ಗುರುಗಳು ಕೇವಲ ಪಾಠ ಕಲಿಸುವವರಲ್ಲ, ಅವರು ಮಕ್ಕಳ ಜೀವನವನ್ನು ರೂಪಿಸುವ ಶಿಲ್ಪಿಗಳು. ನಿಜವಾದ ಗುರು ಎಂದರೆ ಮಕ್ಕಳ ಜೊತೆ ಮಕ್ಕಳಾಗಬಲ್ಲವನು. ಅವರ ಮನಸ್ಸಿನ ಜಗತ್ತಿನಲ್ಲಿ ಹೆಜ್ಜೆ ಹಾಕಿ, ಆಟ, ನಗು, ಕಲಿಕೆ – ಎಲ್ಲದರಲ್ಲೂ ಸಹಪಾಲಿಯಾಗುವವನು.ಮಕ್ಕಳ ನಗುವನ್ನು ಹಂಚಿಕೊಂಡಾಗ, ಅವರ ಸಣ್ಣ ತಪ್ಪುಗಳನ್ನು ಪ್ರೀತಿಯಿಂದ ತಿದ್ದಿದಾಗ, ಅವರ ಕುತೂಹಲದ ಪ್ರಶ್ನೆಗಳಿಗೆ ಉತ್ತರ ಹುಡುಕಿದಾಗ, ಗುರುವು ಮಕ್ಕಳ ಕಣ್ಣಲ್ಲಿ ನಿಜವಾದ ಹೀರೋ ಆಗುತ್ತಾನೆ. ಇಂತಹ ಗುರುಗಳ ಸಾನ್ನಿಧ್ಯದಲ್ಲಿ ಮಕ್ಕಳು ಪಾಠವನ್ನು ಕೇವಲ ಓದು ಮಾತ್ರವಲ್ಲ, ಬದುಕಿನ ಪಾಠವನ್ನು ಕಲಿಯುತ್ತಾರೆ.ಗುರುಗಳು ಮಕ್ಕಳ ಜೊತೆ ಆಟ ಆಡಿದಾಗ, ಹಾಡು ಹಾಡಿದಾಗ, ಹಬ್ಬ-ಕಾರ್ಯಕ್ರಮಗಳಲ್ಲಿ ಬೆರೆತು ಪಾಲ್ಗೊಂಡಾಗ, ಮಕ್ಕಳಿಗೆ ಶಾಲೆ ಎರಡನೇ ಮನೆಯಂತೆ ಅನ್ನಿಸುತ್ತದೆ. ಅವರು ತಿಳಿದುಕೊಳ್ಳುತ್ತಾರೆ – “ನಮ್ಮ ಗುರುಗಳು ಕೇವಲ ಶಿಕ್ಷಕರು ಅಲ್ಲ, ನಮ್ಮ ಜೊತೆ ನಿಂತು ದಾರಿದೀಪವಾಗಿರುವ ಅಪ್ಪ-ಅಮ್ಮರಂತವರು.”ಮಕ್ಕಳ ಹೃದಯ ಗೆಲ್ಲುವ ಗುರುಗಳ ಕೈ ಹಿಡಿದಾಗ, ಕಲಿಕೆಯ ಹಾದಿ ಸುಲಭವಾಗುತ್ತದೆ. ಅಲ್ಲಿ ಪುಸ್ತಕದ ಜ್ಞಾನಕ್ಕಿಂತಲೂ ಹೆಚ್ಚು ಪ್ರೀತಿಯ ಪಾಠ, ಸಹನೆಯ ಪಾಠ, ಒಗ್ಗಟ್ಟಿನ ಪಾಠ ಮಕ್ಕಳು ಕಲಿಯುತ್ತಾರೆ.