ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು..
ನಮ್ಮ GHPS ಮಂಗಳಗಟ್ಟಿ ಶಾಲೆಯಲ್ಲಿ ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವವನ್ನು ತುಂಬಾ ಹರ್ಷದಿಂದ ಆಚರಿಸಲಾಯಿತು. ಬೆಳಗ್ಗೆ ಶಾಲೆಗೆ ಬಂದ ತಕ್ಷಣ ಎಲ್ಲರೂ ಕನ್ನಡದ ಧ್ವಜ ಮತ್ತು ಹೂಗಳಿಂದ ಅಲಂಕರಿಸಿದ್ದ ವೇದಿಕೆಯನ್ನು ನೋಡಿ ತುಂಬಾ ಸಂತೋಷ ಆಯ್ತು. ಮೊದಲು ನಾವು ಪ್ರಾರ್ಥನೆ ಮಾಡಿದೆವು. ನಂತರ ಎಲ್ಲರೂ ಸೇರಿ “ಜಯ ಭಾರತ ಜನನಿಯ ತನುಜಾತೆ” ನಾಡಗೀತೆ ಹಾಡಿದೆವು. ಆ ಸಮಯದಲ್ಲಿ ನಮ್ಮೆಲ್ಲರ ಮನದಲ್ಲಿ ನಾಡಿನ ಬಗ್ಗೆ ಹೆಮ್ಮೆ ತುಂಬಿತು. ನಂತರ ಕಾರ್ಯಕ್ರಮ ಶುರು ಆಯ್ತು. ಕೆಲವರು ಕವನ ಹೇಳಿದರು, ಕೆಲವರು ನೃತ್ಯ ಮಾಡಿದರು. ನಮ್ಮ ಶಾಲೆಯ ಮಕ್ಕಳು ಕನ್ನಡ ಹಾಡುಗಳು ತುಂಬಾ ಚೆನ್ನಾಗಿ ಹಾಡಿದರು. ಎಲ್ಲರೂ ತುಂಬಾ ಆನಂದಪಟ್ಟರು. ರಾಮನಗೌಡ ಸರ್ ರಾಜ್ಯೋತ್ಸವದ ಮಹತ್ವದ ಬಗ್ಗೆ ಹೇಳಿದರು ನಾವು ಕನ್ನಡವನ್ನು ಪ್ರೀತಿಸಬೇಕು, ಮಾತನಾಡಬೇಕು, ಮತ್ತು ನಮ್ಮ ಸಂಸ್ಕೃತಿಯನ್ನು ಉಳಿಸಬೇಕು ಎಂದು ತಿಳಿಸಿದರು. ಅವರ ಮಾತು ತುಂಬಾ ಪ್ರೇರಣಾದಾಯಕವಾಗಿತ್ತು. ಕೊನೆಯಲ್ಲಿ ಎಲ್ಲರೂ ಸೇರಿ “ಜಯ ಕರ್ನಾಟಕ ಮಾತೆ” ಎಂದು ಘೋಷಣೆ ಮಾಡಿದೆವು. ಆ ಕ್ಷಣ ನಮ್ಮೆಲ್ಲರಿಗೂ ತುಂಬಾ ಹೆಮ್ಮೆಯಾಗಿದೆ.


Comments
Post a Comment