ಭಾರತೀಯ ಸಂವಿಧಾನ ದಿನಾಚರಣೆ – GHPS Devarahubballi
GHPS Devarahubballi ಶಾಲೆಯಲ್ಲಿ ನಾವು ಭಾರತೀಯ ಸಂವಿಧಾನ ದಿನವನ್ನು ಗೌರವದಿಂದ ಹಾಗೂ ಶ್ರದ್ಧೆಯಿಂದ ಆಚರಿಸಲಾಯಿತು. ಬೆಳಗಿನ ಪ್ರಾರ್ಥನಾ ಸಭೆಯಲ್ಲೇ ಕಾರ್ಯಕ್ರಮ ಶುರುವಾಯಿತು. ನಮ್ಮ ವಿದ್ಯಾರ್ಥಿಗಳು ಸಂವಿಧಾನದ ಭಾಗಗಳನ್ನು ತುಂಬ ಸ್ಪಷ್ಟವಾಗಿ ಮತ್ತು ಸರಿಯಾದ ರೀತಿಯಲ್ಲಿ ವಾಚಿಸಿ ಕಾರ್ಯಕ್ರಮಕ್ಕೆ ವಿಶೇಷತೆ ತಂದರು.
ಶಾಲೆಯ ಒಬ್ಬ ಶಿಕ್ಷಕರು ಸಂವಿಧಾನದ ಮಹತ್ವ, ಅದರ ಇತಿಹಾಸ ಮತ್ತು ವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಕೊಡುಗೆ ಕುರಿತು ವಿದ್ಯಾರ್ಥಿಗಳಿಗೆ ಹಂಚಿಕೊಂಡರು. ವಿದ್ಯಾರ್ಥಿಗಳು ಆಸಕ್ತಿಯಿಂದ ಆ ಉಪನ್ಯಾಸವನ್ನು ಆಲಿಸಿ ಸಂವಿಧಾನದ ಬಗ್ಗೆ ಉತ್ತಮ ಜ್ಞಾನ ಪಡೆದರು.
ಈ ಸಂದರ್ಭದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಚಿತ್ರಕ್ಕೆ ಪೂಜೆ ಸಲ್ಲಿಸಿ ಅವರ ಮಹತ್ವವನ್ನು ಸ್ಮರಿಸಲಾಯಿತು.
ಕಾರ್ಯಕ್ರಮದ ಭಾಗವಾಗಿ 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಶ್ನೋತ್ತರ ಸ್ಪರ್ಧೆ ಆಯೋಜಿಸಲಾಗಿತ್ತು. ಸಂವಿಧಾನ, ಮುಲಭೂತ ಹಕ್ಕುಗಳು, ಕರ್ತವ್ಯಗಳು ಮತ್ತು ರಾಷ್ಟ್ರೀಯ ಚಿಹ್ನೆಗಳ ಕುರಿತು ಪ್ರಶ್ನೆಗಳು ಕೇಳಲಾಯಿತು. ಮಕ್ಕಳು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಒಟ್ಟಿನಲ್ಲಿ, ನಮ್ಮ ಶಾಲೆಯಲ್ಲಿನ ಸಂವಿಧಾನ ದಿನಾಚರಣೆ ಶೈಕ್ಷಣಿಕವಾಗಿಯೂ ಪ್ರೇರಣಾತ್ಮಕವಾಗಿಯೂ ನಡೆದಿದ್ದು, ವಿದ್ಯಾರ್ಥಿಗಳಲ್ಲಿ ಸಮತೆ, ನ್ಯಾಯ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಎಂಬ ಸಂವಿಧಾನದ ಮೌಲ್ಯಗಳನ್ನು ಪರಿಚಯಿಸಿತು.
Comments
Post a Comment