,,,,,,,,,,,,,,,,,,,,

                        ದಸರಾ ಎಂದಾಗ ನೆನಪಿಗೆ ಬರುವುದು ಆನೆ ಹಾಗು ಅಂಬಾರಿ . ದಶಕಗಳ ಇತಿಹಾಸವಿರುವ ಮೈಸೂರು ದಸರಾ ನೋಡುಗರ ಮನ ಸೆಳೆಯುತ್ತದೆ ,  ವರ್ಷಕ್ಕೆ ವಿಭಿನ್ನ ಕಳೆಯ ಮೂಲಕ ಸಾವಿರಾರು ಜನರ ತನುಮನ ಸೆಳೆಯುವ ದಸರಾ ನಡೆಯುವುದು     ೯ ದಿನಗಳ ಕಾಲ , ಈ ೯ ದಿನಗಳನ್ನು ನವರಾತ್ರಿ ಉತ್ಸವ ಎಂದೇ ಆಚರಿಸಲಾಗುತ್ತದೆ ಹಾಗು ೧೦ ನೇ ದಿನವನ್ನು ವಿಜಯದಶಮಿ ಎಂದು ಆಚರಿಸಲಾಗುತ್ತದೆ . ಅಂದು ಚಾಮುಂಡೇಶ್ವರಿ ಮಹಿಷಾಸುರನ ಸಂಹಾರ ಮಡಿದ ದಿನ ಆದ್ದರಿಂದ ೧೦ ನೇ ದಿನವನ್ನು ವಿಜಯದಶಮಿ ಆಗಿ ಆಚರಿಸುತ್ತೇವೆ . 

                 ನಾವು ಚಿಕ್ಕವರಿಂದಾಗಿಯೂ ದಸರಾಕ್ಕೆಂದೇ ರಜೆಯನ್ನು ಕೊಡುವುದು ಸರ್ವೇ ಸಾಮಾನ್ಯವಾಗಿತ್ತು , ೧೫ ದಿನಗಳ ದಸರಾ ರಜೆಯಲ್ಲಿ ನಮ್ಮ ವಿದ್ಯಾಪೋಷಕ ಸಂಸ್ಥೆಯ ಯುವ ಫೆಲೋಶಿಪ್ ನ ವತಿಯಿಂದ ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ೪ ದಿನಗಳ ದಸರಾ ಕ್ಯಾಂಪ್ ನು ಮಾಡಲಾಗುತ್ತದೆ , ಅದಕ್ಕೆ ಸಂಬಂಧಿಸಿದಂತೆ ೪ ದಿನವೂ ವಿಭಿನ್ನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತದೆ . ಹಾಗಾಗಿ ಮೊದಲನೇ ದಿನ ನಮ್ಮ ದಸರಾ ಹಬ್ಬವನ್ನು ಆಚರಣೆ ಮಾಡುವ ಉದ್ದೇಶದಿಂದ ಎಲ್ಲ ಮಕ್ಕಳಿಗೆ ಕ್ಲೇ ಮಾಡಲಿಂಗ್ ಮಾಡಲು ಹೇಳಲಾಯಿತು.  

ಕ್ಯಾಂಪ್ ನ ಮೊದಲನೇ ದಿನವಾದ ಇಂದು ಮಕ್ಕಳಿಗೆ ದಸರಾ ಬಗ್ಗೆ ಪರಿಚಯಿಸುತ್ತ ಎಲ್ಲ ವಿದ್ಯಾರ್ಥಿಗಳಿಗೆ ಆ ನೆ ಹಾಗು ಅಂಬಾರಿಯನ್ನು ಮಣ್ಣಿನಿಂದ ಎಂಆಳು ಹೇಳಲಾಯಿತು , ಮಕ್ಕಳು ಬಹಳ ಸೊಗಸಾಗಿ ಆನೆ ಹಾಗೂ ಅಂಬಾರಿಯ ಚಿತ್ರಣವನ್ನು ಮಣ್ಣಿನಿಂದ ಮಾಡಿದ್ದರು . ಮಕ್ಕಳ ಸಡಗರ ಹಾಗು ಸಂತೋಶವನ್ನು ನೋಡಲು ಎರಡು ಕಣ್ಣು ಸಾಲುತ್ತಿರಲಿಲ್ಲ , ಅಷ್ಟು ಸೊಗಸಾಗಿ ಮಕ್ಕಳ ಕೈಯಲ್ಲಿ ಅರಳಿದ ಅಂಬಾರಿ ಜಂಬೂ ಸವಾರಿಗೆ ಹೋರಾಡಲು ಸಿಂಗಾರಗೊಂದಿತ್ತು. 

ಮಕ್ಕಳಿಗಂತೂ ತಮ್ಮ ಕೈಯಲಿ ಅರಳಿದ ಅಂಬಾರಿಯನ್ನು ತಮ್ಮ ಪಾಲಕರಿಗೆ  ತೋರಿಸುವ ತವಕ , ಆದ್ದರಿಂದ ಎಲ್ಲ ಮಕ್ಕಳು ತಮ್ಮ ತಮ್ಮ ಮಾದರಿಯನ್ನು  ತಂದೆ ತಾಯಿಗೆ ತೋರಿಸುತ್ತೇವೆ ಟೀಚರ್ ಎಂದು ತೆಗೆದುಕೊಂಡು ಹೋದರು ... 





Comments

Popular posts from this blog

Vidya Poshak - Yuva Internship 2024 - Application form

TPL - Teachers Premier League🏆🏆

Vidya Poshak Yuva Internship 2023