🎉 ಮಕ್ಕಳ ದಿನಾಚರಣೆ ಹಾಗೂ ಪಾಲಕರ–ಪೋಷಕರ ಮಹಾಸಭೆ
ನಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಪಾಲಕರ–ಪೋಷಕರ ಮಹಾಸಭೆಯನ್ನು ಹಮ್ಮಿಕೊಂಡಿದೆವು. ಮಹಾಸಭೆಗೆ ಶಾಲೆಯ ಎಲ್ಲ ಪೋಷಕರು ಹಾಗೂ ಪಾಲಕರು ಹಾಜರಿದ್ದರು. ಸಭೆಯನ್ನು ನಾವು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹರ್ಷದಿಂದ ಪ್ರಾರಂಭಿಸಿದೆವು. ಮೊದಲು ನಾವು ಮಕ್ಕಳ ದಿನದ ಮಹತ್ವವನ್ನು ಪೋಷಕರಿಗೆ ವಿವರಿಸಿದೆವು. ಮಕ್ಕಳ ಹಕ್ಕುಗಳು, ಸುರಕ್ಷತೆ, ಶಿಕ್ಷಣದ ಅಗತ್ಯತೆ ಮತ್ತು ದಿನನಿತ್ಯದ ಕಲಿಕೆ ಬಗ್ಗೆ ಸರಳವಾಗಿ ಚರ್ಚಿಸಿದೆವು.
ಪೋಷಕರ ಜೊತೆ ಮಕ್ಕಳ ಅಧ್ಯಯನ, ಶಿಸ್ತಿನ ಅಭ್ಯಾಸ, ಹಾಜರಾತಿ, ಸ್ವಚ್ಛತೆ ಮತ್ತು ಶಾಲಾ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ ಮಾತುಕತೆ ನಡೆಸಿದೆವು. ಕೆಲವು ಪೋಷಕರು ತಮ್ಮ ಸಲಹೆಗಳು ಮತ್ತು ಅಭಿಪ್ರಾಯಗಳನ್ನು ಹಂಚಿಕೊಂಡರು.


Comments
Post a Comment