ಕನಕದಾಸರ ದಿವ್ಯ ನುಡಿಮುತ್ತಿನ ನೆನಪು
ಕನಕದಾಸ ಜಯಂತಿಯ ಸಂದರ್ಭದಲ್ಲಿ ನಾವು ಬೆಳಿಗ್ಗೆ ಶಾಲೆಗೆ ಮೊದಲೇ ಹೋದೆವು. ಮೊದಲು ಶಾಲಾ ಆವರಣವನ್ನು ಸ್ವಚ್ಛಗೊಳಿಸಿ, ರಂಗೋಲಿ ಹಾಕಿ ಕಾರ್ಯಕ್ರಮಕ್ಕೆ ತಯಾರಿ ಮಾಡಿದೆವು. ನಂತರ ಕನಕದಾಸರ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿದೆವು.ನಂತರ ನಾನು ನನ್ನ ವಿದ್ಯಾರ್ಥಿಗಳಿಗೆ ಕನಕದಾಸರ ಜೀವನ, ಅವರ ಭಕ್ತಿ, ಸರಳತೆ ಮತ್ತು ಸಮಾಜಸೇವೆಯ ಬಗ್ಗೆ ವಿವರವಾಗಿ ತಿಳಿಸಿದೆ. ಅದರ ನಂತರ ವಿದ್ಯಾರ್ಥಿಗಳು ಕನಕದಾಸರ ಬಗ್ಗೆ ಭಾಷಣಗಳನ್ನು ಮಾಡಿದರು ಮತ್ತು ಅವರ ಕೀರ್ತನೆಗಳನ್ನು ಗಾನಿಸಿದರು. SDMC ಸದಸ್ಯರು ಮತ್ತು ಗ್ರಾಮಸ್ಥರು ಶಾಲೆಗೆ ಬಂದು ಕಾರ್ಯಕ್ರಮಕ್ಕೆ ಗೌರವ ಹೆಚ್ಚಿಸಿದರು.
ಎಲ್ಲರೂ ಸೇರಿ ಕನಕದಾಸರ ಜೀವನ ಮೌಲ್ಯಗಳನ್ನು ಸ್ಮರಿಸಿ, ಅವರ ಕೀರ್ತನೆಗಳ ನಾದದಲ್ಲಿ ಮನಸ್ಸನ್ನು ತೊಳೆದುವಂತೆ ಅನುಭವಿಸಿದರು. ನಂತರ ವಿದ್ಯಾರ್ಥಿಗಳು ಕನಕದಾಸರ ಜೀವನಾಧಾರಿತ ಸುಂದರ ನೃತ್ಯ ಮತ್ತು ನಾಟಕ ಪ್ರದರ್ಶನ ಮಾಡಿದರು. ಗ್ರಾಮಸ್ಥರು ಮತ್ತು SDMC ಸದಸ್ಯರು ನಮ್ಮ ವಿದ್ಯಾರ್ಥಿಗಳ ಪ್ರತಿಭೆಯನ್ನು ಮೆಚ್ಚಿ ಉತ್ತಮ ಮಾತುಗಳನ್ನು ಹೇಳಿದರು. ಕನಕದಾಸರ ಸಾಧನೆಗಳು, ಅವರ ಕೀರ್ತನೆಗಳು ಮತ್ತು ಸಮಾಜಕ್ಕೆ ನೀಡಿದ ಸಂದೇಶಗಳು ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.
Comments
Post a Comment